ಪ್ರಸಕ್ತ ವರ್ಷದ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಕೇವಲ 4.5 ಪರ್ಸೆಂಟ್‌ಗೆ ತಲುಪುವ ಮೂಲಕ ಕಳೆದ 6 ವರ್ಷದಲ್ಲಿ ಕನಿಷ್ಟ ಮಟ್ಟಕ್ಕೆ ಹೋಗಿ ತಲುಪಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 5 ಪರ್ಸೆಂಟ್ ದಾಖಲಾಗಿದ್ದು, ಇದೀಗ ಮತ್ತಷ್ಟು ಕುಸಿತ ಕಂಡು ಶೇಕಡಾ 4.5ಕ್ಕೆ ತಲುಪಿದೆ.
ಜಿಡಿಪಿ ಬೆಳವಣಿಗೆಯು 2018-19 ರ ಆರಂಭಿಕ ತ್ರೈಮಾಸಿಕದಲ್ಲಿ ಉತ್ತಮವಾಗಿತ್ತು. ಮೊದಲ ತ್ರೈಮಾಸಿಕದಲ್ಲಿ 8 ಪರ್ಸೆಂಟ್ ದಾಖಲಾಗಿತ್ತು. ಆ ಬಳಿಕ ಕುಸಿತ ಕಂಡ ಜಿಡಿಪಿ 2018-19 ರ 2ನೇ ತ್ರೈಮಾಸಿಕದಲ್ಲಿ 7 ಪರ್ಸೆಂಟ್‌ಗೆ ಇಳಿಯಿತು. ಅದೇ ವರ್ಷ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ದರವು 6.6 ಪರ್ಸೆಂಟ್ ದಾಖಲಾಗಿತ್ತು. ಹಾಗೆಯೇ ನಾಲ್ಕನೇ ತ್ರೈಮಾಸಿಕದಲ್ಲಿ 5.8 ಪರ್ಸೆಂಟ್ ಗೆ ಕುಸಿಯುವ ಮೂಲಕ ಜಿಡಿಪಿ ಏರಿಕೆ ಇಳಿಕೆಯ ದಾರಿಯಲ್ಲೇ ಮುಂದುವರಿಯಿತು.

ಈ ವರ್ಷದಲ್ಲಿ ಬೆಳವಣಿಗೆ ದರವು ಚೇತರಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಅದರೆ ಪ್ರಸಕ್ತ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್ - ಜೂನ್ ಅವಧಿಯಲ್ಲಿ ಜಿಡಿಪಿ 5 ಪರ್ಸೆಂಟ್ ದಾಖಲಾಗುವ ಮೂಲಕ ದೇಶದ ಆರ್ಥಿಕತೆಯು ಮಂದಗತಿಯತ್ತ ಸಾಗಿದೆ ಎಂಬುದನ್ನ ಸಾರಿತು. ಈ ಜಿಡಿಪಿ ಬಿಡುಗಡೆಯ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಟೀಕೆಗಳು ಎದುರಾದವು.
2019-20ರ 2ನೇ ತ್ರೈಮಾಸಿಕದಲ್ಲಿ ಜಿಡಿಪಿಯು 5ಕ್ಕಿಂತ ಕಡಿಮೆ ದಾಖಲಾಗಲಿದೆ ಎಂದು ಈ ಮೊದಲೇ ಎಸ್‌ಬಿಐ ಸೇರಿದಂತೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವಬ್ಯಾಂಕ್, ಆರ್‌ಬಿ, ವಿವಿಧ ಹಣಕಾಸು ಸಂಸ್ಥೆಗಳು, ಅರ್ಥಶಾಸ್ತಜ್ಞರು ಅಂದಾಜಿಸಿದ್ದರು. ಅಂತೆಯೇ ಜಿಡಿಪಿಯು ಮತ್ತಷ್ಟು ಕುಸಿತ ಕಂಡಿದ್ದು ಸತತ 6ನೇ ತ್ರೈಮಾಸಿಕದಲ್ಲಿ ಇಳಿಕೆ ದಾಖಲಿಸಿದ್ದು, ಕೇವಲ 4.5 ಪರ್ಸೆಂಟ್ ದಾಖಲಾಗುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.


Click it and Unblock the Notifications