For Quick Alerts
ALLOW NOTIFICATIONS  
For Daily Alerts

ಭಾರತದ 130 ಕೋಟಿ ಜನರಿಗೆ ಕೊರೊನಾ ಲಸಿಕೆಗಾಗಿ 50,000 ಕೋಟಿ ರುಪಾಯಿ

|

ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇಶ, ಚೀನಾ ನಂತರದ ಸ್ಥಾನದಲ್ಲಿ ಇರುವ ಭಾರತದ ಜನರಿಗೆ ಕೊರೊನಾ ಲಸಿಕೆಗಾಗಿ ಸರ್ಕಾರದಿಂದ 50,000 ಕೋಟಿ ರುಪಾಯಿ (700 ಕೋಟಿ ಅಮೆರಿಕನ್ ಡಾಲರ್) ಮೀಸಲಿರಿಸಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

 

ದೇಶದ 130 ಕೋಟಿ ಜನಸಂಖ್ಯೆಗೆ ಕೊರೊನಾ ಲಸಿಕೆಗಾಗಿ ಒಬ್ಬರಿಗೆ 6ರಿಂದ 7 ಅಮೆರಿಕನ್ ಡಾಲರ್ ವೆಚ್ಚ ಆಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಅಂದಾಜು ಮಾಡಿದೆ ಎಂದು ತಿಳಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ 31ನೇ ತಾರೀಕಿನವರೆಗೆ ಈ ಹಣವನ್ನು ಮೀಸಲಿರಿಸಲಾಗಿದೆ. ಇನ್ನು ಈ ಉದ್ದೇಶಕ್ಕಾಗಿ ಹಣಕಾಸಿಗೆ ಯಾವುದೇ ಸಮಸ್ಯೆ ಇಲ್ಲ ಅಂತಲೂ ಹೇಳಲಾಗಿದೆ.

 

"ಕೆಲಸ ಹೋಗಬಹುದು ಎಂಬ ಆತಂಕದಲ್ಲಿ ಜಗತ್ತಿನ ಶೇ 50ರಷ್ಟು ಮಂದಿ"

ಸರ್ಕಾರದ ಬೆಂಬಲ ಇರುವ ಸಮಿತಿಯ ಪ್ರಕಾರ, ಭಾರತದಲ್ಲಿ ಕೊರೊನಾ ಮುಂದಿನ ಫೆಬ್ರವರಿ ಹೊತ್ತಿಗೆ ಹತೋಟಿಗೆ ಬರುತ್ತದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕ ಪ್ರಗತಿಗೆ ಪೆಟ್ಟು ಬಿದ್ದಿದೆ. ಇನ್ನು ಅಕ್ಟೋಬರ್ ಕೊನೆ ವಾರ ಹಾಗೂ ನವೆಂಬರ್ ಮೊದಲ ವಾರದ ಹಬ್ಬದ ಋತುವಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಆತಂಕ ಇದ್ದೇ ಇದೆ.

ಭಾರತದ 130 ಕೋಟಿ ಜನರಿಗೆ ಕೊರೊನಾ ಲಸಿಕೆಗಾಗಿ 50,000 ಕೋಟಿ ರುಪಾಯಿ

ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ನಿತ್ಯವೂ ಎಂಟು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿ ಆಗುತ್ತಿವೆ. ಎಷ್ಟು ಬೇಗ ಕೊರೊನಾ ಸೋಂಕು ತಲುಪಿಸುವುದಕ್ಕೆ ಸಾಧ್ಯವೋ ಅಷ್ಟು ಬೇಗ ಭಾರತೀಯರಿಗೆ ತಲುಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

English summary

Covid-19: Modi Govt Has Set Aside Rs 50,000 Crore for Vaccination, Says Report

Government of India sets aside 50,000 crore for corona vaccine of people. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X