ದೆಹಲಿಯಲ್ಲಿ ಇಂದು ನಡೆದ 44 ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ವಿನಾಯಿತಿ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆದಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಕೋವಿಡ್-19 ಸಂಬಂಧಿತ ಔಷಧಿ ಮತ್ತು ಉಪಕರಣಗಳು ಸೇರಿದಂತೆ ಕೋವಿಡ್ -19 ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನ ಮನ್ನಾ ಮಾಡಿದ್ದಾರೆ. ಈ ಮೂಲಕ ರಾಜ್ಯಗಳು ಈ ಹಿಂದೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ ಬೇಡಿಕೆಯು ಈಡೇರಿದಂತಾಗಿದೆ. ಕೋವಿಡ್-19 ಅಗತ್ಯ ವಸ್ತುಗಳ ಮೇಲಿನ ತೆರಿಗೆ ಪರಿ ಪರಿಹಾರವನ್ನು ಪರಿಗಣಿಸುವಂತೆ ರಾಜ್ಯಗಳು ಸರ್ಕಾರವನ್ನ ಒತ್ತಾಯಿಸಿದ್ದವು.

ಸಭೆಯ ಫಲಿತಾಂಶದ ಕುರಿತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಬ್ಲಾಕ್ ಫಂಗಸ್ ಔಷಧಿ ಮೇಲಿನ ತೆರಿಗೆ ಕಡಿತ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಗತ್ಯವಿರುವ ಕಪ್ಪು ಶಿಲೀಂಧ್ರ(ಬ್ಲಾಕ್ ಫಂಗಸ್) ಔಷಧಿ ಸೇರಿದಂತೆ ಇತರ ವಸ್ತುಗಳನ್ನು ತೆರಿಗೆ ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.
ಆ್ಯಂಬುಲೆನ್ಸ್ ಮೇಲಿನ ಜಿಸಿಎಸ್ ದರ ಇಳಿಕೆ
ಆ್ಯಂಬುಲೆನ್ಸ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28 ರಿಂದ 12ಕ್ಕೆ ಇಳಿಸಲಾಗುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಜೊತೆಗೆ ದೇಹದ ಉಷ್ಣತೆಯನ್ನ ಪರಿಶೀಲಿಸುವ ಸಾಧನಗಳ ಮೇಲೆ ಜಿಎಸ್‌ಟಿಯನ್ನ ಶೇ. 5ಕ್ಕೆ ತಗ್ಗಿಸಲಾಗಿದೆ.
ಈ ದರಗಳು ಸೆಪ್ಟೆಂಬರ್ ವರೆಗೆ ಮಾನ್ಯವಾಗಿರುತ್ತವೆ, ಆಗಸ್ಟ್ ಅಂತ್ಯದ ವೇಳೆಗೆ ಸರ್ಕಾರ ಶಿಫಾರಸು ಮಾಡಿದೆ ಎಂದು ಸೀತಾರಾಮನ್ ಹೇಳಿದರು.
ವೈದ್ಯಕೀಯ ಆಮ್ಲಜನಕ ಮೇಲಿನ ತೆರಿಗೆ ಶೇ. 5ಕ್ಕೆ ಇಳಿಕೆ
ಜಿಎಸ್‌ಟಿ ಕೌನ್ಸಿಲ್ ವೈದ್ಯಕೀಯ ಆಮ್ಲಜನಕ ಮತ್ತು ಸಂಬಂಧಿತ ಗೇರ್, ಪಲ್ಸ್ ಆಕ್ಸಿಮೀಟರ್ ಮತ್ತು ಕೋವಿಡ್ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆಯನ್ನ ಶೇಕಡಾ 12ರಿಂದ 5ಕ್ಕೆ ಇಳಿಸಲಾಗಿದೆ.
ದೇಶೀಯ ಕೊರೊನಾ ಲಸಿಕೆಗಳ ಮೇಲೆ ಶೇ. 5ರಷ್ಟು ತೆರಿಗೆ
ಪ್ರಸ್ತುತ, ದೇಶೀಯವಾಗಿ ತಯಾರಿಸಿದ ಕೋವಿಡ್-19 ಲಸಿಕೆಗಳ ಮೇಲೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಇದು ಕೋವಿಡ್-19 ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳಿಗೆ ಶೇಕಡಾ 12ರಷ್ಟು ಆಗಿದೆ.
ಕಳೆದ ಸಭೆಯಲ್ಲಿ ಕೋವಿಡ್-19 ಉಪಕರಗಳಿಗೆ IGST ವಿನಾಯಿತಿ ನೀಡಲಾಗಿತ್ತು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಕಳೆದ 43ನೇ ಜಿಎಸ್‌ಟಿ ಸಭೆಯಲ್ಲಿ 2021 ರ ಆಗಸ್ಟ್ 31 ರವರೆಗೆ ಕೋವಿಡ್‌ಗೆ ಸಂಬಂಧಿಸಿದ ಸರಬರಾಜಿನಲ್ಲಿ ಐಜಿಎಸ್‌ಟಿಗೆ ವಿನಾಯಿತಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು.
ಮೇ 28 ರಂದು ನಡೆದ ಈ ಸಭೆಯಲ್ಲಿ, ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು ಮತ್ತು ಇತರ ಆಮ್ಲಜನಕ ಸಂಗ್ರಹಣೆ ಮತ್ತು ಸಾರಿಗೆ ಉಪಕರಣಗಳು, ಕೆಲವು ರೋಗನಿರ್ಣಯದ ಗುರುತುಗಳ ಪರೀಕ್ಷಾ ಕಿಟ್‌ಗಳು ಮತ್ತು COVID-19 ಸಂಬಂಧಿತ ಸರಕುಗಳಿಗೆ ಐಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಶಿಫಾರಸು ಮಾಡಿತ್ತು.


Click it and Unblock the Notifications