ಕೇಂದ್ರ ಸರ್ಕಾರಿ ನೌಕರರು ಬಹಳ ಕಾತುರದಿಂದ 8ನೇ ವೇತನ ಆಯೋಗ ಜಾರಿಗಾಗಿ ಕಾಯುತ್ತಿದ್ದಾರೆ. ಈ ಕುರಿತು ಮೋದಿ ಸರ್ಕಾರ ಶೀಘ್ರದಲ್ಲಿ ಒಳ್ಳೆಯ ಸುದ್ದಿಯನ್ನು ನೀಡುವ ನಿರೀಕ್ಷೆಯಿದೆ. 8ನೇ ವೇತನ ಆಯೋಗ ಜಾರಿಗೆ ಬಂದರೆ, ಲಕ್ಷಾಂತರ ಉದ್ಯೋಗಿಗಳ ಮೂಲ ವೇತನದಲ್ಲಿ ದೊಡ್ಡ ಬದಲಾವಣೆ ಹಾಗೂ ಪಿಂಚಣಿದಾರರಿಗೆ ಹೆಚ್ಚಿನ ಪ್ರಯೋಜನಗಳು ಸಿಗಬಹುದು. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಗಮನಿಸಿದ್ದರೆ ಈ ವೇತನ ಜಾರಿ ಬರುವುದು ಹೆಚ್ಚಿನ ಅನಿವಾರ್ಯವಿದೆ.

ಇದುವರಿಗೂ ವರದಿಯಾಗಿರುವ ಮಾಹಿತಿಯ ಪ್ರಕಾರ ಪ್ರಸ್ತುತ 7ನೇ ವೇತನ ಆಯೋಗದಲ್ಲಿ 2.57ರಷ್ಟಿರುವ ಫಿಟ್‌ಮೆಂಟ್ ಅಂಶವನ್ನು 8ನೇ ವೇತನ ಆಯೋಗದಲ್ಲಿ ಹೆಚ್ಚಳವಾಗುವಂತಹ ಸಾಧ್ಯತೆ ಹೆಚ್ಚು ಇದೆ.
ಫಿಟ್‌ಮೆಂಟ್ ಅಂಶ ಏನು?
ಹೊಸ ವೇತನ ಆಯೋಗ ಬಂದಾಗ, ಹಳೆಯ ಸಂಬಳವನ್ನು ನಿರ್ದಿಷ್ಟ ಗುಣಕದಿಂದ (ಫಿಟ್‌ಮೆಂಟ್ ಅಂಶ) ಹೆಚ್ಚಿಸುವ ಮೂಲಕ ಹೊಸ ವೇತನವನ್ನು ನಿರ್ಧರಿಸಲಾಗುತ್ತದೆ. ಈ ಬಾರಿ 2.08, 2.28 ಮತ್ತು 2.57 ನಂತಹ ಫಿಟ್‌ಮೆಂಟ್ ಅಂಶಗಳನ್ನು ಹೆಚ್ಚಸಬಹುದು ಎಂಬ ನಿರೀಕ್ಷೆಗಳು ಇದೆ.
ಯಾವ ಶ್ರೇಣಿಯ ಅಧಿಕಾರಿಗಳಿಗೆ ಹೆಚ್ಚಿನ ವೇತನ ಹೆಚ್ಚಳವಾಗುತ್ತದೆ?
ಪ್ರಸ್ತುತ, ಅಧಿಕಾರಿಗಳ ಮೂಲ ವೇತನ 1.44 ಲಕ್ಷದಿಂದ 2.5 ಲಕ್ಷದವರೆಗೆ ಇದೆ ಅಂದುಕೊಂಡರೆ ಅವರ ವೇತನ 3 ಲಕ್ಷದಿಂದ 6.42 ಲಕ್ಷದವರೆಗೆ ಹೆಚ್ಚಳವಾಗಬಹುದು. ಈ ಬದಲಾವಣೆಯು 14 ರಿಂದ 18 ನೇ ಹಂತದ ಅಧಿಕಾರಿಗಳಿಗೆ ಅನ್ವಯವಾಗುತ್ತದೆ.
ಉದಾಹರಣೆ: ಹಂತ 14 ಅಧಿಕಾರಿ (ಮೂಲ ವೇತನ 1,44,200 ರೂ)
2.08 ಅಂಶದ ಆಧಾರದ ಮೇಲೆ ಸಂಬಳ: 2,99,936 ರೂ.
2.28 ಅಂಶದ ಆಧಾರದ ಮೇಲೆ ಸಂಬಳ: 3,28,776ರೂ.
2.57 ಅಂಶದಿಂದ ಸಂಬಳ: 3,70,594 ರೂ.
18 ನೇ ಹಂತದ ಅಧಿಕಾರಿ (₹2,50,000 ಮೂಲ ವೇತನ)
2.08 ಅಂಶದ ಪ್ರಕಾರ ಸಂಬಳ: 5,20,000 ರೂ.
2.28 ಅಂಶದ ಪ್ರಕಾರ ಸಂಬಳ: 5,70,000ರೂ.
2.57 ಅಂಶದಿಂದ ಸಂಬಳ: 6,42,500 ರೂ.
ಇತರ ಉದ್ಯೋಗಿಗಳಿಗೂ ಹೆಚ್ಚಿನ ಪ್ರಯೋಜನ
8ನೇ ವೇತನ ಆಯೋಗ ಅಧಿಕಾರಿಗಳಿಗೆ ಮಾತ್ರವಲ್ಲದೆ ಹಂತ 1 ರಿಂದ ಹಂತ 13 ರವರೆಗಿನ ಎಲ್ಲಾ ಕೇಂದ್ರ ಉದ್ಯೋಗಿಗಳು ಈ ವೇತನ ಹೆಚ್ಚಳದ ಪ್ರಯೋಜನವನ್ನು ಪಡೆಯಲಿದ್ದಾರೆ. ಇದು ವಿಶೇಷವಾಗಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಿಗಳಿಗೂ ಕೂಡ ಹೆಚ್ಚಾಗುತ್ತದೆ. ಜೀವನ ವೆಚ್ಚ ಸರಿದೂಗಿಸಲು ವೇತನ ಹೆಚ್ಚಳವಾಗಬಹುದು ಎಮದು ಅಧಿಕಾರಿಗಳು ಸರ್ಕಾರವನ್ನು ಕೇಳಿಗೊಂಡಿವೆ.
ಇಲ್ಲಿಯವರೆಗೆ ಸರ್ಕಾರದಿಂದ 8 ನೇ ವೇತನ ಆಯೋಗದ ಕುರಿತು ಅಧಿಕೃತ ಘೋಷಣೆ ಬಂದಿಲ್ಲ, ಆದರೆ ಸರ್ಕಾರಿ ಉದ್ಯೋಗಿ ಸಂಘಟನೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. 2026 ರ ಮೊದಲು ತಿಂಗಳು 8 ನೇ ವೇತನ ಆಯೋಗ ರಚನೆಯಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಸಂಬಳ ಹೆಚ್ಚಾಗಬಹುದು. ಸರ್ಕಾರ 8ನೇ ವೇತನ ಆಯೋಗವನ್ನು ಅನುಮೋದಿಸಿದರೆ, ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.


Click it and Unblock the Notifications