For Quick Alerts
ALLOW NOTIFICATIONS  
For Daily Alerts

ಬರಲಿದೆ 4 ಐಪಿಒ: 9,123 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ

|

ಎರಡು ತಿಂಗಳ ವಿರಾಮದ ನಂತರ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಳು ಷೇರುಪೇಟೆಯಲ್ಲಿ ಮತ್ತೆ ಸದ್ದು ಮಾಡಿವೆ. ನಾಲ್ಕು ಕಂಪನಿಗಳು ಈ ವಾರ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಬಿಡಲಿದ್ದು, ಒಟ್ಟು 9,123 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿವೆ.

 

ಮೊದಲಿಗೆ ಷೇರುಪೇಟೆಗಳಲ್ಲಿ ಇರುವ ಮಾಹಿತಿ ಪ್ರಕಾರ ಶ್ಯಾಮ್ ಮೆಟಾಲಿಕ್ಸ್‌ ಆ್ಯಂಡ್ ಎನರ್ಜಿ ಲಿಮಿಟೆಡ್ ಮತ್ತು ಸೋನಾ ಬಿಎಲ್‌ಡಬ್ಲ್ಯೂ ಪ್ರಿಸಿಷನ್ ಪೋರ್ಜಿಂಗ್ಸ್‌ ಕಂಪನಿಗಳ ಐಪಿಒ ಸೋಮವಾರದಿಂದ ಆರಂಭವಾಗಲಿದೆ. ಇದರ ನಂತರದಲ್ಲಿ ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಡೊಡ್ಲಾ ಡೇರಿ ಕಂಪನಿಗಳ ಐಪಿಒ ಬುಧವಾರದಿಂದ ಆರಂಭವಾಗಲಿದೆ.

 
ಬರಲಿದೆ 4 ಐಪಿಒ: 9,123 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ

ಇದಲ್ಲದೆ, ಕ್ಲೀನ್ ಸೈನ್ಸ್ & ಟೆಕ್ನಾಲಜಿ ಜುಲೈ 2021 ರ ಮೊದಲ ವಾರದಲ್ಲಿ ಐಪಿಒ ಗಾತ್ರ 1,500 ಕೋಟಿ ರೂ.ಗಳೊಂದಿಗೆ ಪ್ರಾಥಮಿಕ ಮಾರುಕಟ್ಟೆಗಳನ್ನು ತಲುಪುವ ನಿರೀಕ್ಷೆಯಿದೆ. ಇಂಡಿಯಾ ಪೆಸ್ಟಿಸೈಡ್ಸ್‌ ಕಂಪನಿಯು ಇದೇ ತಿಂಗಳು ಅಥವಾ ಜುಲೈನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಏಂಜಲ್ ಬ್ರೋಕಿಂಗ್‌ನ ಷೇರು ಸಂಶೋಧನಾ ಸಹಾಯಕ ಯಶ್‌ ಗುಪ್ತಾ ಹೇಳಿದ್ದಾರೆ.

ಶ್ಯಾಮ್ ಮೆಟಾಲಿಕ್ಸ್ ಆ್ಯಂಡ್ ಎನರ್ಜಿ ಕಂಪನಿಯು ಐಪಿಒ ಮೂಲಕ 909 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಪ್ರತಿ ಷೇರಿಗೆ 303-306 ರಂತೆ ದರ ನಿಗದಿ ಸಾಧ್ಯತೆಯಿದೆ.

ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಐಪಿಒ ಮೂಲಕ 2,144 ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ. ಬುಧವಾರದಿಂದ ಶುಕ್ರವಾರದವರೆಗೆ ಖರೀದಿ ಅವಕಾಶವಿದೆ. ಜೊತೆಗೆ ಸೋನಾ ಕಾಮ್‌ಸ್ಟಾರ್ಸ್ ಕಂಪನಿಯು 5,550 ಕೋಟಿ ಮತ್ತು ಡೊಡ್ಲಾ ಡೇರಿ 520 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸುವ ಗುರಿ ಹೊಂದಿದೆ.

ಕೊನೆಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಏಪ್ರಿಲ್ 7 ರಿಂದ 9ರ ಅವಧಿಯಲ್ಲಿ ಪ್ರಾರಂಭವಾದ ಮ್ಯಾಕ್ರೋಟೆಕ್ ಡೆವಲಪರ್ಸ್ (ಹಿಂದಿನ ಲೋಧಾ ಡೆವಲಪರ್ಸ್) ಆಗಿತ್ತು.

English summary

4 IPOs To Hit Market This Week To Raise Rs 9123 Crore

four companies launching their initial share-sales this week to raise Rs 9,123 crore collectively
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X