ಭಾರತದ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆಯು ಮೇ ತಿಂಗಳಿನಲ್ಲಿ ಶೇಕಡಾ 16.8ರಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿಯನ್ನ ನೀಡಿದೆ.
ದೇಶದ ಪ್ರಮುಖ ಕೈಗಾರಿಕಾ ವಲಯಗಳಾದ ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಉತ್ಪಾದನೆ ಹೆಚ್ಚಳ ಆಗಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ರಸಗೊಬ್ಬರ ಮತ್ತು ಕಚ್ಚಾತೈಲ ವಲಯಗಳು ಮಾತ್ರವೇ ಮೇ ತಿಂಗಳಿನಲ್ಲಿ ನಕಾರಾತ್ಮಕ ಬೆಳವಣಿಗೆಯನ್ನ ಕಂಡಿದೆ.

ಕೋವಿಡ್-19 ಸೋಂಕುಗಳ ಹರಡುವಿಕೆಯನ್ನು ನಿಯಂತ್ರಿಸಲು ವಿಧಿಸಲಾದ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿಯ ಎಂಟು ಮೂಲಸೌಕರ್ಯ ಕ್ಷೇತ್ರಗಳು 2020 ರ ಮೇ ತಿಂಗಳಲ್ಲಿ ಶೇಕಡಾ 21.4 ರಷ್ಟು ಸಂಕುಚಿತಗೊಂಡಿವೆ. ಆದರೆ ಈ ವರ್ಷ ಅದೇ ತಿಂಗಳಿನಲ್ಲಿ ಶೇ. 16.8ರಷ್ಟು ಬೆಳವಣಿಗೆ ಸಾಧಿಸಿದೆ.
ಈ ವರ್ಷದ ಮಾರ್ಚ್‌ನಲ್ಲಿ ಈ ಪ್ರಮುಖ ಕ್ಷೇತ್ರಗಳು ಶೇಕಡಾ 11.4 ರಷ್ಟು ಮತ್ತು ಏಪ್ರಿಲ್‌ನಲ್ಲಿ 60.9 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯು ಶೇಕಡಾ 20.1, 15.3, 59.3, 7.9 ಮತ್ತು 7.3 ರಷ್ಟು ಏರಿಕೆಯಾಗಿದೆ. 2020 ರ ಮೇ ತಿಂಗಳಲ್ಲಿ ಕ್ರಮವಾಗಿ ಶೇಕಡಾ 16.8, (-) 21.3, (-) 40.4, (-) 21.4 ಮತ್ತು (-) 14.8 ರಷ್ಟಿತ್ತು.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್‌ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications