ಬೆಂಗಳೂರು, ಜೂನ್ 6: ಭಾರತದಲ್ಲಿ ಬಹಳಷ್ಟು ಐಐಟಿ ಪದವೀಧರರು ತಮ್ಮದೇ ಉದ್ಯಮ ಸ್ಥಾಪಿಸಿ ಹೆಸರುವಾಸಿಯಾಗಿದ್ದಾರೆ. ಇಂತಹ ಪದವೀಧರರು ಟೆಕ್ ಉದ್ಯಮಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಅಸಾಧಾರಣ ಪ್ರತಿಭೆ ಮತ್ತು ನವೀನ ಚಿಂತನೆಯು ತಂತ್ರಜ್ಞಾನ ಕ್ಶೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲು ದಾರಿ ಮಾಡಿಕೊಟ್ಟಿದೆ.
ಇದೇ ರೀತಿ ಐಐಟಿ ಮದ್ರಾಸ್ ನಲ್ಲಿ ಪದವೀಧರರಾದ ಪುಲ್ಕಿತ್ ಖುರಾನಾ ಮತ್ತು ಸಿದ್ಧಾರ್ಥ್ ಸಿಕ್ಕಾ ಅವರ ಕಥೆಯು ಭಿನ್ನವಾಗಿಲ್ಲ. 2019 ರಲ್ಲಿ 'ಬ್ಯಾಟರಿ ಸ್ಮಾರ್ಟ್' ಎಂಬ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ-ಸ್ವಾಪಿಂಗ್ ಕಂಪನಿಯನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

"ಬ್ಯಾಟರಿ ಸ್ಮಾರ್ಟ್"ನ ಸಂಸ್ಥಾಪಕರಾದ ಪುಲ್ಕಿತ್ ಖುರಾನಾ ಮತ್ತು ಸಿದ್ಧಾರ್ಥ್ ಸಿಕ್ಕಾ ಅವರು ಈ ವರ್ಷದ 40 ವರ್ಷದೊಳಗಿನ 40 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಮೂಲಕ ತಮ್ಮ ಕೆರಿಯರ್ ನನ್ನು ರೂಪಿಸಿಕೊಂಡಿದ್ದೇವೆ ಎನ್ನುತ್ತಾರೆ 33 ವರ್ಷ ವಯಸ್ಸಿನ ಪುಲ್ಕಿತ್ ಮತ್ತು ಸಿದ್ದಾರ್ಥ್. 2019 ರಲ್ಲಿ ಸ್ಥಾಪನೆಯಾದ ಬ್ಯಾಟರಿ ಸ್ಮಾರ್ಟ ಗುರುಗ್ರಾಮ್ ಮೂಲದ ಬ್ಯಾಟರಿ-ಸ್ವಿಚಿಂಗ್ ಸಂಸ್ಥೆಯಾಗಿದ್ದು, ಪ್ರಸ್ತುತ 28 ನಗರಗಳಲ್ಲಿ 1,000 ಸ್ವಾಪಿಂಗ್ ಸ್ಟೇಷನ್‌ಗಳನ್ನು ನಿರ್ವಹಿಸುತ್ತಿದೆ.
ಇಬ್ಬರು ತಮ್ಮ ವೃತ್ತಿ ಬದುಕಿನ ಪ್ರಯಾಣದ್ ಬಗ್ಗೆ ಮಾತನಾಡುತ್ತಾ " ತಮ್ಮ ಮೊದಲ ಉದ್ಯೋಗವನ್ನು ತೊರೆದ ನಂತರ ತಮ್ಮದೇ ಆದ ಉದ್ಯಮಆರಂಭಿಸುವುದು ನಮ್ಮ ಕನಸಾಗಿತ್ತು. ಇದು ತಮ್ಮ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು" ಎಂದು ಹೇಳುತ್ತಾರೆ.
" ಉದ್ಯಮ ಆರಂಭಿಸುವ ಆ ಒಂದು ನಿರ್ಧಾರವು ಭವಿಷ್ಯಕ್ಕಾಗಿ ನಮ್ಮ ಗುರಿ ಹಾಕಿಕೊಂಡದ ದಿನದಿಂದ ಒಂದು ಮಹತ್ವದ ತಿರುವು ಎಂದು ನಾನು ನಂಬುತ್ತೇನೆ. ನಮ್ಮಉದ್ಯಮಶೀಲತೆಯ ಪ್ರಯಾಣ ಆ ನಿರ್ಧಾರವನ್ನು ತೆಗೆದುಕೊಂಡಾದಲೇ ಪ್ರಾರಂಭವಾಯಿತು" ಎಂದು ಖುರಾನಾ ಫಾರ್ಚೂನ್ ಇಂಡಿಯಾಗೆ ಪ್ರತಿಕ್ರಿಯಿಸಿದ್ದಾರೆ.
ಬ್ಯಾಟರಿ ಸ್ಮಾರ್ಟ್‌ನಿಂದ ಪ್ರತಿ ತಿಂಗಳು ಸುಮಾರು 50-60 ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಕಂಪನಿಯು ಪ್ರಸ್ತುತ ದಿನಕ್ಕೆ 55,000 ಬ್ಯಾಟರಿ ಸ್ವಾಪ್‌ಗಳನ್ನು ಮಾಡುತ್ತದೆ. ಈ ವರ್ಷದ ಅಂತ್ಯದೊಳಗೆ ಇನ್ನೂ ಹತ್ತು ನಗರಗಳಿಗೆ ತಮ್ಮ ಯೋಜನೆ ವಿಸ್ತರಿಸುವ ಆಶಯವನ್ನು ಸಂಸ್ಥೆ ಹೊಂದಿದೆ. ಪುಲ್ಕಿತ್ ಮತ್ತು ಸಿದ್ಧಾರ್ಥ್ ಹೂಡಿಕೆದಾರರಿಂದ $45 ಮಿಲಿಯನ್ ಸಂಗ್ರಹಿಸಿದ್ದಾರೆ. ಈ ಹೂಡಿಕೆದಾರರಲ್ಲಿ ಅಕೇಶಿಯಾ ಇನ್ಕ್ಲೂಷನ್ ಲಿಮಿಟೆಡ್, MUFG ಬ್ಯಾಂಕ್, ಬ್ಲೂಮ್ ವೆಂಚರ್ಸ್, ದಿ ಇಕೋಸಿಸ್ಟಮ್ ಇಂಟೆಗ್ರಿಟಿ ಫಂಡ್ ಮತ್ತು ಬ್ರಿಟಿಷ್ ಇಂಟರ್ನ್ಯಾಷನಲ್ ಇನ್ವೆಸ್ಟ್ಮೆಂಟ್ ಸೇರಿವೆ.
TheKredible ನ ಅಂದಾಜಿನ ಪ್ರಕಾರ, ಗುರುಗ್ರಾಮ್ ಮೂಲದ ಕಂಪನಿಯು ಈ ಹೊಸ ಫಂಡ್ ನ್ನು ರೂ 2,830 ಕೋಟಿ ($ 341 ಮಿಲಿಯನ್) ಮೌಲ್ಯದಲ್ಲಿ ಸಂಗ್ರಹಿಸಿದೆ್ ಎಂದು ಹೇಳಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ-ಸ್ವಾಪಿಂಗ್ ಕಂಪನಿಯಾದ ಬ್ಯಾಟರಿ ಸ್ಮಾರ್ಟ್ ತನ್ನ ಕಸ್ಟಮರ್ ಬೇಸ್ ನ್ನು ದ್ವಿಗುಣಗೊಳಿಸಲು ಮತ್ತು 10 ಹೊಸ ಪ್ರದೇಶಗಳಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ.


Click it and Unblock the Notifications