For Quick Alerts
ALLOW NOTIFICATIONS  
For Daily Alerts

43 ಚೀನೀ ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಭಾರತ

By ಅನಿಲ್ ಆಚಾರ್
|

ಭಾರತ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದ್ದು, ದೇಶದಲ್ಲಿ 43 ಅಪ್ಲಿಕೇಷನ್ ಗಳನ್ನು ನಿಷೇಧ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ (MeitY) 43 ಚೀನೀ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಿದೆ. ಅದರಲ್ಲಿ ಅಲಿ ಎಕ್ಸ್ ಪ್ರೆಸ್, ಸ್ನ್ಯಾಕ್ ವಿಡಿಯೋ, ಚೀನಾ ಲವ್ ಮತ್ತಿತರ ಅಪ್ಲಿಕೇಷನ್ ಗಳು ಒಳಗೊಂಡಿವೆ.

 

ಒಂದು ಭಾಷಣಕ್ಕೆ 2.5 ಲಕ್ಷ ಕೋಟಿಗೂ ಹೆಚ್ಚು ಬೆಲೆ ತೆತ್ತ ಜಾಕ್ ಮಾಒಂದು ಭಾಷಣಕ್ಕೆ 2.5 ಲಕ್ಷ ಕೋಟಿಗೂ ಹೆಚ್ಚು ಬೆಲೆ ತೆತ್ತ ಜಾಕ್ ಮಾ

ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವಂಥ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿರುವುದು ಮತ್ತು ಭಾರತದ ರಕ್ಷಣೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತವಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

 
43 ಚೀನೀ ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಭಾರತ

ಭಾರತ ಮತ್ತು ಚೀನಾ ಮಧ್ಯೆ ಗಡಿ ವಿವಾದ ತಲೆದೋರಿದ ಮೇಲೆ ಈ ರೀತಿ ಮೊಬೈಲ್ ಅಪ್ಲಿಕೇಷನ್ ಗಳನ್ನು ಹಲವು ಕಂತುಗಳಲ್ಲಿ ನಿಷೇಧ ಮಾಡಲಾಗಿದೆ. ಅದರಲ್ಲೂ ಟಿಕ್ ಟಾಕ್ ನಂಥ ಜನಪ್ರಿಯ ಅಪ್ಲಿಕೇಷನ್ ಗಳಿಗೆ ಆ ಬಿಸಿ ತಟ್ಟಿದೆ. ಇದೀಗ ಹೊಸ ಪಟ್ಟಿ ಸೇರ್ಪಡೆ ಆಗಿದೆ.

English summary

Govt bans 43 Chinese Mobile apps in India

43 more Chinese mobile applications ban by government in India on Tuesday. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X