For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪ್ರತಿ ವರ್ಷ 75,000 ಕೋಟಿ ರುಪಾಯಿ ತೆರಿಗೆ ದುರುಪಯೋಗ

By ಅನಿಲ್ ಆಚಾರ್
|

ಬಹುರಾಷ್ಟ್ರೀಯ ಕಂಪೆನಿಗಳ ಜಾಗತಿಕ ತೆರಿಗೆ ದುರುಪಯೋಗ ಹಾಗೂ ಖಾಸಗಿ ವ್ಯಕ್ತಿಗಳು ತೆರಿಗೆ ಕದಿಯುತ್ತಿರುವುದರಿಂದ ಭಾರತವು ಪ್ರತಿ ವರ್ಷ 75,000 ಕೋಟಿ ರುಪಾಯಿ (10.7 ಬಿಲಿಯನ್ ಅಮೆರಿಕನ್ ಡಾಲರ್) ನಷ್ಟ ಅನುಭವಿಸುತ್ತಿದೆ ಎಂದು ಶುಕ್ರವಾರ ವರದಿಯೊಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳು ಸೇರಿ 42,700 ಕೋಟಿ ಅಮೆರಿಕನ್ ಡಾಲರ್ ತೆರಿಗೆ ಮೊತ್ತವು ಪ್ರತಿ ವರ್ಷ ಅಂತರರಾಷ್ಟ್ರೀಯ ತೆರಿಗೆ ದುರುಪಯೋಗ ಹಾಗೂ ಖಾಸಗಿ ತೆರಿಗೆ ಕಳ್ಳತನ ಆಗುತ್ತಿದೆ. ಹಾಗಿದ್ದರೆ ಇದನ್ನು ಇನ್ನೂ ಯಾವ ರೀತಿಯಲ್ಲಿ ಹೇಳಬಹುದು ಎಂಬುದನ್ನೂ ಆಸಕ್ತಿಕರವಾಗಿ ತಿಳಿಸಲಾಗಿದೆ.

40 ಲಕ್ಷ ಆದಾಯ ತೆರಿಗೆದಾರರಿಗೆ 1.36 ಲಕ್ಷ ಕೋಟಿ ರು. ಮರುಪಾವತಿ

 

ಎಲ್ಲ ದೇಶಗಳಲ್ಲಿ ಆಗುತ್ತಿರುವ ತೆರಿಗೆ ಕಳ್ಳತನದ ಒಟ್ಟು ಮೊತ್ತವು 3.4 ಕೋಟಿ ನರ್ಸ್ ಗಳ ವಾರ್ಷಿಕ ಸಂಬಳಕ್ಕೆ ಸಮವಂತೆ. ಅಥವಾ ಒಬ್ಬ ನರ್ಸ್ ಒಂದು ವರ್ಷಕ್ಕೆ ಪಡೆಯುವ ಸಂಬಳವು ಪ್ರತಿ ಸೆಕೆಂಡ್ ಗೆ ಹೋಗುತ್ತಾ ಇದೆ. ಇನ್ನು ಭಾರತಕ್ಕೆ ಸಂಬಂಧಿಸಿದಂತೆ ತಿಳಿಸಿರುವ ವರದಿಗೆ ಬಂದರೆ, ಬಹುರಾಷ್ಟ್ರೀಯ ಕಂಪೆನಿಗಳು ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ದುರುಪಯೋಗ ಹಾಗೂ ವೈಯಕ್ತಿಕ ತೆರಿಗೆದಾರರಿಂದ ಇನ್ನೂರು ಮಿಲಿಯನ್ ಅಮೆರಿಕನ್ ಡಾಲರ್ ತೆರಿಗೆ ಕಳ್ಳತನ ನಡೆಯುತ್ತಿದೆ.

ಭಾರತದಲ್ಲಿ ಪ್ರತಿ ವರ್ಷ 75,000  ಕೋಟಿ ರುಪಾಯಿ ತೆರಿಗೆ ದುರುಪಯೋಗ

ಹೀಗೆ ಅಕ್ರಮವಾಗಿ ಉಳಿಸಿದ ಹಣವನ್ನು ವಿದೇಶೀ ಬಂಡವಾಳವಾಗಿ ಹೊರ ದೇಶಗಳಿಗೆ ಹಾಗೂ ಮಾರಿಷಿಯಸ್, ಸಿಂಗಾಪೂರ್ ಮತ್ತು ನೆದರ್ಲೆಂಡ್ಸ್ ಗಳಿಗೆ ವ್ಯಾಪಾರಿ ಸಹಭಾಗಿಗಳು ಎಂದು ಕಳುಹಿಸಲಾಗುತ್ತಿದೆ. ಆ ಕಾರಣಕ್ಕೆ ಈ ತೆರಿಗೆ ದುರುಪಯೋಗದಿಂದ ಭಾರತಕ್ಕೆ ಬಹಳ ಸಮಸ್ಯೆಯಾಗಿದೆ ಎಂದು ತಿಳಿಸಲಾಗಿದೆ.

ಈ ವರದಿಯನ್ನು ಸ್ಟೇಟ್ ಆಫ್ ಟ್ಯಾಕ್ಸ್ ಜಸ್ಟೀಸ್ ಪ್ರಕಟಿಸಿದ್ದು, ಟ್ಯಾಕ್ಸ್ ಜಸ್ಟೀಸ್ ನೆಟ್ ವರ್ಕ್ ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ತೆರಿಗೆ ದುರುಪಯೋಗ ಹಾಘೂ ಅದರ ನಿಯಂತ್ರಣಕ್ಕೆ ಸರ್ಕಾರಗಳ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯಲ್ಲಿ ಗಮನ ಸೆಳೆಯಲಾಗಿದೆ.

English summary

75000 Crore Rupees Tax Abuse Every Year In India, According To Report

According to global report, every year 75000 crore tax abuse by MNC's and evasion by individual tax payers.
Story first published: Friday, November 20, 2020, 22:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X