ಕಲ್ಯಾಣ್ ಜ್ಯುವೆಲರ್ಸ್, ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದುಈ ಸಂಸ್ಥೆಯೂ, ಇದರ ಸ್ಥಾಪಕ ಟಿ.ಎಸ್ ಕಲ್ಯಾಣರಾಮನ್ ಅವರ ಶ್ರಮ, ಉತ್ಸಾಹ ಮತ್ತು ಶ್ರದ್ಧೆಯ ಪ್ರತಿಬಿಂಬವಾಗಿದೆ.
ಕಲ್ಯಾಣರಾಮನ್ ಅವರು ದೇಶದ ಸಿರಿವಂತ ಆಭರಣ ವ್ಯಾಪಾರಿಗಳಲ್ಲಿ ಒಬ್ಬರಾಗಿರುವುದು ಮಾತ್ರವಲ್ಲದೇ ತಮ್ಮ ಅತಿರಂಜಿತ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ಇವರು ಸುಮಾರು 25 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೂರು ರೋಲ್ಸ್ ರಾಯ್ಸ್ ಕಲಿನನ್ ಎಸ್‌ಯುವಿ ಕಾರುಗಳನ್ನು ಖರೀದಿಸಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ eisk77 ಹಂಚಿಕೊಂಡ ವೀಡಿಯೊ ಪ್ರಕಾರ, ಟಿಎಸ್ ಕಲ್ಯಾಣರಾಮನ್ ಒಂದು ಕಪ್ಪು ಬ್ಯಾಡ್ಜ್ ಮತ್ತು ಎರಡು ರೆಗ್ಯೂಲರ್ ರೋಲ್ಸ್ ರಾಯ್ಸ್ ಕುಲಿನನ್ ಎಸ್‌ಯುವಿಗಳನ್ನು ಖರೀದಿಸಿದ್ದಾರೆ. ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಇದನ್ನು ಮ್ಯಾಗ್ಮಾ ರೆಡ್ ಶೇಡ್‌ನಲ್ಲಿದ್ದು, ರೆಗ್ಯೂಲರ್ ರೋಲ್ಸ್ ರಾಯ್ಸ್ ಮಿಡ್‌ನೈಟ್ ಸಫೈರ್ ಮತ್ತು ಡೈಮಂಡ್ ಬ್ಲ್ಯಾಕ್ ಶೇಡ್‌ಗಳನ್ನು ಹೊಂದಿದೆ. ಎಸ್ ಕಲ್ಯಾಣರಾಮನ್ ಅವರಿಗೆ ಹೈ-ಎಂಡ್ ಕಾರುಗಳ ಬಗ್ಗೆ ಅತೀವ ಆಸಕ್ತಿ. ಇವರ ಕಲೆಕ್ಷನ್ ನಲ್ಲುಈಗಾಗಲೇ ಮೂರು ರೋಲ್ಸ್ ರಾಯ್ಸ್ ಕಾರುಗಳಿವೆ. ಇದರಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಸಿರೀಸ್ I ಮತ್ತು ಎರಡು ಫ್ಯಾಂಟಮ್ ಸಿರೀಸ್ II ಮಾಡೆಲ್ ಗಳಿವೆ.

ಆರು ಅತಿ ದುಬಾರಿಯಾಗಿರುವ ರೋಲ್ಸ್ ರಾಯ್ಸ್ ಹೊರತಾಗಿ, ಕಲ್ಯಾಣರಾಮನ್ ಅವರು, ಪ್ರೈವೆಟ್ ಜೆಟ್ ಮತ್ತು ಹೆಲಿಕಾಪ್ಟರ್ ನ ಒಡೆಯರಾಗಿದ್ದಾರೆ. ಪ್ರೈವೆಟ್ ಜೆಟ್ ಎಂಬ್ರೇರ್ ಲೆಗಸಿ 650 ಮೌಲ್ಯ 178 ಕೋಟಿ ರೂ. ಆಗಿದ್ದು, ಇನ್ನು ಇವರ ಬಳಿ ಇರುವ ಬೆಲ್ 427 ಹೆಲಿಕಾಪ್ಟರ್ ಕೆನಡಾದಲ್ಲಿ ತಯಾರಾಗಿದ್ದು, ಇದರ ಸುಮಾರು 48 ಕೋಟಿ ರೂ. ಆಗಿದೆ.
ಕಲ್ಯಾಣ್ ಜ್ಯುವೆಲರ್ಸ್‌ನ ಮಳಿಗೆಗಳು ಭಾರತದಾದ್ಯಂತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಮಳಿಗೆಗಳನ್ನು ಹೊಂದಿದೆ. ಕಲ್ಯಾಣರಾಮನ್ ಅವರು ತಮ್ಮ ವೃತ್ತಿಪರ ಪ್ರಯಾಣವನ್ನು 12 ನೇ ವಯಸ್ಸಿನಲ್ಲಿಯೇ ಆರಂಭಿಸಿದರು. ವ್ಯವಹಾರದಲ್ಲಿ ಅವರ ತಂದೆಯೇ ಮೊದಲ ಗುರುವಾಗಿ, ವ್ಯಾಪಾರಕ್ಕೆ ಬೇಕಾಗಿರುವ ತಂತ್ರಗಳನ್ನು ಕಲಿಸಿದ್ದರು. ಕಲ್ಯಾಣರಾಮನ್ ಪ್ರಸ್ತುತ ಭಾರತದ ಅತಿದೊಡ್ಡ ರಿಟೇಲ್ ಆಭರಣ ಮಳಿಗೆಗಳ ಮಾಲೀಕರಾಗಿದ್ದು, ತಮ್ಮ ಮಳಿಗೆಯನ್ನು 1993 ರಲ್ಲಿ ಆರಂಭಿಸಿದರು.
ಇಂದು ಭಾರತದಾದ್ಯಂತ 200 ಕ್ಕೂ ಹೆಚ್ಚು ಕಲ್ಯಾಣ್ ಜ್ಯುವೆಲ್ಲರ್ಸ್‌ನ ಔಟ್‌ಲೆಟ್‌ಗಳು ಇದ್ದು, ಇದರೊಂದಿಗೆ ಯುಎಇ, ಕತಾರ್, ಕುವೈತ್ ಮತ್ತು ಓಮನ್ ಸೇರಿ ವಿದೇಶದಲ್ಲಿ 30 ಶೋರೂಮ್‌ಗಳು ಸೇರಿ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದೆ.

ಕಲ್ಯಾಣರಾಮನ್ ಮೂಲತಃ ಕೇರಳದ ಸಣ್ಣ ಪಟ್ಟಣದಿಂದ ಬಂದವರಾಗಿದ್ದು, ಕಲ್ಯಾಣರಾಮನ್ ಅವರ ವ್ಯಾಪಾರ ಸಾಮ್ರಾಜ್ಯವು 17,000 ಕೋಟಿ ರೂ. ಮೀರಿದ ಮಾರುಕಟ್ಟೆ ಬಂಡವಾಳವಾಗಿ ಬೆಳೆದು ನಿಂತಿದೆ. ಒಂದು ಕಾಲದಲ್ಲಿ ಸಣ್ಣ ಉದ್ಯಮಿಯಾಗಿದ್ದ ಟಿಎಸ್ ಕಲ್ಯಾಣರಾಮನ್ ಅವರು ಈಗ ಭಾರತದ ಅತ್ಯಂತ ಶ್ರೀಮಂತ ಆಭರಣ ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದು, ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯ ಸುಮಾರು 2.8 ಬಿಲಿಯನ್ ಡಾಲರ್ ಆಗಿದೆ.


Click it and Unblock the Notifications