ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಹುದಿನಗಳಿಂದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಸರ್ಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಈಗಾಗಲೇ ನಿಲ್ದಾಣಕ್ಕಾಗಿ ಸ್ಥಳಗಳನ್ನ ಆಯ್ಕೆಮಾಡಲಾಗಿದೆ, ಇನ್ನು ನಿರ್ಮಾಣದ ಕಾರ್ಯ ಒಂದೇ ಬಾಕಿ ಇದೆ. ಇನ್ನು ಈ ವಿಚಾರವಾಗಿ ಕರ್ನಾಟಕ ಸರ್ಕಾರ ಸಧ್ಯದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲಿದೆ.
ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಅನುಮೋದನೆಯನ್ನ ಪಡೆಯಲಿದೆ. ನಂತರ ಸರ್ಕಾರ ಕೇಂದ್ರಕ್ಕೆ ಪ್ರಸ್ತಾಪಿಸಲು ತಯಾರಿ ನಡೆಸುತ್ತಿದೆ. ಎರಡನೇ ವಿಮಾನ ನಿಲ್ದಾಣಕ್ಕಾಗಿ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಏರ್‌ಪೋರ್ಟ್‌ಗಾಗಿ ತುಮಕೂರಿನಲ್ಲಿ ಈಗಾಗಲೇ ಒಂದು ಸ್ಥಳ ನಿಗದಿಯಾಗಿದೆ. ಇದರ ಜೊತೆಗೆ ಹಲವು ಸ್ಥಳಗಳನ್ನ ಪರಿಗಣಿಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಮೇರೆಗೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲು ಸಿದ್ಧತೆ ನಡೆಸ್ತಿದೆ. ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸಧ್ಯಕ್ಕೆ ಸಚಿವ ಎಂ.ಬಿ ಪಟೀಲ್ ಅವರು ಸ್ಥಳದ ಕುರಿತು ಯಾವುದೇ ನಿಖರವಾದ ಮಾಹಿತಿಯನ್ನು ನೀಡದಿದ್ದರೂ ಕೂಡ, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿ ಮಾಹಿತಿಯನ್ನ ನೀಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸಭೆಯನ್ನ ನಡೆಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು.
ಈಗಿರು ಮಾಹಿತಿ ಪ್ರಕಾರ ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಐದು ಸ್ಥಳಗಳನ್ನ ಆಯ್ಕೆ ಮಾಡಲಾಗಿದೆ. ಅತೀ ಹೆಚ್ಚಿ ಬೇಡಿಕೆ ಮೇರೆಗೆ ತುಮಕೂರು ಮೊದಲ ಆಯ್ಕೆಯಾಗಿದೆ. ಅಲ್ಲದೆ ಪ್ರಸ್ತುತ ಈಗ ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯದ ಮಿತಿಯನ್ನ ದಾಟಲಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ: ಇತ್ತೀಚಿನ ಅಪ್‌ಡೇಟ್‌ಗಳ ಬಗ್ಗೆ ತಿಳಿಯಿರಿ
ಬೆಂಗಳೂರಿನಿಂದ ವಿಮಾಣ ಪ್ರಯಾಣಕ್ಕೆ ಬೇಡಿಕೆಗಳು ಹೆಚ್ಚಾಗ್ತಿವೆ. ಅಲ್ಲದೆ ಹೆಚ್ಚುತ್ತಿರುವ ಐಟಿ ಉದ್ಯಮ ಮತ್ತು ಅತಿಯಾದ ಜನಸಂಖ್ಯೆಯ ಕಾರಣ, ಪ್ರಸ್ತುತ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಸಾಮರ್ಥ್ಯವನ್ನ ಮೀರಿ ಕಾರ್ಯನಿರ್ವಹಿಸುತ್ತಿದೆ. ಇದು ಇತ್ತೀನ ದಿನಗಳಲ್ಲಿ ತೀರ್ವ ತೊಂದರಡಯಾಗಿ ಪರಿಣಮಿಸಿದೆ. ಹೀಗಾಗಿ ಬೆಂಗಳೂರಿನಲ್ಲಿಎರಡನೇ ವಿಮಾನ ನಿಲ್ದಾಣವನ್ನ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸರ್ಕಾರ ಈಗಾಗಲೇ ನಿಲ್ದಾಣಕ್ಕಾಗಿ ಸೂಕ್ತವಾದ ಸ್ಥಳಳ ಕುರಿತು ಚರ್ಚೆಯನ್ನ ನಡೆಸ್ತಿದೆ. ಜೊತೆಗೆ ಇದರ ಪ್ರಸ್ತಾವನೆಯನ್ನ ಕೇಂದ್ರದ ಮುಂದಿಡಲು ನಿರ್ಧರಿಸಿದೆ.
ಬೆಂಗಳೂರು ಅಭಿವೃದ್ಧಿ ಹೊಂದುತ್ತಿದ್ದಂತೆ, ಹೊಸ ಉದ್ಯೋಗಗಳು ಹಾಗೆ ಹೊಸ ವ್ಯವಹಾರಗಳಿಗೆ ತೆರೆದುಕೊಳದ್ತಿದೆ. ಹೀಗಾಗಿ ಬೆಂಗಳೂರಿನಿಂದ ಬೇರೆಡೆಗೆ ಪ್ರಯಾಣಿಸುವವರ ಸಂಖ್ಯೆ ಹಾಗು ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ದಟ್ಟಣೆಯ ನಿರ್ವಹಣೆಯನ್ನ ಮಾಡಲು ಎರಡನೇ ವಿಮಾನ ನಿಲ್ದಾಣವು ಹೆಚ್ಚು ಪರಿಣಾಮಕಾರಿಯಾಗಲಿದೆ.
ಈ ಎರಡನೇ ವಿಮಾನ ನಿಲ್ದಾಣವನ್ನ ನಿರ್ಮಿಸಸುವುದರಿಂದ ಇದು ಅತೀ ಹೆಚ್ಚು ಉದ್ಯೋಗಾವಕಾಶಗಳನ್ನ ಸೃಷ್ಟಿಸುತ್ತದೆ ಮತ್ತು ವ್ಯಾಪಾರಗಳು ಮತ್ತು ಪ್ರವಾಸಿಗರ ಹೆಚ್ಚಳದಿಂದಾಗಿ ಸ್ಥಳೀಯ ಆರ್ಥಿಕತೆಯನ್ನ ಉತ್ತೇಜನ ಮಾಡುತ್ತದೆ. ಅಷ್ಟಲ್ಲದೆ ವಿಮಾನ ನಿಲ್ದಾಣವು KIA ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಪ್ರಯಾಣಿಕರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ಎರಡನೇ ವಿಮಾನ ನಿಲ್ದಾಣಕ್ಕಾಗಿ ಕರ್ನಾಟಕ ಸರ್ಕಾರವು ಅಧ್ಯಯನ ಮತ್ತು ಸಮೀಕ್ಷೆಗಳನ್ನ ನಡೆಸುವ ಮೂಲಕ ಹೊಸ ವಿಮಾನ ನಿಲ್ದಾಣಕ್ಕಾಗಿ ಹಲವು ಸ್ಥಳಗಳನ್ನ ಆಯ್ಕೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 75 ರ ಉದ್ದಕ್ಕೂ ಇರುವ ಪಟ್ಟಣವಾದ ಕುಣಿಗಲ್ ಅನ್ನು ಎರಡನೇ ವಿಮಾನ ನಿಲ್ದಾಣಕ್ಕಾಗಿ ಈ ಸ್ಥಳವನ್ನ ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದೆ. ಇದರ ಜೊತೆಗೆ ತುಮಕೂರು ಕ್ಷೇತ್ರವನ್ನ ಕೂಡ ವಿಮಾನ ನಿಲ್ದಾಣಕ್ಕಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಇತ್ತೀನ ದಿನಗಳಲ್ಲಿ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವಂತೆ ಬೇಡಿಕೆಗಳು ಕೂಡ ಹೆಚ್ಚಾಗ್ತಿವೆ. ಇದರ ಜೊತೆಗೆ ಬೆಂಗಳೂರಿನ ರಾಮನಗರ, ಬಿಡದಿ ಮತ್ತು ಹಾರೋಹಳ್ಳಿಯನ್ನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಈ ಸ್ಥಳಗಳನ್ನ ಆಯ್ಕೆ ಮಾಡಲಾಗಿದೆ.
More From GoodReturns

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Hebbal Tunnel Project: ಹೆಬ್ಬಾಳ 6 ಪಥದ ಸುರಂಗ ರಸ್ತೆಗೆ ಟೆಂಡರ್... 4 ಪ್ರಮುಖ ಕಂಪನಿಗಳಲ್ಲಿ ಬಿಡ್ಡಿಂಗ್ ಸ್ಪರ್ಧೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಭೀತಿ! ಹಲವು ವಿಮಾನ ಹಾರಾಟ ರದ್ದು

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications