ಎಸ್ಬಿಐ ಲೈಫ್ ಇನ್ಸೂರೆನ್ಸ್ ಭಾರತದ ಪ್ರತಿಷ್ಠಿತ ವಿಮಾ ಕಂಪನಿಗಳಲ್ಲೊಂದಾಗಿದೆ. ಎಸ್‌ಬಿಐನ ಒಟ್ಟಾರೆ 947 ಶಾಖಾ ಕಚೇರಿಗಳಲ್ಲಿ 18,236 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ 1,43,232 ವಿಮಾ ಏಜೆಂಟರು, 60 ಕಾರ್ಪೊರೇಟ್ ಏಜೆಂಟರು, 14 ಚಾನೆಲ್ ಪಾಲುದಾರರು, 27,000ಕ್ಕೂ ಅಧಿಕ ಸಹಯೋಗಿ ಶಾಖಾ ಕಚೇರಿಗಳು, 108 ಬ್ರೋಕರ್‌ಗಳು ಮತ್ತು ಇತರೆ ವಿಮಾ ಸಹಯೋಗಿ ಕಂಪನಿಗಳ ಬೃಹತ್ ಕಾರ್ಯಾಚರಣಾ ಜಾಲವನ್ನು ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಹೊಂದಿದೆ. ಇತ್ತೀಚೆಗೆ ಕಂಪನಿಯು ತನ್ನ ಟ್ವಿಟ್ಟರ್ ಖಾತೆ "SBI Life Cares" ದಲ್ಲಿ ತನ್ನ ಗ್ರಾಹಕರಿಗಾಗಿ 4 ಅತ್ಯಂತ ಪ್ರಮುಖ ಅಪ್ಡೇಟ್‌ಗಳನ್ನು ಪರಿಚಯಿಸಿದೆ.
ವಂಚನೆಯ ಯತ್ನಗಳಿಂದ ಎಚ್ಚರವಾಗಿರಿ, ದೂರು ನೀಡಿ
"ಮೋಸದ ಜಾಲದ ಮೂಲಕ ವಂಚಕರು ನಿಮ್ಮ ವಿಮಾ ಖಾತೆಯ ವಿವರಗಳು ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಕದಿಯಬಹುದು. ಒಂದು ವೇಳೆ ಇಂಥ ವಂಚನೆಯ ಯಾವುದಾದರೂ ಯತ್ನವು ನಿಮ್ಮ ಗಮನಕ್ಕೆ ಬಂದಲ್ಲಿ [email protected] ಗೆ ಇಮೇಲ್ ಕಳುಹಿಸಿ ಅಥವಾ ನಮ್ಮ ಟೋಲ್ ಫ್ರೀ ಸಹಾಯವಾಣಿ 1800 267 9090 ಗೆ ಕರೆ ಮಾಡಿ" ಎಂದು ಎಸ್‌ಬಿಐ ಲೈಫ್ ಕೇರ್ಸ್ ಟ್ವೀಟ್ ಮಾಡಿದೆ.
ಪಾಲಿಸಿ ಹಾಗೂ ನಿಮ್ಮ ಖಾಸಗಿತನದ ಸುರಕ್ಷತೆಗಾಗಿ ಪಾಲಿಸಿಗೆ ಸಂಬಂಧಿಸಿದ ವಿವರಗಳನ್ನು ಯಾವಾಗಲೂ ಗುಪ್ತವಾಗಿ ಇಟ್ಟುಕೊಳ್ಳುವುದು ಕ್ಷೇಮಕರ. ಈ ವಿವರಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವ ಮುನ್ನ ವಿಶ್ವಾಸಾರ್ಹತೆಯ ಬಗ್ಗೆ ಖಾತರಿಪಡಿಸಿಕೊಳ್ಳವುದು ಅಗತ್ಯ.

SBI Life ಫಂಡ್ ಸ್ವಿಚ್ ಹೀಗೆ ಮಾಡಿ
ಫಂಡ್ ಸ್ವಿಚ್ ಮಾಡುವ ಬಗ್ಗೆ ಎಸ್ಬಿಐ ಮತ್ತೊಂದು ಟ್ವೀಟ್ ಮಾಡಿದೆ. "ನಿಮ್ಮ ಎಸ್‌ಬಿಐ ಪಾಲಿಸಿಯ ಫಂಡ್ ಸ್ವಿಚ್ ಮಾಡಬೇಕಾದರೆ ನಮ್ಮ ಕಸ್ಟಮರ್ ಸೆಲ್ಫ್ ಸರ್ವಿಸ್ ಪೋರ್ಟಲ್‌ಗೆ ಲಾಗಿನ್ ಆಗಿ. ಅಲ್ಲಿ 'Fund Switch' ಆಪ್ಷನ್ ಆಯ್ಕೆ ಮಾಡಿ ನಿಮ್ಮ ಕಾರ್ಯವನ್ನು ಪೂರ್ತಿಗೊಳಿಸಿ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ತನ್ನ ಗ್ರಾಹಕರ, ಅದರಲ್ಲೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಎಸ್ಬಿಐ 'ಫಂಡ್ ಸ್ವಿಚ್' ಆಪ್ಷನ್ ಪರಿಚಯಿಸಿದೆ. ಈ ಆಪ್ಷನ್ ಬಳಸಿ ಗ್ರಾಹಕರು ತಾವು ಎಲ್ಲೇ ಇದ್ದರೂ ಯಾವುದೇ ಸಮಯದಲ್ಲಾದರೂ ತಮ್ಮ ಹೂಡಿಕೆಯನ್ನು ಒಂದು ಫಂಡ್‌ನಿಂದ ಇನ್ನೊಂದು ಫಂಡ್‌ಗೆ ವರ್ಗಾಯಿಸಬಹುದು ಮತ್ತು ತಮ್ಮ ಪ್ರೀಮಿಯಂ ಮೊತ್ತದ ವಿನಿಯೋಜನೆಯನ್ನು ಬದಲಾಯಿಸಬಹುದು. ಅದಕ್ಕಾಗಿ ಈ ವೆಬ್ಸೈಟಿಗೆ ಭೇಟಿ ನೀಡಬೇಕು ಇದರಲ್ಲಿ 'Fund Switch' ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು.
ಎಸ್‌ಬಿಐ ಪಾಲಿಸಿ ವಿವರ ಚೆಕ್ ಮಾಡುವುದು ಈಗ ಅತಿ ಸುಲಭ
ಎಸ್‌ಬಿಐ ಪಾಲಿಸಿ ಫಂಡ್ ಧಾರಕರು ಯಾವಾಗ ಬೇಕಾದರೂ, ಎಲ್ಲಿಂದಾದರೂ ತಮ್ಮ ಪಾಲಿಸಿ ವಿವರಗಳನ್ನು ತಕ್ಷಣವೇ ನೋಡಬಹುದಾಗಿದೆ. "ನಿಮ್ಮ ಪಾಲಿಸಿ ವಿವರಗಳನ್ನು ತಕ್ಷಣವೇ ನೋಡಿ. ನಮ್ಮ ಕಸ್ಟಮರ್ ಸ್ವಸಹಾಯ ಸೇವೆ ಪೋರ್ಟಲ್ಗೆ ಲಾಗಿನ್ ಆಗಿ ಅಥವಾ 022 - 62458501 ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ." ಎಂದು ಎಸ್‌ಬಿಐ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.
ಇಷ್ಟು ಮಾತ್ರವಲ್ಲದೆ ಎಸ್ಬಿಐ ಪಾಲಿಸಿಧಾರಕರು +919029006575 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ ತಮ್ಮ ಪಾಲಿಸಿಯ ಎಲ್ಲ ಮಾಹಿತಿಯನ್ನು ವಾಟ್ಸಾಪ್‌ನಲ್ಲಿ ಪಡೆಯಬಹುದು ಹಾಗೂ ನಿರ್ವಹಿಸಬಹುದು ಎಂದೂ ಸಹ ಎಸ್‌ಬಿಐ ಮಾಹಿತಿ ನೀಡಿದೆ. ನಿಮ್ಮ ಫಂಡ್ ನ ಈಗಿನ ಮೌಲ್ಯ ತಿಳಿಯಲು 022-62458501 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು.
ಕಂತು ಕಟ್ಟಿದ ರಸೀದಿ ಪಡೆಯಲು 022-62458504 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ಆಫ್‌ಲೈನ್ ಮೂಲಕ ಯಾವುದಾದರೂ ಎಸ್‌ಬಿಐ ಉತ್ಪನ್ನ ಖರೀದಿಸಬೇಕಿದ್ದರೆ ಅದಕ್ಕಾಗಿ 022-62458508 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು. ಪಾಲಿಸಿ ದಾಖಲೆ ಬರುವುದು ವಿಳಂಬವಾಗಿದ್ದರೆ 022-62458502 ನಂಬರಿಗೆ ಕರೆ ಮಾಡಿ ಮಿಸ್ಡ್ ಕಾಲ್ ಆಗಿ ಕಟ್ ಮಾಡಿದರೆ ಸಾಕು. ರಿನ್ಯೂವಲ್ ಪ್ರೀಮಿಯಂ ಪಾವತಿಯ ಬಗ್ಗೆ ತಿಳಿಯಲು 022-62458511 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು.
ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಕಸ್ಟಮರ್ ಕೇರ್ ಸಂಖ್ಯೆ ಬದಲಾವಣೆ
ನಿಮ್ಮ ಎಸ್‌ಬಿಐ ಪಾಲಿಸಿಯ ಬಗ್ಗೆ ತಕ್ಷಣವೇ ಮಾಹಿತಿ ಪಡೆಯಲು ನಮ್ಮ ಮಿಸ್ಡ್ ಕಾಲ್ ಸೇವೆ ಉಪಯೋಗಪಡಿಸಿಕೊಳ್ಳಿ ಎಂದು ಎಸ್‌ಬಿಐ ಹೇಳಿದೆ. 30-09-2021 ರಿಂದ ಜಾರಿಗೆ ಬಂದಂತೆ ಪಾಲಿಸಿಗೆ ಸೇವೆಗಳಿಗೆ ಸಂಬಂಧಿಸಿದ ಮಿಸ್ಡ್ ಕಾಲ್ ಸಂಖ್ಯೆಗಳಲ್ಲಿ ಬದಲಾವಣೆಯಾಗಿದೆ. ಹೀಗಾಗಿ ಗ್ರಾಹಕರು ಇದನ್ನು ಗಮನಿಸಿ ಹೊಸ ಸಂಖ್ಯೆಗಳ ಮೂಲಕ ಸೇವೆ ಪಡೆದುಕೊಳ್ಳಬೇಕೆಂದು ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.


Click it and Unblock the Notifications