ಪ್ರಯಾಣಿಕರಿಗೆ ಕ್ರೆಡಿಟ್ ಕಾರ್ಡ್‌ಗಳು ಜನಪ್ರಿಯ ಆಯ್ಕೆಯಾಗಿದೆ. ಏಕೆಂದರೆ ಅವುಗಳು ನಿಮಗೆ ಉತ್ತಮ ರಿಯಾಯಿತಿಗಳನ್ನ ನೀಡುತ್ತವೆ. ಇದರಿಂದಾಗಿ ನೀವು ನಿಮ್ಮ ರಜೆಯ ವೇಳೆಯಲ್ಲಿ ಉತ್ತಮ ಪ್ರಯೋಜನಗಳನ್ನ ಪಡೆಯಬಹುದು. ಹೀಗೆ ನೀವೇನಾದ್ರು ನೀವು ನಿಮ್ಮ ರಜೆಗಾಗಿ ರೈಲಿನಲ್ಲಿ ಪ್ರವಾಸಗಳನ್ನ ಯೋಜಸಿದ್ದರೆ, ನಿಮಗಾಗಿ ಅದರಲ್ಲೂ ರೈಲು ಬುಕಿಂಗ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಸಲಾದ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವ ಮೂಲಕ ನೀವು ಮತ್ತಷ್ಟು ಪ್ರಯೋಜನಗಳನ್ನ ಪಡೆಯಬಹುದು.
ಈ ಕ್ರೆಡಿಟ್ ಕಾರ್ಡ್‌ಗಳ ಮೂಲಕ, ನೀವು ಭಾರತೀಯ ರೈಲ್ವೆಯ ಅಡುಗೆ ಮತ್ತು ಸಾರಿಗೆ ನಿಗಮ ( IRCTC) ಬುಕಿಂಗ್‌ಗಳು, ಕಾಂಪ್ಲಿಮೆಂಟರಿ ರೈಲ್ವೇ ಲೌಂಜ್ ಪ್ರವೇಶ, ರಿವಾರ್ಡ್ ಪಾಯಿಂಟ್‌ಗಳು ಮತ್ತು ಇತರೆಗಳಲ್ಲಿ ನೀವು ವಿಶೇಷ ಕ್ಯಾಶ್‌ಬ್ಯಾಕ್‌ಗಳನ್ನ ನೀವು ಪಡೆಯಬಹುದು . ನೀವು ಅರ್ಜಿ ಸಲ್ಲಿಸಲು ಪರಿಗಣಿಸಬಹುದಾದ ಕೆಲವು ಜನಪ್ರಿಯ ರೈಲು ಪ್ರಯಾಣ ಕ್ರೆಡಿಟ್ ಕಾರ್ಡ್‌ಗಳು ಇಲ್ಲವೆ.

ಅತ್ಯುತ್ತಮ ರೈಲು ಪ್ರಯಾಣ ಕ್ರೆಡಿಟ್ ಕಾರ್ಡ್‌ಗಳು
| ಕ್ರಮ ಸಂಖ್ಯೆ | ಪ್ರಯಾಣ ಕ್ರೆಡಿಟ್ ಕಾರ್ಡ್ | ವಾರ್ಷಿಕ ಶುಲ್ಕ | ನವೀಕರಣ ಶುಲ್ಕ |
| 1 | SBI IRCTC ಪ್ಲಾಟಿನಂ ಕ್ರೆಡಿಟ್ ಕಾರ್ಡ್ | ರೂ. 500 | ರೂ. 300 |
| 2 | ಏರ್ ಇಂಡಿಯಾ SBI ಸಿಗ್ನೇಚರ್ ಕ್ರೆಡಿಟ್ ಕಾರ್ಡ್ | ರೂ. 4999 | ರೂ. 4999 |
| 3 | ಕೋಟಾಕ್ ರಾಯಲ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ | ಶೂನ್ಯ | ರೂ. 999 |
| 4 | HDFC ಭಾರತ್ ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್ | ರೂ. 500 | ರೂ. 500 |
ಸಿಹಿಸುದ್ದಿ! ಕೆಂಪೇಗೌಡ ಏರ್ಪೋರ್ಟ್ಗೆ ಮೆಟ್ರೋ ರೈಲು; 140 ಕೋಟಿ ವೆಚ್ಚ.. ಯಾವಾಗ ಪ್ರಾರಂಭ?
1. SBI IRCTC ಪ್ಲಾಟಿನಂ ಕ್ರೆಡಿಟ್ ಕಾರ್ಡ್
ಪ್ರಮುಖ ಲಕ್ಷಣಗಳು
-IRCTC ಬುಕಿಂಗ್‌ಗಳಲ್ಲಿ 1.8%ನಷ್ಟು ವಹಿವಾಟು ಶುಲ್ಕ ವಿನಾಯಿತಿಯನ್ನು ಪಡೆಯಿರಿ.
-IRCTC ಮೂಲಕ ಮಾಡಿದ AC1, AC2, AC3 ಮತ್ತು ಚೇರ್ ಕಾರ್ ಬುಕಿಂಗ್‌ಗಳಲ್ಲಿ 10% ಮೌಲ್ಯದ ರಿವಾರ್ಡ್ ಪಾಯಿಂಟ್‌ಗಳನ್ನ ಪಡೆಯಬಹುದು.
-ನಿಮ್ಮ ಆಯ್ಕೆಯ ರೈಲ್ವೇ ನಿಲ್ದಾಣಗಳಲ್ಲಿ ಉಚಿತ ರೈಲ್ವೇ ಲಾಂಜ್.
-ಇತರ ವಹಿವಾಟುಗಳಲ್ಲಿ SBI ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ.
-ಪ್ರತಿ 125 ರೂಪಾಯಿ ಇಂಧನೇತರ ವಹಿವಾಟುಗಳಿಗೆ 1 ರಿವಾರ್ಡ್ ಪಾಯಿಂಟ್ ಅನ್ನು ಪಡೆಯಿರಿ.
2. ಏರ್ ಇಂಡಿಯಾ SBI ಸಿಗ್ನೇಚರ್ ಕ್ರೆಡಿಟ್ ಕಾರ್ಡ್
ಪ್ರಮುಖ ಲಕ್ಷಣಗಳು
-15 ದಿನಗಳ ವಾರ್ಷಿಕ ಶುಲ್ಕದಲ್ಲಿ 20,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ .
-ನೀವು ಪ್ರತಿ ಬಾರಿ ನಿಮ್ಮ ಮೆಂಬರ್‌ಶಿಪ್‌ಅನ್ನು ನವೀಕರಿಸಿದಾಗ 5000 ನವೀಕರಣ ಬೋನಸ್ -ಪಾಯಿಂಟ್‌ಗಳನ್ನು ಪಡೆಯಬಹುದು.
-ಪ್ರತಿ ತ್ರೈಮಾಸಿಕಕ್ಕೆ ಎರಡು ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ಪಡೆಯಿರಿ.
-ನಿಮ್ಮ ಏರ್ ಇಂಡಿಯಾ ಟಿಕೆಟ್‌ಗಳನ್ನು ನೀವು ವೆಬ್‌ಸೈಟ್ ಮೂಲಕ ಬುಕ್ ಮಾಡಿದಾಗ ವಿಶೇಷ ಕೊಡುಗೆಗಳನ್ನು ಸ್ವೀಕರಿಸಬಹುದು.
-ಭಾರತದಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ 1% ಇಂಧನ ಸರ್ಚಾರ್ಜ್ ಮನ್ನಾವನ್ನು ಪಡೆಯಿರಿ.
3. ಕೋಟಾಕ್ ರಾಯಲ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್
ಪ್ರಮುಖ ಲಕ್ಷಣಗಳು
-ಐಆರ್‌ಸಿಟಿಸಿ ಬುಕಿಂಗ್‌ಗಳ ಮೇಲೆ 500 ರೂಗಳ ವರೆಗಿನ ರಿಯಾಯಿತಿಯನ್ನು ಪಡೆಯಿರಿ.
-ನೀವು ಕಾರ್ಡ್ ಬಳಕೆ ಮಾಡುವ ಮೂಲಕ ಪ್ರತಿಯೊಂದು ವಹಿವಾಟಿಗೆ 4X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.
-500 ರೂಗಳಿಂದ 3000 ರೂಗಳ ವರೆಗಿನ ಎಲ್ಲಾ ಇಂಧನ ವಹಿವಾಟುಗಳ ಮೇಲೆ 3% ವರೆಗೆ ರಿಯಾಯಿತಿ ಪಡೆಯಿರಿ.
-ವಿಮಾನ ನಿಲ್ದಾಣ ಮತ್ತು ಆಯ್ದ ರೈಲ್ವೇ ಲಾಂಜ್‌ಗಳಿಗೆ ಪೂರಕ ಪ್ರವೇಶ ಪಡೆಯಿರಿ.
4. HDFC ಭಾರತ್ ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್
ಪ್ರಮುಖ ಲಕ್ಷಣಗಳು
-IRCTC ರೈಲು ಟಿಕೆಟ್ ಬುಕಿಂಗ್‌ಗಳು, ಯುಟಿಲಿಟಿ ಪಾವತಿಗಳು ಮತ್ತು ಇಂಧನ ವಹಿವಾಟುಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ.
-ದೇಶದೊಳಗಿನ ಎಲ್ಲಾ ಇಂಧನ ಪಂಪ್‌ಗಳಲ್ಲಿ 1% ಇಂಧನ ಸರ್ಚಾರ್ಜ್ ಮನ್ನಾವನ್ನು ಪಡೆಯಿರಿ.
-ದೊಡ್ಡ ಖರೀದಿಗಳು ಹಾಗೆ ವಹಿವಾಟುಗಳಿಗಾಗಿ ತ್ವರಿತ EMI ಆಯ್ಕೆಗಳನ್ನು ಪಡೆಯಿರಿ.
-EasyEMI, PayZapp ಮತ್ತು SmartBUY ಮೂಲಕ ಎಲ್ಲಾ ವಹಿವಾಟುಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ.
ಒಟ್ನಲ್ಲಿ, ರೈಲು ಪ್ರಯಾಣದ ವೇಳೆ ಕ್ರೆಡಿಟ್ ಕಾರ್ಡ್‌ಗಳನ್ನ ಬಳಸುವುದರಿಂದ ನೀವು ಉತ್ತಮ ಪ್ರಯೋಜನಗಳನ್ನ ನಿಮ್ಮದಾಗಿಸಿಕೊಳ್ಳಬಹುದು. ಹಾಗೆ ಈ ನಾಲ್ಕು ಕ್ರೆಡಿಟ್ ಕಾರ್ಡ್‌ಗಳಲ್ಲಿ ಒಂದನ್ನು ಆಯ್ಕೆ ಮಾಡವ ಮೊದಲು ನಿಮ್ಮ ಪ್ರಯೋಜಗಳಿಗೆ ಯಾವುದು ಉತ್ತಮ ಎಂದು ಅರ್ಥಮಾಡಿಕೊಳ್ಳಿ. ಹಾಗೆ ನಿಮ್ಮ ಪ್ರವಾಸಗಳಿಗೆ ನಿಮ್ಮ ಜೀವನಶೈಲಿಗೆ ಯಾವುದು ಉತ್ತಮ ಎನ್ನುವುದನ್ನು ನೀವು ಆಯ್ಕೆ ಮಾಡಿಕೊಳ್ಳಿ. ಹಾಗೆ ಇದರ ಉತ್ತಮ ಪ್ರಯೋಜನಗಳನ್ನ ಪಡೆದುಕೊಳ್ಳಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications