ಭಾರತದಲ್ಲಿ 5 ಜಿ ಸ್ಪೆಕ್ಟ್ರಮ್‌ನ ಮೊದಲ ಹರಾಜಿನಲ್ಲಿ ಯಾವೆಲ್ಲಾ ಸಂಸ್ಥೆಗಳು ಭಾಗಿಯಾಗಲಿದೆ ಎಂಬುವುದು ಅಂತಿಮವಾಗಿದೆ. ಈ ಹಿಂದೆ ಟೆಲಿಕಾಂ ಇಲಾಖೆಯು ಈವರೆಗೆ ಅದಾನಿ ಡೇಟಾ ನೆಟ್‌ವರ್ಕ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಮ್, ವೊಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಅರ್ಜಿ ಸಲ್ಲಿಕೆ ಮಾಡಿದೆ ಎಂದು ತಿಳಿಸಿತ್ತು. ಈಗ ಈ ನಾಲ್ಕು ಸಂಸ್ಥೆಗಳ ಅರ್ಜಿಯನ್ನು ಅನುಮೋದನೆ ಮಾಡಲಾಗಿದೆ.
ಜುಲೈ 26 ರಂದು ಭಾರತದಲ್ಲಿ 5 ಜಿ ಸ್ಪೆಕ್ಟ್ರಮ್‌ನ ಮೊದಲ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜಾಗಿದೆ.
ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ. ಹರಾಜು ಸುಮಾರು 4.3 ಲಕ್ಷ ಕೋಟಿ ಮೌಲ್ಯದ 72,097.85 MHz ಸ್ಪೆಕ್ಟ್ರಮ್‌ನದ್ದು ಆಗಿದೆ. ಈ ನಾಲ್ಕು ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಹರಾಜು ಗೆಲ್ಲಲು ಸಂಸ್ಥೆಗಳ ನಡುವೆ ಭಾರೀ ಪೈಪೋಟಿ
ಮಾರುಕಟ್ಟೆಯ ಪ್ರಮುಖ ನಾಯಕ ಎಂದೇ ಕರೆಸಿಕೊಳ್ಳುವ ಜಿಯೋ ಸಂಸ್ಥೆಯು 5 ಜಿಗಾಗಿ 14,000 ಕೋಟಿ ರೂಪಾಯಿಗಳ ಇಎಂಡಿಯನ್ನು ಈಗಾಗಲೇ ಸಲ್ಲಿಕೆ ಮಾಡಿದೆ. ಮುಂಬರುವ ಹರಾಜಿನಲ್ಲಿ ಗೆಲ್ಲಲು ಜಿಯೋ ಈಗಲೇ ತಯಾರಿ ನಡೆಸಿದೆ. ಇನ್ನು ಹೊಸದಾಗಿ ಪ್ರವೇಶ ಮಾಡಿದ ಅದಾನಿ ಡೇಟಾ ನೆಟ್‌ವರ್ಕ್‌ಗಳು 100 ಕೋಟಿ ರೂಪಾಯಿ ಸಂಗ್ರಹಿಸಿವೆ. ಭಾರ್ತಿ ಏರ್‌ಟೆಲ್ 5500 ಕೋಟಿ ರೂಪಾಯಿ ಇಎಮ್‌ಡಿ ಇರಿಸಿದೆ. ಹಾಗೆಯೇ ಪ್ಯಾನ್-ಇಂಡಿಯಾ 5 ಜಿ ಸ್ಪೆಕ್ಟ್ರಮ್ ಅನ್ನು ನಾವೇ ಖರೀದಿ ಮಾಡಬಲ್ಲೆವು ಎಂದು ಖಚಿತಪಡಿಸಿದೆ. ಈ ನಡುವೆ ಹಣಕಾಸು ಕೊರತೆಯಿರುವ ವೊಡಾಫೋನ್ ಐಡಿಯಾ (VI) 2,200 ಕೋಟಿ ರೂಪಾಯಿಗಳ ಇಎಮ್‌ಡಿ ಸಲ್ಲಿಕೆ ಮಾಡುವ ಮೂಲಕ ತಜ್ಞರನ್ನು ಆಶ್ಚರ್ಯಗೊಳಿಸಿದೆ.
ಸಂಸತ್ತು ಜೂನ್ ತಿಂಗಳಿನಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜಿಗೆ ಅನುಮೋದನೆ ನೀಡಿದೆ. ಸೆಕ್ಟರ್ ರೆಗ್ಯುಲೇಟರ್ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಶಿಫಾರಸು ಮಾಡಿದ ಮೀಸಲು ಬೆಲೆಯಲ್ಲಿ ಹರಾಜಿಗೆ ಅನುಮೋದನೆ ನೀಡಿದೆ.
ಬಿಡ್ಡರ್‌ಗಳ ಆಕರ್ಷಣೆಗೆ ತಯಾರಿ
ಇನ್ನು ಈಗಾಗಲೇ ಬಿಡ್ಡರ್‌ಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾವತಿ ನಿಯಮವನ್ನು ಸರಳ ಮಾಡಲಾಗಿದೆ. ಬಿಡ್ ಗೆದ್ದ ಸಂಸ್ಥೆಯು ಮುಂಗಡ ಪಾವತಿ ಮಾಡಬೇಕೆಂಬ ನಿಯಮವನ್ನು ಕೂಡಾ ಸರಳ ಮಾಡಲಾಗಿದೆ. 20 ಕಂತಿನ ಮೂಲಕ ಬಿಡ್ ಗೆದ್ದವರು ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ. ಅದಾನಿ ಸಂಸ್ಥೆಯು ಈ ಬಿಡ್‌ನಲ್ಲಿ ಭಾಗಿಯಾಗಿರುವ ಕಾರಣದಿಂದಾಗಿ ಭಾರೀ ಸ್ಪರ್ಧೆ ಇರುವ ಸಾಧ್ಯತೆ ಇದೆ. ಅದಾನಿ ಸಂಸ್ಥೆಯೇ ಈ ಬಿಡ್ ಅನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಫ್ರಿಕ್ವೆನ್ಸಿಗಳು ಯಾವ ರೀತಿ ಇರಲಿದೆ?
ಈ ವರ್ಷ ಬೆಂಗಳೂರು ಸೇರಿ ಪ್ರಮುಖ 13 ನಗರಗಳಲ್ಲಿ 5ಜಿ ಸ್ಪೆಕ್ಟ್ರಮ್ ಆರಂಭದ ಬಗ್ಗೆ ಈ ಹಿಂದೆಯೇ ವರದಿ ಆಗಿದ್ದವು. ಪ್ರಮುಖವಾಗಿ 5ಜಿ ನೆಟ್‌ವರ್ಕ್ ನಮ್ಮ ನೆಟ್‌ವರ್ಕ್ ಅನ್ನು ಇನ್ನಷ್ಟು ವೇಗಗೊಳಿಸಲಿದೆ. ಇದು ಮೂರು ಬಾಂಡ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಕಡಿಮೆ, ಮಧ್ಯಮ ಹಾಗೂ ಹೆಚ್ಚು ಫ್ರಿಕ್ವೆನ್ಸಿಯಲ್ಲಿ ಇದು ಕಾರ್ಯನಿರ್ವಹಣೆ ಮಾಡಲಿದೆ. ಕಡಿಮೆ ಫ್ರಿಕ್ವೆನ್ಸಿಯಲ್ಲಿ 100 Mbps ನೆಟ್‌ವರ್ಕ್ ಸ್ಪೀಡ್ ಲಿಮಿಟ್ ಇರಲಿದೆ. ಇನ್ನು ಹೆಚ್ಚು ಫ್ರಿಕ್ವೆನ್ಸಿಯಲ್ಲಿ 20 Gbps ಗೂ ವರೆಗೆ ನೆಟ್‌ವರ್ಕ್ ಸ್ಪೀಡ್ ಇರಲಿದೆ.


Click it and Unblock the Notifications