5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದ ಬಿಡ್ಡಿಂಗ್ ನಾಲ್ಕು ಸುತ್ತಿನಲ್ಲಿ ನಡೆದಿದ್ದು, ಐದನೇ ಸುತ್ತಿನ ಬಿಡ್ಡಿಂಗ್ ಇಂದು (ಜುಲೈ 27) ಆರಂಭವಾಗಿದೆ. ಮೊದಲ ದಿನದ ಹರಾಜಿನಲ್ಲಿ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ ಎಂದು ಸರ್ಕಾರ ಹೇಳಿದೆ.
ಮುಕೇಶ್ ಅಂಬಾನಿ, ಸುನೀಲ್ ಭಾರ್ತಿ ಮಿತ್ತಲ್ ಹಾಗೂ ಗೌತಮ್ ಅದಾನಿ 5ಜಿ ಸ್ಪೆಕ್ಟ್ರಮ್ ಹರಾಜನ್ನು ಗೆಲ್ಲುವ ಸಲುವಾಗಿ 1.45 ಟ್ರಿಲಿಯನ್ ಬಿಡ್ಡಿಂಗ್ ಮಾಡಿದ್ದಾರೆ. ಈ ಬಿಡ್ಡಿಂಗ್‌ಗಲ್ಲಿ ಈ ದಿಗ್ಗಜರ ನೇತೃತ್ವದ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್ ಭಾಗಿಯಾಗಿದೆ. ಈ ಪೈಕಿ ಅದಾನಿ ಡೇಟಾ ನೆಟ್‌ವರ್ಕ್ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಂಸ್ಥೆಯಾಗಿದೆ.
2016 ಮತ್ತು 2021ರಲ್ಲಿ ನಡೆದಿದ್ದ ಹರಾಜಿನಲ್ಲಿ ಯಾವುದೇ ಸಂಸ್ಥೆಯು 700 MHz ಬ್ಯಾಂಡ್‌ಗೆ ಬಿಡ್ಡ್ ಮಾಡಿರಲಿಲ್ಲ. ಆದರೆ ಈ ಹರಾಜಿನಲ್ಲಿ 700 MHz ಬ್ಯಾಂಡ್‌ಗೂ ಬಿಡ್ಡ್ ನಡೆದಿದೆ. 700 MHz ಬ್ಯಾಂಡ್‌ಗೆ 39,270 ಕೋಟಿ ರೂಪಾಯಿ ಬಿಡ್ಡಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದಿನ ಬಡ್ಡಿಂಗ್ ದಾಖಲೆ ಮುರಿಯುತ್ತಾ?
"ಎಲ್ಲಾ ನಿರೀಕ್ಷೆಯನ್ನು ಮೀರಿ ಮೊದಲ ದಿನ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದೆ. ಈ ಹಿಂದೆ 2015ರಲ್ಲಿ ನಡೆದಿದ್ದ ಬಿಡ್ಡಿಂಗ್ ವೇಳೆ ಸುಮಾರು 1.09 ಟ್ರಿಲಿಯನ್ ಆದಾಯ ಸಂಗ್ರಹವಾಗಿತ್ತು. ಈ ದಾಖಲೆಯನ್ನು ಈ 5ಜಿ ಸ್ಪೆಕ್ಟ್ರಮ್ ಹರಾಜು ಮುರಿಯುವ ನಿರೀಕ್ಷೆ ಇದೆ," ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮೊದಲ ದಿನವೇ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ. ಆರೋಗ್ಯಕರವಾಗಿ ಬಿಡ್ಡರ್‌ಗಳು ಸ್ಪರ್ಧಿಸುತ್ತಿದ್ದಾರೆ. ಇದು ಉದಯೋನ್ಮುಖ ಇಂಡಸ್ಟ್ರೀಯಾಗಿ ಬದಲಾಗುತ್ತಿದೆ. ಈಗ ಹೊಸ ಹೂಡಿಕೆ ಲಭ್ಯವಾಗುತ್ತಿದೆ. ಸೇವಾ ಗುಣಮಟ್ಟವೂ ಉತ್ತಮವಾಗುತ್ತದೆ. ಹೊಸ ಟೆಕ್ನಾಲಜಿಯ ಪರಿಚಯವಾಗುತ್ತದೆ ಎಂದು ಕೂಡಾ ಸಚಿವರು ಹೇಳಿದ್ದಾರೆ.
ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿದೆ. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ. 20 ಕಂತಿನ ಮೂಲಕ ಬಿಡ್ ಗೆದ್ದವರು ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications