For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧ ಹೋರಾಟಕ್ಕೆ ರೆಡಿಯಾಗಿದ್ದಾರೆ ಸೇನೆಯ 8,500 ಡಾಕ್ಟರ್ಸ್

|

ಭಾರತದಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವ ಕೊರೊನಾವೈರಸ್ ಮಹಾಮಾರಿ ವಿರುದ್ಧ ಹೋರಾಡಲು 8,500 ಡಾಕ್ಟರ್ಸ್ ರೆಡಿಯಿದ್ದಾರೆ ಎಂದು ಭಾರತದ ಸೇನೆ ಹೇಳಿದೆ.

ಕೊರೊನಾವೈರಸ್ ನಿಭಾಯಿಸಲು ಸರ್ಕಾರಕ್ಕೆ ನೆರವು ನೀಡಲು ಸುಮಾರು 25,000 ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕೆಡೆಟ್‌ಗಳು ಮತ್ತು ನಿವೃತ್ತ ಮಿಲಿಟರಿ ಆರೋಗ್ಯ ವೃತ್ತಿಪರರನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಸೇನಾ ಆಸ್ಪತ್ರೆಯಲ್ಲಿ 9,000 ಕ್ಕೂ ಹೆಚ್ಚು ಬೆಡ್‌ಗಳನ್ನು ರೆಡಿಯಾಗಿದ್ದು, 8,500 ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಸ್ಟ್ಯಾಂಡ್‌ಬೈನಲ್ಲಿದ್ದಾರೆ ಎಂದು ಸೇನಾ ಮುಖ್ಯಸ್ಥರು ಬುಧವಾರ ಹೇಳಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಸೇನೆಯ 8,500 ಡಾಕ್ಟರ್ಸ್ ರೆಡಿ

ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರ ನೀಡುವ ಜವಾಬ್ದಾರಿಯನ್ನು ಹೊರುವುದಾಗಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅನುಪ್ ಬ್ಯಾನರ್ಜಿ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಜೊತೆಗ ಯಾವುದೇ ಸಹಾಯವನ್ನು ನೀಡಲು ನೌಕಾ ಹಡಗುಗಳು ಸ್ಟ್ಯಾಂಡ್‌ಬೈನಲ್ಲಿವೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.

ಕಳೆದ ಐದು ದಿನಗಳಲ್ಲಿ ವಾಯುಪಡೆಯ ವಿಮಾನಗಳು ಸುಮಾರು 25 ಟನ್‌ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ದೇಶದೊಳಗೆ ಸಾಗಿಸಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

English summary

8500 Army Doctors On Standby To Fight Coronavirus Pandemic

About 25,000 National Cadet Corps cadets and 8500 Army Doctors On Standby To Fight Coronavirus Pandemic
Story first published: Wednesday, April 1, 2020, 18:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X