ನವದೆಹಲಿ, ಏಪ್ರಿಲ್ 4: ಭಾರತದಲ್ಲಿ ಹಲವಾರು ವೈದ್ಯರು ಹಲವಾರು ವರ್ಷಗಳ ಕಾಲ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಸ್ವಂತ ಕ್ಲಿನಿಕ್ , ಅಥವಾ ತಮ್ಮ ಪಟ್ಟಣದಲ್ಲಿ ಪುಟ್ಟ ಆಸ್ಪತ್ರೆಯನ್ನೋ ತೆರೆಯುತ್ತಾರೆ. ಆದರೆ ಇವೆರೆಲ್ಲರಿಗಿಂತ ಭಿನ್ನವಾಗಿ ಓರ್ವ ವೈದ್ಯರು ತಮ್ಮ ಆಸ್ಪತ್ರೆಗಳ ಸರಣಿಯನ್ನು ನಿರ್ಮಿಸಿದ್ದಾರೆ ಅವರೇ ನರೇಶ್ ಟ್ರೆಹಾನ್. ಮೆಡಾಂತ ದಿ ಮೆಡಿಸಿಟಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ
ನರೇಶ್ ಅವರು ಫೋರ್ಬ್ಸ್‌ನ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಸಿರಿವಂತ ವೈದ್ಯರಲ್ಲಿ ಒಬ್ಬರು. ಡಾ ಟ್ರೆಹಾನ್ ಪ್ರಸ್ತುತ ಫೋರ್ಬ್ಸ್‌ನ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 2287 ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ ಅವರು 11680 ಕೋಟಿ ರೂಪಾಯಿಗಳ ರಿಯಲ್ ಟೈಮ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ನರೇಶ್ ಟ್ರೆಹಾನ್ ಅವರು ಮೊತ್ತ ಮೊದಲು 2007 ರಲ್ಲಿ ಗುರುಗ್ರಾಮ್‌ನಲ್ಲಿ ಒಂದು ಆಸ್ಪತ್ರೆ ಆರಂಭಿದ್ದರು. ಬಳಿಕ ಇದನ್ನು ಅಭಿವೃದ್ದಿ ಪಡಿಸಿ, ಉತ್ತರಭಾರತದಾದ್ಯಂತ ಮೇದಾಂತ ಆಸ್ಪತ್ರೆಯ ಸರಪಳಿಯನ್ನೇ ಸ್ಥಾಪಿಸಿದರು. ನರೇಶ್ ಅವರು ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾಗಿದ್ದಾರೆ. ಇವರು ಹೃದಯರಕ್ತನಾಳದ ಶಸ್ತ್ರಚಿಕಿತ್ಸೆಯ ವಿಭಾಗದಲ್ಲಿ ಡಾ. ಟ್ರೆಹಾನ್ ಐದು ದಶಕಗಳ ಅನುಭವವನ್ನು ಹೊಂದಿದ್ದಾರೆ.
ಡಾ ಟ್ರೆಹಾನ್ ಅವರು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮಭೂಷಣ (2001) ಮತ್ತು ಪದ್ಮಶ್ರೀ (1991) ಪುರಸ್ಕೃತರಾಗಿದ್ದಾರೆ. ಮಾತ್ರವಲ್ಲದೇ ಇವರು ಸುಮಾರು 48,000ಕ್ಕೂ ಹೆಚ್ಚು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ಖ್ಯಾತಿಯನ್ನ ಪಡೆದಿದ್ದಾರೆ.
ನರೇಶ್ ಟ್ರೆಹಾನ್ ಹಿನ್ನಲೆ:
ನರೇಶ್ ಅವರ ತಾಯಿ ಸ್ತ್ರೀರೋಗ ಹಾಗೂ ತಂದೆ Ent ತಜ್ಞರಾಗಿದ್ದರು. 1945 ಜನಿಸಿದ ನರೇಶ್ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಲಕ್ನೋದಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ ನಂತರ, ಅವರು ನವೆಂಬರ್ 1969 ರಲ್ಲಿ ಅಮೇರಿಕಾಕ್ಕೆ ತೆರಳಿದರು. ಅಲ್ಲಿ ಫಿಲಡೆಲ್ಫಿಯಾದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಸೇರ್ಪಡೆಯಾದರು.
77 ವರ್ಷ ವಯಸ್ಸಿನವರಾದ ನರೇಶ್ ಟ್ರೆಹಾನ್ ಅವರು, ಸರಣಿ ಮೇದಾಂತ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದು, ಅವರ ಮಾರುಕಟ್ಟೆ ಬಂಡವಾಳವು ಏಪ್ರಿಲ್ ಮೊದಲ ವಾರದಲ್ಲಿ ವೇಳೆಯಲ್ಲಿ ರೂ 35926 ಕೋಟಿಗಳಷ್ಟಿದೆ. ಅವರು ನವೆಂಬರ್ 2022 ರಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಮೇದಾಂತದ ಮೂಲ ಕಂಪನಿಯಾದ ಗ್ಲೋಬಲ್ ಹೆಲ್ತ್ ಅನ್ನು ಪಟ್ಟಿ ಮಾಡಲಾಯಿತು. ಏ.3 ರಂದು ಎನ್‌ಎಸ್‌ಇಯಲ್ಲಿ ಕಂಪನಿಯ ಷೇರಿನ ಬೆಲೆ 1338 ರೂ. ಆಗಿದ್ದು, ಉತ್ತರ ಭಾರತದಾದ್ಯಂತ 2,700 ಕ್ಕೂ ಹೆಚ್ಚು ಆಸ್ಪತ್ರೆ ಹಾಸಿಗೆಗಳುಳ್ಳ ಮೇದಾಂತ ಐದು ಆಸ್ಪತ್ರೆಗಳನ್ನು ಹೊಂದಿದೆ.
ನರೇಶ್ ಟ್ರೆಹಾನ್ ಅವರು ಮಧು ಟ್ರೆಹಾನ್ ಅವರನ್ನು ವಿವಾಹವಾಗಿದ್ದು, ಇವರು ಪತ್ರಕರ್ತೆ ಮತ್ತು ಲೇಖಕಿಯಾಗಿದ್ದಾರೆ. ಈ ದಂಪತಿಗಳಿಗೆ ಶೈಲ್ ಮತ್ತು ಶೋನನ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶೈಲ್ ವಕೀಲರಾಗಿದ್ದು, ಮೇದಾಂತದ CEO ಆಗಿರುವ ಪಂಕಜ್ ಸಾಹ್ನಿ ಅವರನ್ನು ವಿವಾಹವಾಗಿದ್ದಾರೆ.


Click it and Unblock the Notifications