ಚೀನಾ ಮೂಲದ AIIB ಬ್ಯಾಂಕ್‌ನಿಂದ ಭಾರತಕ್ಕೆ 5,714 ಕೋಟಿ ರೂಪಾಯಿ ಸಾಲ

ನವದೆಹಲಿ: ಭಾರತ ಚೀನಾ ಗಡಿ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ Asian Infrastructure Investment Bank (AIIB) ಭಾರತಕ್ಕೆ ಸುಮಾರು 5,714 ಕೋಟಿ ರೂಪಾಯಿ ಸಾಲವನ್ನು ಮಂಜೂರು ಮಾಡಿದೆ.

ಕೋವಿಡ್ -19 ರ ದುಷ್ಪರಿಣಾಮದ ವಿರುದ್ಧ ಭಾರತ ಸರ್ಕಾರಕ್ಕೆ ಹೋರಾಟವನ್ನು ಬಲಪಡಿಸಲು ಈ ಸಾಲ ಸಹಾಯ ಮಾಡಲಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನ (ಎಡಿಬಿ) ಸಹಕಾರದೊಂದಿಗೆ ಈ ಸಾಲ ಭಾರತಕ್ಕೆ ಸಂದಿದೆ. ಸರ್ಕಾರದ ವ್ಯವಹಾರಗಳಿಗೆ ಆರ್ಥಿಕ ನೆರವು ನೀಡುವುದು, ಅಗತ್ಯವಿರುವವರಿಗೆ ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ವಿಸ್ತರಿಸುವುದು ಮತ್ತು ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಸಾಲ ಸಹಾಯಕವಾಗಲಿದೆ ಎಂದು ವರದಿ ಹೇಳಿದೆ. ಭಾರತಕ್ಕೆ ಒಟ್ಟು ಎಐಐಬಿಯ 3.6 ಬಿಲಿಯನ್ ಡಾಲರ್ ಸಾಲವನ್ನು ಈಗಾಗಲೇ ಅನುಮೋದಿಸಲಾಗಿದೆ.

ಚೀನಾ ಮೂಲದ AIIB ಬ್ಯಾಂಕ್‌ನಿಂದ ಭಾರತಕ್ಕೆ 5,714 ಕೋಟಿ ರೂಪಾಯಿ ಸಾಲ

ಕೋವಿಡ್ ವಿರುದ್ಧದ ಹೋರಾಟದ ಸಲುವಾಗಿ Asian Infrastructure Investment Bank (AIIB) ಮತ್ತೆ ಹೆಚ್ಚುವರಿಯಾಗಿ ಭಾರತಕ್ಕೆ 5,714 ಕೋಟಿ ರೂಪಾಯಿ ಸಾಲ ಸಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಗಡಿ ವಿಷವಾಗಿ ಚೀನಾ ಹಾಗೂ ಭಾರತ ನಡುವೆ ವಿವಾದ ತಾರಕಕ್ಕೆ ಏರಿಕೆಯಾಗಿರುವ ಹೊತ್ತಿನಲ್ಲಿ AIIB ಯ ಈ ಕ್ರಮ ಭಾರತದ ಆರ್ಥಿಕ ತಜ್ಞರನ್ನು ಅಚ್ಚರಿಗೆ ದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+