For Quick Alerts
ALLOW NOTIFICATIONS  
For Daily Alerts

3 ಲಕ್ಷದಷ್ಟು COVID- 19 ಟೆಸ್ಟ್ ಕಿಟ್ ಗಳು ಚೀನಾದಿಂದ ಭಾರತಕ್ಕೆ

|

COVID- 19 ಶೀಘ್ರವಾಗಿ ಪತ್ತೆ ಹಚ್ಚುವ Rapid Antibody ಟೆಸ್ಟ್ ಕಿಟ್ ಗಳು ಚೀನಾದ ಗ್ವಾನ್ ಗ್ಝೌ ನಗರದಿಂದ ಬಂದಿವೆ ಎಂದು ಶನಿವಾರ ತಿಳಿಸಲಾಗಿದೆ. 3 ಲಕ್ಷದಷ್ಟು ಟೆಸ್ಟ್ ಕಿಟ್ ಗಳು ವಿಮಾನದ ಮೂಲಕ ರಾಜಸ್ಥಾನ, ತಮಿಳುನಾಡಿಗೆ ಬಂದಿವೆ ಎಂದು ಚೀನಾಗೆ ಭಾರತದ ರಾಯಭಾರಿ ಆಗಿರುವ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

"ಹತ್ತಿರ ಹತ್ತಿರ 3 ಲಕ್ಷದಷ್ಟು Rapid Antibody ಟೆಸ್ಟ್ ಕಿಟ್ ಗಳು ಚೀನಾದ ಗ್ವಾನ್ ಗ್ಝೌ ನಗರದಿಂದ ವಿಮಾಣದಲ್ಲಿ ಬಂದಿವೆ. ಅವುಗಳನ್ನು ರಾಜಸ್ಥಾನ ಮತ್ತು ತಮಿಳುನಾಡಿಗೆ ಪೂರೈಸಲಾಗಿದೆ. ನಮ್ಮ ತಂಡದಿಂದ ಗ್ವಾನ್ ಗ್ಝೌ ನಗರದಲ್ಲಿ ಅದ್ಭುತವಾದ ಕೆಲಸ ಆಗಿದೆ" ಎಂದು ಮಿಸ್ರಿ ಟ್ವೀಟ್ ಮಾಡಿದ್ದಾರೆ.

ಚೀನಾದಿಂದ ಈಗಾಗಲೇ ಕಳಿಸಿರುವ 6.50 ಲಕ್ಷ ಟೆಸ್ಟ್ ಕಿಟ್ ಗಳ ಜತೆಗೆ ಹೆಚ್ಚುವರಿಯಾಗಿ ಈಗ ಮತ್ತೆ ಕಳುಹಿಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಪೂರೈಕೆ ಮಾಡುವ ಉದ್ದೇಶದಿಂದ ಇತ್ತೀಚೆಗಿನ ವಾರಗಳಲ್ಲಿ ಭಾರತವು ಚೀನಾದಿಂದ ವೈದ್ಯಕೀಯ ಸಲಕರಣೆ ಮತ್ತು ವಸ್ತುಗಳನ್ನು ಖರೀದಿ ಮಾಡುತ್ತಿದೆ.

3 ಲಕ್ಷದಷ್ಟು COVID- 19 ಟೆಸ್ಟ್ ಕಿಟ್ ಗಳು ಚೀನಾದಿಂದ ಭಾರತಕ್ಕೆ

ಕೊರೊನಾ ಕಾಯಿಲೆ ಹಬ್ಬಲು ಚೀನಾ ಕಾರಣವಾಗಿರುವುದರಿಂದ ಅಲ್ಲಿನ ವಸ್ತುಗಳನ್ನು ಬಳಸಬಾರದು ಎಂಬ ಅಭಿಯಾನವು ಈ ಮಧ್ಯೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಚೀನಾದಿಂದಲೇ ಭಾರತಕ್ಕೆ COVID- 19 ಟೆಸ್ಟ್ ಕಿಟ್ ಗಳು ಬರುತ್ತಿವೆ.

English summary

3 Lakh Covid 19 Anti Test Kit Procured By India From China

Nearly 3 lakh rapid antibody test kit of Covid- 19 procured by India from China. Here is the details.
Story first published: Sunday, April 19, 2020, 10:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X