ಕೊರೊನಾ ಪರಿಣಾಮ: ಇಪಿಎಫ್ ಹಿಂತೆಗೆಯಲು ಮುಗಿಬಿದ್ದ ಉದ್ಯೋಗಿಗಳು

ನವದೆಹಲಿ: ಏಪ್ರಿಲ್ 1 ರಿಂದ ಜೂನ್ 30 ರವರೆಗೆ 55 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಂದ ಹಣವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾವೈರಸ್ ನಂತರ ಲಾಕ್‌ಡೌನ್ ಸಂಭವಿಸಿ ಅನೇಕ ಕಾರ್ಮಿಕರು ಆದಾಯ ನಷ್ಟ, ಉದ್ಯೋಗ ನಷ್ಟ, ಭವಿಷ್ಯದ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಕಳೆದ ಮೂರು ವಾರಗಳಲ್ಲಿ ದಿನಕ್ಕೆ ಒಂದು ಲಕ್ಷ ಜನರು ತಮ್ಮ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಂದ ಹಣವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಈ ಹಣಕಾಸು ವರ್ಷದಲ್ಲಿ ಸುಮಾರು ₹ 15,000 ಕೋಟಿ ಮೌಲ್ಯದ ಹೆಚ್ಚಿನ ಹಕ್ಕುಗಳನ್ನು ಇಪಿಎಫ್‌ಒ ಇತ್ಯರ್ಥಪಡಿಸಿದೆ. ಜೂನ್ 9 ಮತ್ತು ಜೂನ್ 29 ರ ನಡುವೆ ಸುಮಾರು 20 ಲಕ್ಷ ಜನರು ತಮ್ಮ ಉಳಿತಾಯವನ್ನು ಹಿಂತೆಗೆದುಕೊಂಡಿದ್ದಾರೆ. ಲಾಕ್‌ಡೌನ್ ಸಡಿಲಿಕೆಯ ನಂತರವೂ ಇಪಿಎಫ್ ಹಿಂತೆಗೆದುಕೊಳ್ಳುವುದು ನಿಲ್ಲುತ್ತಿಲ್ಲ.

ಕೊರೊನಾ ಪರಿಣಾಮ: ಇಪಿಎಫ್ ಹಿಂತೆಗೆಯಲು ಮುಗಿಬಿದ್ದ ಉದ್ಯೋಗಿಗಳು

ಭವಿಷ್ಯ ನಿಧಿ ಇಪಿಎಫ್‌ಒ ಸದಸ್ಯರಿಗೆ ಉತ್ತಮ ಸಹಾಯವಾಗಿದೆ. ವಿಶೇಷವಾಗಿ ಮಾಸಿಕ ವೇತನ ₹ 15,000 ಕ್ಕಿಂತ ಕಡಿಮೆ ಇರುವ ಸದಸ್ಯರಿಗೆ ಬಹಳಷ್ಟು ಅನುಕೂಲ ಮಾಡಿ ಕೊಟ್ಟಿದೆ. ಅನೇಕ ಕಾರ್ಮಿಕರಿಗೆ ಸಮಯೋಚಿತ ಪರಿಹಾರವನ್ನು ಒದಗಿಸಿದೆ ಎಂದು ಇಪಿಎಫ್ಓ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಇಪಿಎಫ್ ವೇಗವಾಗಿ ಪಾವತಿ ಮಾಡಲು ತಂತ್ರಜ್ಞಾನದ ಅಳವಡಿಕೆ ಸಹಾಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+