5G ಬಳಕೆಗೆ ಇನ್ನೂ 5 ವರ್ಷ ಕಾಯಲೇಬೇಕು

4G ಬಳಕೆದಾರರೇ ನೀವು 5G ಬಳಸಬೇಕು ಎಂದು ಆಸೆಯನ್ನು ಹೊಂದಿದ್ದರೆ ನಿಮ್ಮ ಆಸೆ ಸದ್ಯಕ್ಕೆ ಈಡೇರುವುದಿಲ್ಲ. ಏಕೆಂದರೆ ಭಾರತದಲ್ಲಿ 5G ಸೇವೆಯು ಸದ್ಯಕ್ಕೆ ಆರಂಭವಾಗುವಂತೆ ಕಾಣುತ್ತಿಲ್ಲ. ಪ್ರಸ್ತುತ ವಿದ್ಯಮಾನಗಳ ಪ್ರಕಾರ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 5G ಸೇವೆ ಸಾಧ್ಯತೆ ಇಲ್ಲ.

ಅಮೆರಿಕ, ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ 5G ಸೇವೆ ಲಭ್ಯವಿದೆ. ಆದರೆ ಭಾರತದಲ್ಲಿ ಸದ್ಯಕ್ಕಂತೂ ಈ ಸೇವೆ ಸಿಗೋದು ಅನುಮಾನವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಬರುವ ವರ್ಷದಲ್ಲಿ 5G ಸೇವೆ ದೇಶಕ್ಕೆ ಕಾಲಿಡಬೇಕಿತ್ತು. ಆದರೆ ಭಾರತದಲ್ಲಿ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧತೆಗಳು ಪೂರ್ಣಗೊಳ್ಳದೆ ಇರುವುದರಿಂದ ಸದ್ಯಕ್ಕೆ ಆ ಸೇವೆಯ ಲಭ್ಯತೆಯಿಲ್ಲ.

5G ಬಳಕೆಗೆ ಇನ್ನೂ 5 ವರ್ಷ ಕಾಯಲೇಬೇಕು

'ನಾವು ಕನಿಷ್ಠ 5 ವರ್ಷಗಳವರೆಗೂ 5G ಸೇವೆಯನ್ನು ಮುಂದಕ್ಕೆ ತಳ್ಳಿದ್ದೇವೆ. ಕೆಲವು ಮೂಲ ಸೌಕರ್ಯಗಳ ಅಲಭ್ಯತೆ ಕಾರಣ 5 ವರ್ಷಗಳು ಮುಂದೆ ಹೋಗುವ ಸಾಧ್ಯತೆ ಇದೆ' ಎಂದು ಸೆಲ್ಯುಲರ್ ಆಪರೇಷನ್ ಅಸೋಸಿಯೇಷನ್ ಆಫ್ ಇಂಡಿಯಾ (COAI)ದ ನಿರ್ದೇಶಕ ರಂಜನ್ ಎಸ್. ಮ್ಯಾಥ್ಯೂಸ್ ಹೇಳಿದ್ದಾರೆ.

ಮೊದಲಿಗೆ ಬೆಲೆ ಏರಿಕೆ ಉದ್ಯಮ್ಮಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ . ಜೊತೆಗೆ ಕ್ವಾಂಟಮ್ ಸಂಚಿಕೆಯು ಹೊರಬಂದಿದೆ. ಇದರಿಂದಾಗಿ 5G ವಿಳಂಭಕ್ಕೆ ಕಾರಣವಾಗುತ್ತಿದೆ ಎಂದು ರಂಜನ್ ಎಸ್. ಮ್ಯಾಥ್ಯೂಸ್ ತಿಳಿಸಿದ್ದಾರೆ.

ಅತಿಯಾದ ಮೂಲ ಬೆಲೆಯಿಂದಾಗಿ ಭಾರತೀಯ ಮೊಬೈಲ್ ಕಂಪನಿಗಳು 5ಜಿ ನೆಟವರ್ಟ್ ಅನ್ನು ಕನಿಷ್ಠ 5 ವರ್ಷ ಮುಂದಕ್ಕೆ ತಳ್ಳಿವೆ ಎಂಬುದು ಇವರ ಅಭಿಪ್ರಾಯವಾಗಿದೆ. ಭಾರತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಸಂಸ್ಥೆಗಳನ್ನು COAI ನಿರ್ದೇಶಕ ರಂಜನ್ ಎಸ್. ಮ್ಯಾಥ್ಯೂಸ್ ಪ್ರತಿನಿಧಿಸುತ್ತಿದ್ದಾರೆ.

5 ತಂತ್ರಜ್ಞಾನವು ಈಗಿರುವ 4Gಗಿಂತ 100 ಪಟ್ಟು ಹೆಚ್ಚು ವೇಗವನ್ನು ಹೊಂದಿದೆ. 1 ಜಿಬಿಯಷ್ಟು ಗಾತ್ರದ ಚಲನಚಿತ್ರವು ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಆಗುತ್ತದೆ. ಜೊತೆಗೆ 4G ಡೇಟಾಗೆ ಹೋಲಿಸಿದರೆ ದುಬಾರಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+