7th Pay Commission: ಸರ್ಕಾರಿ ನೌಕರರ ಹೊಸ ವೇತನ ರಚನೆ ಹೇಗೆ?

ಬೆಂಗಳೂರು, ಸೆಪ್ಟೆಂಬರ್ 29: ಕರ್ನಾಟಕ ಸರ್ಕಾರಕ್ಕೆ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಈಗಾಗಲೇ ತನ್ನ ವರದಿಯನ್ನು ನೀಡಿದೆ. 558 ಪುಟಗಳ ಸಂಪುಟ-1ರ ವರದಿಯಲ್ಲಿ ಹೊಸ ವೇತನ ರಚನೆ ಕುರಿತು ಆಯೋಗ ವಿವರವಾದ ಶಿಫಾರಸುಗಳನ್ನು ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಸರ್ಕಾರ ಅನುಮೋದಿಸಿದೆ. ಆಗಸ್ಟ್‌ ತಿಂಗಳಿನಿಂದಲೇ ಜಾರಿಗೆ ಬರುವಂತೆ ವರದಿ ಜಾರಿಗೆ ಬರುತ್ತಿದೆ. ಹೊಸ ವೇತನ ರಚನೆ ಕುರಿತು ಸರ್ಕಾರಕ್ಕೆ ಆಯೋಗ ಮಾಡಿರುವ ಶಿಫಾರಸುಗಳ ವಿವರಗಳು ಇಲ್ಲಿವೆ.

7ನೇ ವೇತನ ಆಯೋಗ ಹೊಸ ವೇತನ ರಚನೆ ಎಂದು ವಿವರಣೆಯನ್ನು ನೀಡಿದೆ. "ಆರ್ಥಿಕ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ಸ್ವಾಭಿಮಾನಕ್ಕೂ ಉದ್ಯೋಗಗಳು ನಿರ್ಣಾಯಕವೆಂದು ಪುರಾವೆಗಳು ಸೂಚಿಸುತ್ತವೆ." ಎಂಬ ರಾಬರ್ಟ್ ರೀಚ್ ಹೇಳಿಕೆಯನ್ನು ಆಯೋಗ ಉಲ್ಲೇಖ ಮಾಡಿದೆ.

 7th Pay Commission: ಸರ್ಕಾರಿ ನೌಕರರ ಹೊಸ ವೇತನ ರಚನೆ ಹೇಗೆ?

ಕರ್ನಾಟಕದಲ್ಲಿ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆಯು ಮುಖ್ಯ ಶ್ರೇಣಿ, 18 ವೇತನ ಬಡ್ತಿ ದರಗಳು ಮತ್ತು 92 ಹಂತಗಳೊಂದಿಗೆ ಮುಖ್ಯ ವೇತನ ಶ್ರೇಣಿಯಿಂದ ವಿಭಾಗಗೊಂಡ 25 ವೇತನ ಶ್ರೇಣಿಗಳನ್ನು ಒಳಗೊಂಡಿದೆ. 25 ವೇತನ ಶ್ರೇಣಿಗಳನ್ನು ದಿನಾಂಕ 1ನೇ ಜುಲೈ 2017 ರಂತೆ ಅಖಿಲ ಭಾರತೀಯ ಗ್ರಾಹಕ ಸೂಚ್ಯಂಕ ಸಂಖ್ಯೆ (ಎಐಎಸಿಪಿಐಎನ್) 276.90 (ಆಧಾರ 2001=100) ಹಂತದಲ್ಲಿ ನಿರ್ಧರಿಸಲಾಗಿದೆ. ಈ 25 ವೇತನ ಶ್ರೇಣಿಗಳ ಕಾಲಾವಧಿಯು 13 ರಿಂದ 29 ವರ್ಷಗಳವರೆಗೆ ಇರುತ್ತದೆ. ಪ್ರಸ್ತುತ ವೇತನ ರಚನೆಯಲ್ಲಿ, ಕನಿಷ್ಠ ಮೂಲ ವೇತನ ಮಾಸಿಕ ರೂ.17,000 ಮತ್ತು ಗರಿಷ್ಠ ಮೂಲ ವೇತನ ರೂ.1,50,600 ಆಗಿರುತ್ತದೆ. ವಾರ್ಷಿಕ ವೇತನ ಬಡ್ತಿ ದರಗಳ ಪ್ರಮಾಣ ಕನಿಷ್ಠ ರೂ.400 (ಶೇ.2.35) ರಿಂದ ಗರಿಷ್ಠ ರೂ.3,100 (ಶೇ.2.1) ರವರೆಗೆ ಇರುತ್ತದೆ.

ವಾಸ್ತವಿಕವಾಗಿ, ವೇತನ ರಚನೆಯು ನೌಕರರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಪ್ರಯತ್ನವಾಗಿರಬೇಕು ಹಾಗೂ ಅದೇ ಸಮಯದಲ್ಲಿ ಉದ್ಯೋಗದಾತನ ಆರ್ಥಿಕ ಮಿತಿಗಳನ್ನು ಸಹ ಗಮನದಲ್ಲಿಟ್ಟುಕೊಂಡಿರಬೇಕು. ರಾಜ್ಯದಲ್ಲಿ ಈ ಹಿಂದಿನ ವೇತನ ಪರಿಷ್ಕರಣೆಗಳು ಸಾಮಾನ್ಯವಾಗಿ ಈ ತತ್ವಕ್ಕೆ ಬದ್ಧವಾಗಿದ್ದವು. ಸಾಮಾನ್ಯವಾಗಿ ಅಂಗೀಕರಿಸಲಾದ ಅಂಶವೆಂದರೆ, ಸಂಭಾವನೆಯ ಕನಿಷ್ಠದರವು ಜೀವನಾವಶ್ಯಕ ವೇತನಕ್ಕಿಂತ ಕಡಿಮೆಯಾಗಬಾರದು.

ವೇತನ ಶ್ರೇಣಿಗಳ ಸಮಾನತೆ: ವೇತನ ಶ್ರೇಣಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ನೌಕರರ ಸಂಘಗಳು ಆಯೋಗಕ್ಕೆ ಸಲ್ಲಿಸಲಾದ ಮನವಿಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೇತನಗಳ ನಡುವಿನ ಸಮಾನತೆಯನ್ನು ಸಾಧಿಸಲು ಮತ್ತು ಅಕ್ರೋಯ್ಡ್ ಸೂತ್ರದ ಆಧಾರದ ಮೇಲೆ ಕನಿಷ್ಠ ವೇತನವನ್ನು ನಿರ್ಧರಿಸುವಂತೆ ಕೋರಿರುತ್ತವೆ. ಮುಖ್ಯ ವೇತನ ಶ್ರೇಣಿ ಮತ್ತು 25 ವೇತನ ಶ್ರೇಣಿಗಳ ಪ್ರಸ್ತುತ ಪದ್ಧತಿಯನ್ನು ಮುಂದುವರೆಸಲು ಹಾಗೂ ವೇತನ ಹಂತಗಳ ಪ್ರಸ್ತುತ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಳ್ಳಲು ಸಹ ನೌಕರರು ಕೋರಿರುತ್ತಾರೆ. ಮುಂದುವರೆದು, ಪರಿಷ್ಕರಿಸಲಾದ ವೇತನ ಶ್ರೇಣಿಯು, ವಿವಿಧ ವೇತನ ಶ್ರೇಣಿಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ರಚನೆಯಲ್ಲಿನ ಸಮಾನ ಅಂತರ ಸಾಪೇಕ್ಷತೆಗಳನ್ನು ಉಳಿಸಿಕೊಳ್ಳಬೇಕೆಂದು ಕೋರಿರುತ್ತಾರೆ.

ಸರ್ಕಾರಿ ನೌಕರರಿಗೆ ಒಂದು ಮಾದರಿ ವೇತನವನ್ನು ರೂಪಿಸುವ ಕಾರ್ಯವು ಕಠಿಣವಾಗಿರುತ್ತದೆ. ಸರ್ಕಾರಿ ನೌಕರರಿಗಾಗಿ ವೇತನವನ್ನು ನಿರ್ಧರಿಸುವಲ್ಲಿ ಅನುಸರಿಸಬೇಕಾದ ರಾಷ್ಟ್ರೀಯ ವೇತನ ನೀತಿಯು ಇಲ್ಲದೇ ಇರುವುದರಿಂದ ಪ್ರತಿ ರಾಜ್ಯವು ತನ್ನ ಆಡಳಿತಾತ್ಮಕ ಅಗತ್ಯತೆ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ತನ್ನದೇ ಆದ ವೇತನ ರಚನೆಯನ್ನು ಸೃಜಿಸಬೇಕಾಗುತ್ತದೆ. ತರ್ಕಬದ್ಧವಾದ ವೇತನ ರಚನೆ ರೂಪಿಸುವುದನ್ನು ನಿರ್ಧರಿಸಲು ಕೆಲವು ಸಾಮಾನ್ಯ ತತ್ವಗಳಿವೆ. ಇವುಗಳನ್ನು ರಾಜ್ಯ ಮತ್ತು ಕೇಂದ್ರ ಎರಡೂ ಮಟ್ಟಗಳಲ್ಲಿ ಹಲವು ವೇತನ ಆಯೋಗ/ ಸಮಿತಿಗಳಿಂದ ಕಾಲ ಕಾಲಕ್ಕೆ ಬಳಸಲಾಗಿರುತ್ತದೆ.

* ಒಂದು ಹುದ್ದೆಯ ವೇತನವು ಅಗತ್ಯ ವಿದ್ಯಾರ್ಹತೆ ಮತ್ತು ಸಾಮರ್ಥ್ಯತೆ ಹೊಂದಿರುವ ವ್ಯಕ್ತಿಗಳನ್ನು ಆಕರ್ಷಿಸುವಂತಹದಾಗಿರಬೇಕು ಮತ್ತು ಒಬ್ಬ ನೌಕರನಿಗೆ ಪರಿಹಾರದ ವಿಷಯದಲ್ಲಿ
ಅನ್ಯಾಯವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಅತೃಪ್ತಿಯ ಮನಸ್ಥಿತಿಯಿಲ್ಲದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಸಾಕಷ್ಟು ಪ್ರೇರಣೆಯನ್ನು ಒದಗಿಸುವಂತಿರಬೇಕು.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಸರ್ವಮಾನ್ಯ ತತ್ವಕ್ಕೆ ಇದು ಬದ್ಧವಾಗಿರಬೇಕು.

* ಉತ್ತಮವಾಗಿ ನಿರ್ಧರಿಸಲಾದ ಮುಂಬಡ್ತಿ ನೀತಿಯು ಯಾವುದೇ ಒಂದು ವೇತನ ರಚನೆಯ ಪುಮುಖ ಲಕ್ಷಣವಾಗಿದೆ ಮತ್ತು ಮುಂಬಡ್ತಿ ಅವಕಾಶಗಳು ಒಬ್ಬ ನೌಕರನಿಗೆ ಸರ್ಕಾರಿ ಸೇವೆಯು ಜೀವಮಾನದ ವ್ಯಕ್ತಿ ಎಂಬುದಾಗಿ ಕಾಣುವಂತೆ ಸಾಕಷ್ಟು ಆಕರ್ಷಿಸುವಂತಿರಬೇಕು. ವೇತನ ರಚನೆಯು ಸಮತೋಲವಾಗಿರಬೇಕು ಹಾಗೂ ಅದು ವಿವಿಧ ಹುದ್ದೆಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಸ್ವರೂಪಗಳಲ್ಲಿನ ವ್ಯತ್ಯಾಸಗಳನ್ನು ಸಮರ್ಪಕವಾಗಿ ಪ್ರತಿಬಿಂಬಿಸಬೇಕು. ಕನಿಷ್ಠ ಮತ್ತು ಗರಿಷ್ಠ ವೇತನದ ನಡುವಿನ ಅಂತರವು ತರ್ಕಬದ್ಧವಾಗಿರಬೇಕು.

* ವೇತನ ಶ್ರೇಣಿಗಳು ಸೇವೆಗಳ ಪ್ರತಿಯೊಂದು ಪವರ್ಗಕ್ಕೂ ಎಲ್ಲಾ ಸಂದರ್ಭಗಳಲೂ ಸೂಕ್ತವಾಗಿ ಪರಿಹಾರ ನೀಡಲು ಸಾಧ್ಯವಾಗದಿರಬಹುದು; ಇದರಿಂದ ಅನಾನುಕೂಲವಾಗುವ ನೌಕರರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ವಿಶೇಷ ವೇತನ ಅಥವಾ ಭತ್ಯೆಗಳ ಸೂಕ್ತ ವ್ಯವಸ್ಥೆಯನ್ನ ರೂಪಿಸುವ ಅವಶ್ಯಕತೆ ಇರುತ್ತದೆ.

* ಒಬ್ಬ ನೌಕರ, ಜೀವನಾವಶ್ಯಕ ವೆಚ್ಚದಲ್ಲಿ ಆಗುವ ಬೆಲೆ ಏರಿಕೆಯಿಂದಾಗಿ ಆತ/ ಆಕೆಗೆ ಲಭ್ಯವಾಗುವ ಪರಿಹಾರವು ಕಡಿಮೆಯಾಗುವುದಿಲ್ಲ ಮತ್ತು ಸಾಧ್ಯವಾದಷ್ಟು ಅಂತಹ ಕೊರತೆಯನ್ನು ಪರಿಹಾರ ರೂಪದಲ್ಲಿ ಸರಿದೂಗಿಸಲಾಗುವುದು ಎಂಬ ಭರವಸೆಯನ್ನು ಹೊಂದಿರಬೇಕು. ಉದ್ಯೋಗಿಗಳಿಗೆ ವೇತನವನ್ನು ನಿರ್ಧರಿಸುವಾಗ ಉದ್ಯೋಗದಾತನ ವೇತನ ಪಾವತಿಸುವ ಸಾಮರ್ಥ್ಯತೆಯನ್ನು ಪರಿಗಣಿಸಬೇಕಾದುದು ಪ್ರಮುಖ ಅಂಶವಾಗಿದೆ.

* ಒಂದು ಹುದ್ದೆಯ ಉಪಲಬ್ದಿಯನ್ನು ನಿರ್ಧರಿಸುವಾಗ ಆ ಹುದ್ದೆಗೆ ನಿಗದಿಪಡಿಸಲಾದ ಅರ್ಹತಾ ಮಾನದಂಡ ಮತ್ತು ನೇಮಕಾತಿ ವಿಧಾನಗಳು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ನೌಕರರಿಗೆ ವಹಿಸಲಾದ ಜವಾಬ್ದಾರಿಗಳ ಸ್ವರೂಪವು-ಆಡಳಿತಾತ್ಮಕ, ಆರ್ಥಿಕ ಮತ್ತು ತಾಂತ್ರಿಕ, ಇವುಗಳು ವೇತನವನ್ನು ನಿಗದಿಪಡಿಸಲು ಸಂಬಂಧಿಸಿದ ನಿರ್ಣಾಯಕ ಅಂಶಗಳಾಗಿರುತ್ತವೆ.

* ನಿರ್ವಹಿಸಬೇಕಾದ ಕೆಲಸದ ಪ್ರಮಾಣ ಮತ್ತು ಸಂಕೀರ್ಣತೆ, ಕೆಲಸದ ಸ್ಥಿತಿ, ಕೆಲಸಕ್ಕೆ ಸಂಬಂಧಿಸಿದ ಅಪಾಯಗಳು ಯಾವುದಾದರು ಇದ್ದರೆ, ಇವುಗಳು ವೇತನವನ್ನು ನಿರ್ಧರಿಸಲು ಪರಿಗಣಿಸಬೇಕಾದ ಯುಕ್ತ ಅಂಶಗಳಾಗಿರುತ್ತವೆ. ವೇತನ ರಚನೆಯಲ್ಲಿನ ಲಂಬ ಮತ್ತು ಸಮತಲ ಸಾಪೇಕ್ಷತೆಗಳೆರಡನ್ನೂ ನ್ಯಾಯೋಚಿತವಾಗಿ ಸಮತೋಲನವಾಗಿರಬೇಕು. ಸಾಮಾನ್ಯವಾಗಿ ಜಾರಿಯಲ್ಲಿರುವ ಮತ್ತು ಯುಕ್ತವಾಗಿ ಸ್ಥಾಪಿತ ಸಾಪೇಕ್ಷತೆಗಳಲ್ಲಿ ಗೊಂದಲ ಉಂಟುಮಾಡಬಾರದು. ಆದಾಗ್ಯೂ, ಹುದ್ದೆಯ ಸ್ವರೂಪ ಮತ್ತು ಪ್ರಕಾರ್ಯದ ವಿಷಯದಲ್ಲಿ ಬದಲಾವಣೆಗಳಾದಾಗ ಮತ್ತು ಯಾವುದೇ ಹುದ್ದೆಯನ್ನ ಮೇಲ್ಮರ್ಜೆಗೇರಿಸುವ ಅಗತ್ಯವಿದ್ದಾಗ ಮರುಹೊಂದಾಣಿಕೆಯ ಅವಶ್ಯಕತೆ ಉಂಟಾಗಬಹುದಾಗಿದೆ.

ಕರ್ನಾಟಕದಲ್ಲಿ ಸರ್ಕಾರಿ ನೌಕರರ ವೇತನ ರಚನೆಯು ಹಲವು ವರ್ಷಗಳಿಂದ ಈ ಹಿಂದಿನ ವೇತನ ಪರಿಷ್ಕರಣೆ ಆಯೋಗ/ ಸಮಿತಿಗಳು, ಈ ವಿಶಾಲವಾದ ತತ್ವಗಳ ಮೇಲೆ ಮಾಡಿದ ಶಿಫಾರಸ್ಸುಗಳ ಅನುಸಾರ ವಿಕಸನಗೊಂಡಿದೆ. 1ನೇ ಮತ್ತು 2ನೇ ರಾಜ್ಯ ವೇತನ ಆಯೋಗಗಳು ಹೆಚ್ಚು ಕಡಿಮೆ ಈ ಮೇಲಿನ ತತ್ವಗಳ ಆಧಾರದ ಮೇಲೆ ಪ್ರತಿಯೊಂದು ಹುದ್ದೆಗಳನ್ನು ತತ್ಸಮಾನ ಮಾನದಂಡಗಳನ್ನು ಅನುಸರಿಸಿ ಅವುಗಳನ್ನು ಗುಂಪುಗಳನ್ನಾಗಿಸಿ, ಪ್ರತಿ ಗುಂಪಿಗೂ ವೇತನ ಶ್ರೇಣಿಗಳನ್ನು ರೂಪಿಸಿರುತ್ತವೆ. ಇದೇ ವೇತನ ಶ್ರೇಣಿಗಳು ಈವರೆಗೂ ವೇತನ ರಚನೆಯ ಭಾಗವಾಗಿ ಮುಂದುವರೆಯುತ್ತಿದ್ದರೂ, ಹಲವು ವರ್ಷಗಳಿಂದ ಬದಲಾವಣೆಗಳನ್ನು ಮತ್ತು ಪರಿಷ್ಕರಣೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಯಾವುದೇ ಕಾಲ ಘಟ್ಟದಲ್ಲಿ ರಾಜ್ಯ ವೇತನ ರಚನೆಯನ್ನು ನಿರ್ಧರಿಸುವಲ್ಲಿ, ಕೇಂದ್ರ ಮತ್ತು ನೆರೆಯ ರಾಜ್ಯಗಳ ವೇತನ ರಚನೆಯನ್ನು, ನಿರ್ದಿಷ್ಟ ಮಟ್ಟಿಗೆ ಸಮತೋಲನ ಮತ್ತು ಹೋಲಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬ ಅಂಶವು ವಿದಿತವಾಗಿರುತ್ತದೆ. ಅಲ್ಲದೆ, ವೇತನ ವೆಚ್ಚವನ್ನು ಭರಿಸುವ ಸಲುವಾಗಿ ರಾಜ್ಯದ ವಿತ್ತೀಯ ಸ್ಥಿತಿ ಮತ್ತು ಆರ್ಥಿಕ ಅವಕಾಶದ ಲಭ್ಯತೆಯನ್ನು ಹಾಗೂ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಶಾಸನಗಳ ಅಡಿಯಲ್ಲಿನ ಮಿತಿಗಳನ್ನು ಅಂದರೆ ಕರ್ನಾಟಕ ರಾಜ್ಯ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 (ಕೆಎಫ್‌ಆರ್ ಅಧಿನಿಯಮ) ಗಮನದಲ್ಲಿಟ್ಟುಕೊಂಡಿರಬೇಕಿದೆ ಎಂದು ಆಯೋಗ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+