ವಿಶ್ವದಲ್ಲೇ ಅತೀ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಹೊಂದಿರುವ ಭಾರತದಲ್ಲಿ ಸದ್ಯ ಡಿಜಿಟಲ್ ಇಂಡಿಯಾ ಯೋಜನೆ ಆರಂಭವಾದ ಬಳಿಕವಂತೂ ನವೋದ್ಯಮಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಒಂದು ಕಾಲದಲ್ಲಿ ಉದ್ಯೋಗ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೆ ಸದ್ಯ ಉದ್ಯೋಗ ನೀಡುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇನ್ನು ಮೂಲಗಳ ಪ್ರಕಾರ ಭಾರತದಲ್ಲಿ 2024ರ ಹಣಕಾಸು ವರ್ಷದಲ್ಲಿ 28 ಆಧುನಿಕ ಸ್ಟಾರ್ಟಪ್‌ಗಳ 51 ಸಂಸ್ಥಾಪಕರು ವಾರ್ಷಿಕ ವೇತನದ ರೂಪದಲ್ಲಿ ಸುಮಾರು 283.5 ಕೋಟಿ ರೂ. ವೇತನ ಪಡೆದಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಆರಂಭಿಕ ಸಂಸ್ಥಾಪಕರ ಸರಾಸರಿ ವೇತನವು ವರ್ಷದಿಂದ ವರ್ಷಕ್ಕೆ (YoY) ಆಧಾರದ ಮೇಲೆ 26.9 ಶೇಕಡಾ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಅಂದರೆ 2023ರ ಹಣಕಾಸು ವರ್ಷದಲ್ಲಿ ವಾರ್ಷಿಕ ಸರಾಸರಿ ವೇತನವು 7.6 ಕೋಟಿ ರೂ. ಆಗಿದ್ದರೆ ಪ್ರಸಕ್ತ ವರ್ಷ ಅಂದರೆ 2024ರ ಹಣಕಾಸು ವರ್ಷದಲ್ಲಿ ಇದು 5.55 ಕೋಟಿ ರೂ.ಗಳಿಗೆ ಇಳಿಕೆಯಾಗಿರುವುದು ದಾಖಲಾಗಿದೆ.

ಸರಾಸರಿ ವೇತನದಲ್ಲಿ ಇಳಿಕೆ
ಇನ್ನು ಆಧುನಿಕ ಸ್ಟಾರ್ಟ್ ಅಪ್‌ಗಳು ಬಹುತೇಕ ಎಲ್ಲಾ ವಲಯಗಳಿಂದ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ. ಇ-ಕಾಮರ್ಸ್ ಸ್ಟಾರ್ಟ್ ಅಪ್ ಸಂಸ್ಥೆ ಫಸ್ಟ್ ಕ್ರೈ ಸಂಸ್ಥಾಪಕರಾದ ಸುಪಮ್ ಮಹೇಶ್ವರಿ ಅವರು ಪ್ರಸಕ್ತ ಹಣಕಾಸು ವರ್ಷ ಅಂದರೆ 2024ರಲ್ಲಿ ವಾರ್ಷಿಕ ಸರಾಸರಿ 103.8 ಕೋಟಿ ರೂ. ವೇತನ ಪಡೆದಿದ್ದು, ಕಳೆದ ವರ್ಷಕ್ಕಿಂತ ಕಡಿಮೆಯಾಗಿರುವುದು ಕಂಡುಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2023ರಲ್ಲಿ ಸುಪಮ್ ಮಹೇಶ್ವರಿ ಅವರು ಬರೊಬ್ಬರಿ 200.7 ಕೋಟಿ ರೂ. ಸರಾಸರಿ ವೇತನ ಪಡೆದುಕೊಂಡಿದ್ದಾರೆ. ಹಾಗಾಗಿ ಸುಮಾರು 50 ಪ್ರತಿಶತ ಸರಾಸರಿ ವೇತನದಲ್ಲಿ ಕಡಿಮೆಯಾಗಿರುವುದು ದಾಖಲಾಗಿದೆ.
ನಷ್ಟ ಕಂಡಿರುವ ಫಸ್ಟ್ ಕ್ರೈ
ಪ್ರಸಕ್ತ ಹಣಕಾಸು ವರ್ಷದಲ್ಲಿ FirstCry ನ ಕಾರ್ಯಾಚರಣೆಯ ಆದಾಯವು 6,480 ಕೋಟಿ ರೂ.ಗಳಾಗಿದ್ದು, ಈ ಮೂಲಕ ಈ ಅವಧಿಯಲ್ಲಿ ಕಂಪೆನಿಯು 321.5 ಕೋಟಿ ರೂ.ಗಳ ನಷ್ಟವನ್ನು ಕಂಡಿದೆ. ಅತ್ತ ಝೆರೋಧಾ ಸಂಸ್ಥಾಪಕರಾದ ನಿಖಿಲ್ ಮತ್ತು ನಿತಿನ್ ಕಾಮತ್ ಪ್ರಸಕ್ತ ಹಣಕಾಸು ವರ್ಷದ ನಷ್ಟ ಅನುಭವಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಕಳೆದ ಆರ್ಥಿಕ ವರ್ಷದಲ್ಲಿ ಇಬ್ಬರು ಸಹೋದರರು ವಾರ್ಷಿಕ 33.8 ಕೋಟಿ ರೂ.ಗಳ ವಾರ್ಷಿಕ ವೇತನವನ್ನು ಪಡೆದುಕೊಂಡಿದ್ದಾರೆ. ಆದರೆ ಕಳೆದ ಹಣಕಾಸು ವರ್ಷದಲ್ಲಿ ಇಬ್ಬರೂ ಕೂಡ ತಲಾ 48 ಕೋಟಿ ರೂಪಾಯಿಗಳ ವೇತನ ಪಡೆದುಕೊಂಡಿದ್ದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ Zerodha ಸಂಸ್ಥೆಯ ನಿರ್ವಹಣಾ ಆದಾಯವು 9,372.1 ಕೋಟಿ ರೂಪಾಯಿಗಳಾಗಿದ್ದು, ಈ ಅವಧಿಯಲ್ಲಿ ಕಂಪನಿಯು 5,496.3 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ. ಇನ್ನು ಕ್ಯಾಪಿಲರಿ ಟೆಕ್ನಾಲಜೀಸ್ ಸಂಸ್ಥಾಪಕ ಅನೀಶ್ ರೆಡ್ಡಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಅನೀಶ್ ರೆಡ್ಡಿ ಅವರು 13.3 ಕೋಟಿ ರೂಪಾಯಿಗಳ ಸಂಬಳವನ್ನು ತೆಗೆದುಕೊಂಡಿದ್ದಾರೆ. ಆದರೆ ಇದೇ ಅನೀಶ್ ಅವರು ಕಳೆದ ಹಣಕಾಸು ವರ್ಷದಲ್ಲಿ ವಾರ್ಷಿಕ 84 ಲಕ್ಷ ರೂ. ವೇತನ ಪಡೆದುಕೊಂಡಿದ್ದು, ಹಾಗಾಗಿ ಪ್ರಸಕ್ತ ವರ್ಷದಲ್ಲಿ ಪಡೆದ ವೇತನವು ಬರೊಬ್ಬರಿ 1,480 ಪಟ್ಟು ಹೆಚ್ಚಾಗಿದೆ.
ಹೋಟೆಲ್ ಸಾಫ್ಟ್‌ವೇರ್ ಕಂಪನಿ RateGin ಸಂಸ್ಥಾಪಕ ಭಾನು ಚೋಪ್ರಾ ಅವರು ಕಳೆದ ಹಣಕಾಸು ವರ್ಷದಲ್ಲಿ 6.1 ಕೋಟಿ ರೂಪಾಯಿ ವೇತನ ಪಡೆದುಕೊಂಡಿದ್ದರೆ ಈ ಬಾರಿ ಕಡಿಮೆಯಾಗಿದೆ. ಅಂದರೆ ಈ ಬಾರಿ ಅವರು 5.8 ಕೋಟಿ ರೂಪಾಯಿಗಳನ್ನು ವೇತನವಾಗಿ ಪಡೆದಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ RateGain ನ ನಿರ್ವಹಣಾ ಆದಾಯವು ಶೇಕಡಾ 69 ರಷ್ಟು ವಿಸ್ತರಿಸಿ 957 ಕೋಟಿ ರೂಪಾಯಿಗಳಿಗೆ ತಲುಪಿದೆ. ಅಂದರೆ ಈ ಅವಧಿಯಲ್ಲಿ ಕಂಪೆನಿಯು 146.3 ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿದೆ.
ಇನ್ನು Paytm ಸಂಸ್ಥೆಯ MD ಮತ್ತು CEO ವಿಜಯ್ ಶೇಖರ್ ಶರ್ಮಾ ಅವರು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ 4.4 ಕೋಟಿ ರೂಪಾಯಿಗಳ ವಾರ್ಷಿಕ ವೇತನವನ್ನು ತೆಗೆದುಕೊಂಡಿದ್ದಾರೆ. ಆದರೆ ಕಳೆದ ಹಣಕಾಸು ವರ್ಷದಲ್ಲಿ ಅವರು 4 ಕೋಟಿ ರೂ.ಗಳ ವೇತನ ಪಡೆದಿದ್ದರು. ಈ ಮೂಲಕ 10 ಪ್ರತಿಶತ ಏರಿಕೆ ಕಂಡಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ Mamaearth CEO ವರುಣ್ ಅಲಗ್ ಅವರ ವಾರ್ಷಿಕ ವೇತನವು 3.97 ಕೋಟಿ ರೂ.ಗಳಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಬರೊಬ್ಬರಿ 166.9 ರಷ್ಟು ಹೆಚ್ಚಾಗಿದೆ.
ಅಂದರೆ ಕಳೆದ ಬಾರಿ ಅಲಗ್ ಅವರು 1.49 ಕೋಟಿ ರೂ. ವಾರ್ಷಿಕ ವೇತನ ಪಡೆದುಕೊಂಡಿದ್ದರು. ಇನ್ನು ಇದೇ ಅವಧಿಯಲ್ಲಿ ಅವರ ಪತ್ನಿ, ಸಂಸ್ಥೆಯ ಸಹ ಸಂಸ್ಥಾಪಕಿ ಅವರು ಪ್ರಸಕ್ತ ವರ್ಷದಲ್ಲಿ 1.79 ಕೋಟಿ ರೂ. ವೇತನ ಪಡೆದಿದ್ದಾರೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ 80.8 ಪ್ರತಿಶತ ಹೆಚ್ಚಾಗಿದೆ. ಕಳೆದ ವರ್ಷದಲ್ಲಿ ಅವರು 99 ಲಕ್ಷ ರೂ. ವೇತನ ಪಡೆದುಕೊಂಡಿದ್ದರು. ಇನ್ನು ಪ್ರಸಕ್ತ ವರ್ಷದಲ್ಲಿ Mamaearth ನ ನಿರ್ವಹಣಾ ಆದಾಯವು 1,919.9 ಕೋಟಿ ರೂಪಾಯಿಗಳಾಗಿದ್ದು, ಈ ಅವಧಿಯಲ್ಲಿ ಕಂಪೆನಿಯು 110.5 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications