ನವದೆಹಲಿ, ಜನವರಿ.20: ಭಾರತದಲ್ಲಿ ಸಂಚಾರಕ್ಕೆ ರೈಲ್ವೆ ಅಚ್ಚುಮೆಚ್ಚಿನ ವ್ಯವಸ್ಥೆಯಾಗಿದೆ. ದೇಶಾದ್ಯಂತ ರೈಲು ಸಂಚಾರವನ್ನೇ ಅವಲಂಬಿಸಿರುವ ಪ್ರಯಾಣಿಕರೇ ಆಘಾತಕ್ಕೆ ಒಳಗಾಗುವಂತಾ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ.
ಆನ್ ಲೈನ್ ನಲ್ಲಿ ಬುಕ್ ಮಾಡಿದ ಟಿಕೆಟ್ ಖಾತ್ರಿಯಾಗದೇ ಲಕ್ಷ ಲಕ್ಷ ರೈಲ್ವೆ ರಿಸರ್ವ್ ಟಿಕೆಟ್ ಗಳು ರದ್ದು ಆಗಿವೆ ಎಂದು ಪಿಟಿಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಚಂದ್ರಶೇಖರ್ ಗೌಡ ಎಂಬುವವರು ಆರ್ ಟಿಐ ಅಡಿ ಪಡೆದ ಮಾಹಿತಿಯಲ್ಲಿ ಪ್ರತಿ ತಿಂಗಳು 8 ಲಕ್ಷ ರಿಸರ್ವ್ ಮಾಡಿದ್ದ ರೈಲ್ವೆ ಟಿಕೆಟ್ ಗಳು ಕ್ಯಾನ್ಸಲ್ ಆಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ರೈಲ್ವೆ ಇಲಾಖೆಯೇ ವೇಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಗಳನ್ನು ಕನ್ಫರ್ಮ್ ಮಾಡಲು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಳೆದ 2019ರ ಎಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ವೇಟಿಂಗ್ ಲಿಸ್ಟ್ ನಲ್ಲಿದ್ದ 65 ಲಕ್ಷ 68 ಸಾವಿರದ 852 ಟಿಕೆಟ್ ಗಳು ಕನ್ಫರ್ಮ್ ಆಗದೇ ಕ್ಯಾನ್ಸಲ್ ಆಗಿರುವ ಬಗ್ಗೆ ಆರ್ ಟಿಐ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ಟಿಕೆಟ್ ಕನ್ಫರ್ಮ್ ಆಗದಿದ್ದರೆ ಕ್ಯಾನ್ಸಲ್ ಪಕ್ಕಾ:
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಲು ಲಕ್ಷಾಂತರ ಪ್ರಯಾಣಿಕರು ಆನ್ ಲೈನ್ ನಲ್ಲಿ ಸೀಟ್ ರಿಸರ್ವ್ ಮಾಡುತ್ತಾರೆ. ಹೀಗೆ ರಿಸರ್ವ್ ಮಾಡಿರುವ ಟಿಕೆಟ್ ಗಳನ್ನು ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೆ ನಂತರದಲ್ಲಿ ಆ ಟಿಕೆಟ್ ಕನ್ಫರ್ಮ್ ಮೇಷನ್ ಬಗ್ಗೆ ಯಾವುದೇ ಸಂದೇಶಗಳು ಹೋಗುವುದಿಲ್ಲ. ಇದರಿಂದ ಸಾಮಾನ್ಯವಾಗಿ ವೇಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಗಳೆಲ್ಲ ಕ್ಯಾನ್ಸಲ್ ಆಗುತ್ತವೆ. ಟಿಕೆಟ್ ರದ್ದು ಶುಲ್ಕವನ್ನು ಹೊರತುಪಡಿಸಿ ಉಳಿದ ಹಣವನ್ನು ಪ್ರಯಾಣಿಕರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ:
ಮೊದಲಿಗೆ ಹೋಲಿಸಿ ನೋಡಿದಾಗ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ರೈಲ್ವೆ ಸಂಚಾರವನ್ನೇ ಹೆಚ್ಚು ಜನರು ಅವಲಂಬಿಸಿದ್ದಾರೆ. ಕೆಲವು ವಿಶೇಷ ರೈಲುಗಳಲ್ಲಿ ಶೇ.150ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚವಾಗಿದ್ದು, ಇದರಿಂದ ಟಿಕೆಟ್ ರಿಸರ್ವೆಶನ್ ನಲ್ಲಿ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ರೈಲ್ವೆ ಸಂಚಾರ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ತಿಳಿಸಿದ್ದಾರೆ.


Click it and Unblock the Notifications