ನವದೆಹಲಿ, ಏಪ್ರಿಲ್ 8: ಮದ್ಯದ ಅಂಗಡಿ & ಮದ್ಯ ತಯಾರಿಸುವವರಿಗೆ ಎಂದಿಗೂ ಲಾಸ್ ಆಗಲ್ಲ ಅನ್ನೋ ಮಾತುಗಳನ್ನ ಆಗಾಗ ನಾವು ಕೇಳಿರುತ್ತೇವೆ. ಅದೇ ರೀತಿ ಎಣ್ಣೆ ವಿಚಾರದಲ್ಲಿ ಎಂದರೆ ಡಿಂಕ್ಸ್ ವಿಚಾರದಲ್ಲಿ ಸರ್ಕಾರಕ್ಕೆ ಕೂಡ ಅತಿಹೆಚ್ಚು ಲಾಭ ಹೋಗುತ್ತದೆ. ಹೀಗಿದ್ದಾಗ ಬಿಯರ್ ತಯಾರಿ ಮಾಡುವ ಕಂಪನಿ ಒಂದು ಬರೋಬ್ಬರಿ 263 ಕೋಟಿ ರೂಪಾಯಿ ಬಾಕಿ ಇಟ್ಟುಕೊಂಡಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿಬಂದಿದೆ.
ಬಿಯರ್ ತಯಾರಿಸುವ ಕಂಪನಿ ಆದ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‌ಗೆ ತೆರಿಗೆ ಮತ್ತು ಬಡ್ಡಿ ಹಾಗೇ ದಂಡ ಸೇರಿದಂತೆ ಒಟ್ಟು ₹263 ಕೋಟಿ ಮೊತ್ತ ಪಾವತಿಸುವಂತೆ ಮಹಾರಾಷ್ಟ್ರದ ಸರಕು ಮತ್ತು ಸೇವಾ ಇಲಾಖೆ ಇದೀಗ ದಿಢೀರ್ ನೋಟಿಸ್ ಒಂದನ್ನ ಜಾರಿ ಮಾಡಿದೆ. 2019 & 20ನೇ ಮೌಲ್ಯ ಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ವಿಭಾಗದ ಉಪ ಆಯುಕ್ತರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು, ಹೀಗೆ ನೋಟಿಸ್ ಬಂದಿರುವ ಬಗ್ಗೆಯೂ ಕಂಪನಿಯಿಂದ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ 263 ಕೋಟಿ ರೂಪಾಯಿ ನೋಟಿಸ್ ವಿಚಾರ ಸದ್ದನ್ನೂ ಮಾಡುತ್ತಿದ್ದು, ಗಮನ ಕೂಡ ಸೆಳೆಯುತ್ತಿದೆ.

ದಂಡ ಹಾಕಲು ಕಾರಣ ಏನು?
ಇನ್ನು ಮತ್ತೊಂದು ಕಡೆ ತೆಲಂಗಾಣ ರಾಜ್ಯ ಪಾನೀಯ ನಿಗಮ, ಕರ್ನಾಟಕ ರಾಜ್ಯ ಪಾನೀಯ ನಿಗಮ, ಆಂಧ್ರ ರಾಜ್ಯ ಪಾನೀಯ ನಿಗಮಕ್ಕೆ ಕಂಪನಿ ಕಡೆಯಿಂದ ಸಲ್ಲಿಸಿರುವ ಡೆಬಿಟ್ ನೋಟ್ ದಾಖಲೆಗೆ ಸಂಬಂಧಿಸಿದಂತೆ ವಿಧಿಸಿರುವ ಶೇಕಡಾ 60 ರಷ್ಟು ಕೇಂದ್ರ ಸೇವಾ ತೆರಿಗೆ ಮೊತ್ತ ಇದು ಎಂದು ವಿವರಣೆ ಕೂಡ ನೀಡಲಾಗಿದೆ. ಹಾಗೇ ಈ ಕುರಿತು, ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು. ಈ ನೋಟಿಸ್‌ನಿಂದ ಕಂಪನಿಯ ಆರ್ಥಿಕ ಚಟುವಟಿಕೆ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ, ಎಂದು ಸಂಸ್ಥೆ ಇದೀಗ ಸ್ಪಷ್ಟನೆ ಕೂಡ ನೀಡಿದೆ. ಆದರೂ ಈ ನೋಟಿಸ್ ವಿಚಾರ ಈಗ ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ.
ಹಿಂದೆ ಕೂಡ ಹೀಗೆ ಆಗಿತ್ತು?
2018 & 2019ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿ ₹ 275 ಕೋಟಿ ತೆರಿಗೆ ಪಾವತಿಸುವಂತೆ ಇಲಾಖೆ ನೋಟಿಸ್ ನೀಡಿತ್ತು. ಇದರ ವಿರುದ್ಧವೂ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದೆ ಕಂಪನಿ. ಈ ಮೂಲಕ ಕಾನೂನು ಹೋರಾಟಕ್ಕೆ ಕಂಪನಿ ಸಿದ್ಧತೆ ನಡೆಸಿದೆ. ಮತ್ತೊಂದ್ಕಡೆ ಈ ಬಗ್ಗೆ ಅಧಿಕಾರಿಗಳು ಕೂಡ ಕಠಿಣ ಕ್ರಮ ಕೈಗೊಳ್ಳುವ ಚಿಂತನೆಯಲ್ಲಿ ಇದ್ದಾರೆ. ಆದರೆ, ಈ ವಿಚಾರದಲ್ಲಿ ಯಾವುದೇ ತಪ್ಪು ನಡೆದಿಲ್ಲ. ಹೀಗಾಗಿ ಕಾನೂನು ಹೋರಾಟದ ಮೂಲಕ ಉತ್ತರ ನೀಡಲು ಕಂಪನಿ ಮುಂದಾಗಿದೆ. ಹೀಗಾಗಿ ಈ ಹೋರಾಟದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು? ಎಂಬ ಕುತೂಹಲ ದುಪ್ಪಟ್ಟಾಗಿದೆ.


Click it and Unblock the Notifications