ನವದೆಹಲಿ, ಏಪ್ರಿಲ್ 9: ಇತ್ತೀಚಿಗೆ ಸೈಬರ್ ಖದೀಮರ ಹಾವಳಿ ಮಿತಿಮೀರಿದೆ. ಎಷ್ಟೇ ಜಾಗರೂಕರಾಗಿದ್ರು ಒಂದಲ್ಲ ಒಂದು ಸ್ವರೂಪದಲ್ಲಿ ಸೈಬರ್ ಕದಿಮರು ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ಲಪಟಾಯಿಸೋ ಮಾರ್ಗೋಪಾಯವನ್ನು ಕಂಡುಕೊಳ್ಳುತ್ತಾರೆ.
ಸ್ವಲ್ಪ ಯಾಮಾರಿದ್ರು ಕೂಡ ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ನಲ್ಲಿರುವ ಅಷ್ಟು ಹಣ ಶೂನ್ಯ ಆಗಿ ಬಿಡುತ್ತೆ . ಅವಿದ್ಯಾವಂತರನ್ನ ಈ ರೀತಿ ಯಾಮಾರಿಸುವುದು ಸುಲಭ ,ಆದರೆ ಇತ್ತೀಚಿಗೆ ವಿದ್ಯಾವಂತರು ಕೂಡ ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.

ಈ ಸೈಬರ್ ವಂಚನೆ ಜಾಲ ಕೇವಲ ನಿಮ್ಮ ಅಕೌಂಟ್ ನಲ್ಲಿರುವ ದುಡ್ಡನ್ನ ಲಪಟಾಯಿಸುವುದು, ನಿಮ್ಮ ಬಳಿ ಓಟಿಪಿ ಪಡೆದುಕೊಂಡು ನಿಮ್ಮ ಅಕೌಂಟ ಖಾಲಿ ಮಾಡೋದು ಅಥವಾ ಇನ್ಯಾವುದೋ ಲಿಂಕನ್ನ ನಿಮಗೆ ಸೆಂಡ್ ಮಾಡಿ ಲಿಂಕ್ ಟಚ್ ಮಾಡಿ ಅಂತ ಹೇಳಿ ನಿಮ್ಮ ಅಕೌಂಟ್ ನಲ್ಲಿರೋ ಹಣವನ್ನು ಲಪಟಾಯಿಸುವುದು ಇದು ಇಷ್ಟಕ್ಕೆ ಮಾತ್ರ ಸೀಮಿತ ಆಗಿಲ್ಲ . ಈಗ ಸ್ಟಾಕ್ ಮಾರ್ಕೆಟ್ ನ ಹೂಡಿಕೆ ಹೆಸರಿನಲ್ಲೂ ಕೂಡ ಈ ಸೈಬರ್ ಖದಿಮೂರು ನಿಮ್ಮ ಖಾತೆಗೆ ಕನ್ನ ಹಾಕ್ತಾರೆ ಹುಷಾರಾಗಿರಿ.
ಯಾವುದೇ ಖಾತೆಗೆ ಹಣ ಹಾಕುವ ಮುನ್ನ ಹುಷಾರ್ !
ಇದೇ ರೀತಿ ಸ್ಟಾಕ್ ಮಾರ್ಕೆಟ್ ಬಗ್ಗೆ ಏನೂ ಅರಿಯದ ತುಮಕೂರಿನ ತಿಪಟೂರು ಮೂಲದ ಇಂಜಿನಿಯರ್ ಒಬ್ಬರು ಹೂಡಿಕೆ ಮಾಡಲು ಬಯಸಿ ಸೈಬರ್ ಖದೀಮರ ಬಲೆಗೆ ಸಿಲುಕಿ ಬರೋಬ್ಬರಿ 36 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ.
ಲಿಖಿತ್ ವೈ ಪಾಟೀಲ್ ಎಂಬ ಇಂಜಿನಿಯರ್ ಇನ್ಸ್ಟಾಗ್ರಾಮ್ ನಲ್ಲಿ ನೋಡಿದ ಒಂದು ಲಿಂಕ್ ಮೂಲಕ ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡಲು ಮಾರ್ಗದರ್ಶನ ನೀಡುವ ಒಂದು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ . ಈ ವಾಟ್ಸಪ್ ಗ್ರೂಪ್ ಅಲ್ಲಿ ಯಾವ ಸ್ಟಾಕ್ ಮೇಲೆ ಇನ್ವೆಸ್ಟ್ ಮಾಡಬೇಕು , ಯಾವಾಗ ಎಂಟ್ರಿ ಕೊಡಬೇಕು , ಯಾವಾಗ ಎಕ್ಸಿಟ್ ಆಗ್ಬೇಕು ಎಲ್ಲ ಮಾಹಿತಿಯನ್ನು ನೀಡಲಾಗುತ್ತೆ ಅಂತ ಈ ರೀತಿ ಜನರನ್ನ ಗ್ರೂಪ್ಗೆ ಆಡ್ ಮಾಡ್ತಾರೆ. ಈ ಗ್ರೂಪ್ಗೆ ಜಾಯಿನ್ ಆದ ನಂತರ ಇಂಜಿನಿಯರ್ ಲಿಖಿತ್ ವೈ ಪಾಟೀಲ್ ಆ ಗ್ರೂಪ್ನಲ್ಲಿ ಇದ್ದ ಒಬ್ಬ ಸದಸ್ಯನ ಜೊತೆಗೆ ಪ್ರತ್ಯೇಕವಾಗಿ ಚಾಟ್ ಮಾಡೋದಕ್ಕೆ ಆರಂಭಿಸಿದ್ದಾರೆ.

ಲಿಖಿತ್ ವೈಪ್ ಪಾಟೀಲ್ ಅವರಿಗೆ ಸ್ಟಾಕ್ ಮಾರ್ಕೆಟ್ ಬಗ್ಗೆ ಏನೂ ಅರಿವಿಲ್ಲ ಅನ್ನೋದನ್ನ ತಿಳಿದುಕೊಂಡ ಈ ಸೈಬರ್ ಖದೀಮ ,ಅವರ ಬಳಿ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಖಾತೆಗೆ ಹಾಕಿಸಿಕೊಂಡಿದ್ದಾನೆ. ನಂತರ ಲಿಖಿತ್ ಗೆ ಅನುಮಾನ ಬಂದು ತಮ್ಮ ದುಡ್ಡನ್ನ ಮರಳಿ ಕೊಡುವಂತೆ ಕೇಳಿದಾಗ ಮತ್ತು 10 ಲಕ್ಷ ಹೂಡಿಕೆ ಮಾಡುವಂತೆ ಹೇಳಿ , ಎಲ್ಲ ದುಡ್ಡನ್ನು ಒಟ್ಟಿಗೆ ರಿಕವರಿ ಮಾಡಿ ಕೊಡುವಂತೆ ಈ ಖದೀಮ ಹೇಳಿದ್ದಾನೆ . ಇದರಿಂದ ಅನುಮಾನಗುಂಡ ಲಿಖಿತ್ ತಾವು ಯಾವ ಕಂಪನಿಯ ವಾಟ್ಸಪ್ ಗ್ರೂಪ್ನಲ್ಲಿ ಜಾಯಿನ್ ಆಗಿದ್ರು ಆ ಕಂಪನಿಗೆ ತನ್ನ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ . ಕಂಪನಿಯವರು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ
ಅಂತಿಮವಾಗಿ ತಾವು ವಂಚನೆಯ ಜಾಗದಲ್ಲಿ ಸಿಲುಕಿ, ಹಣ ಕಳೆದುಕೊಂಡಿರೋದ್ರ ಅರಿವಾದ ನಂತರ ಇಂಜಿನಿಯರ್ ಲಿಖಿತ್ ವೈ ಪಾಟೀಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ . ಇದೇ ರೀತಿ ಎಷ್ಟೋ ಮಂದಿ ತಮ್ಮ ಹಣ ಕಳೆದುಕೊಂಡ ನಂತರ ಪೊಲೀಸ್ ಸ್ಟೇಷನ್ ಗೆ ದೂರು ದಾಖಲಿಸುತ್ತಾರೆ . ನಿಮ್ಮ ಹಣವನ್ನ ರಿಕವರಿ ಮಾಡಿಕೊಳ್ಳೋದು ಕಷ್ಟ ಸಾಧ್ಯ ಅಂತ ಹೇಳಬಹುದು ಅದೇ ಕಾರಣಕ್ಕಾಗಿ ಆನ್ಲೈನ್ ನಲ್ಲಿ ಯಾವುದೇ ಸ್ವರೂಪದಲ್ಲಿ ವ್ಯವಹರಿಸಬೇಕಾದರೂ ಕೂಡ ಹಣಕಾಸಿನ ವಿಚಾರ ಅಂತ ಬಂದಾಗ ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲೋದಿಲ್ಲ. ಸೋ ಬೀ ಕೇರ್ಫುಲ್!


Click it and Unblock the Notifications