ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಉಳಿದಿದ್ದ 18 ತಿಂಗಳ ತುಟ್ಟಿ ಭತ್ಯೆ (DA) ಹಣವನ್ನು ಹಲವು ಕಂತುಗಳಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಎಷ್ಟು ಕಂತುಗಳಲ್ಲಿ ನೀಡಲಿದೆ, ಯಾವಾಗ ಹಣ ಉದ್ಯೋಗಿಗಳ ಕೈ ಸೇರಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 27: ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಉಳಿದಿದ್ದ 18 ತಿಂಗಳ ತುಟ್ಟಿ ಭತ್ಯೆ (DA) ಹಣವನ್ನು ಒಟ್ಟು ಎಂಟು ಕಂತುಗಳಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಉದ್ಯೋಗಿಗಳಿಗೆ ಖಷಿಯ ಸುದ್ದಿ ನೀಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 18 ತಿಂಗಳ ತುಟ್ಟಿ ಭತ್ಯೆ (DA) ಹಣ ಸಿಕ್ಕಿರಲಿಲ್ಲ. ಈ ಕಾರಣದಿಂದ ಎಲ್ಲ ಬಾಕಿ ಡಿಎ ಹಣ ನೀಡುವಂತೆ ಸಾಕಷ್ಟು ಬಾರಿಸರ್ಕಾರವನ್ನು ನೌಕರರು ಕೇಳುತ್ತಾ ಬಂದಿದ್ದರು. ಆದರೆ ಈ ಬಗ್ಗೆ ಸರ್ಕಾರ ಏನು ತಿಳಿಸಿರಲಿಲ್ಲ. ಇದೀಗ ಡಿಎ ಹಣ ಹೆಚ್ಚಳ ಮಾಡುವ ಜೊತೆಗೆ ಬಾಕಿ ತುಟ್ಟಿ ಭತ್ಯೆ ಹಣವನ್ನು 8 ಕಂತುಗಳಂತೆ ವಿತರಣೆ ಮಾಡುವುದಾಗಿ ಹೇಳಿದೆ.
ಅಷ್ಟೇ ಅಲ್ಲದೇ ಸರ್ಕಾರ ಈಗಾಗಲೇ ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (DR) ಹಣ ಹೆಚ್ಚಳ ಮಾಡಿದೆ. ಇತ್ತೀಚೆಗಷ್ಟೇ ವಿವಿಧ ರಾಜ್ಯ ಸರ್ಕಾರಗಳಂತೆ ತೆಲಂಗಾಣ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಘೋಷಿಸಿದೆ. ನೌಕರರಿಗೆ ಏರಿಕೆ ಮಾಡಲಾದ ತುಟ್ಟಿ ಭತ್ಯೆ ಮುಂದಿನ ತಿಂಗಳು ಹೋಳಿ ಹಬ್ಬದ ಸಂದರ್ಭದಲ್ಲಿ ಕೈ ಸೇರುವ ನಿರೀಕ್ಷೆ ಇದೆ.

ಮುಂದಿನ ಮಾರ್ಚ್‌ಗೆ ಡಿಎ ಏರಿಕೆ
ಕೇಂದ್ರ ಸರ್ಕಾರ ಸುಮಾರು ಒಂದು ಕೋಟಿ ಕೇಂದ್ರದ ನೌಕರರಿಗೆ ತುಟ್ಟಿ ಭತ್ಯೆ ಹಣವನ್ನು ಜನವರಿಗೆ ಹೆಚ್ಚಳ ಮಾಡಿ ಘೋಷಿಸಿದೆ. ಪ್ರತಿ ವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈ ತಿಂಗಳಿಗೆ ಹೆಚ್ಚಿಸಲಾಗುತ್ತದೆ. ಅದೇ ರೀತಿ ನೀರಿಕ್ಷೆಯಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪಿಂಚಣಿದಾರರಿಗೆ ಡಿಆರ್ ಪರಿಹಾರ ಹಣ ಮಾರ್ಚ್‌ಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಎಂಟು ಕಂತುಗಳಲ್ಲಿ ಬಾಕಿ ಡಿಆರ್ ಹಣವನ್ನು ಒಟ್ಟು 4.4 ಲಕ್ಷ ನೌಕರರು ಪಡೆದರೆ, ಡಿಯರ್ನೆಸ್ ಪರಿಹಾರವನ್ನು ಒಟ್ಟು ಸುಮಾರು 2.28 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ. ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಶೇ. 2.73 ರಷ್ಟು ಏರಿಕೆ ಆಗಿದೆ ಎಂದು ತಿಳಿದು ಬಂದಿದೆ. ಶೀಘ್ರವೇ ಈ ಹಣ ಅರ್ಹರ ಖಾತೆಗೆ ಜಮೆಯಾಗಲಿದೆ.


Click it and Unblock the Notifications