ಕೇಂದ್ರ ಸರ್ಕಾರಿ ನೌಕರರು ಬಹಳ ಕಾತುರದಿಂದ 8ನೇ ವೇತನ ಆಯೋಗ ಜಾರಿಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ಜಾರಿ ಬಂದರೆ ವೇತನ ಶೇ 13 ರಷ್ಟಾಗುವ ಸಾಧ್ಯತೆಯಿದೆ. ಆದರೆ, 7ನೇ ವೇತನ ಆಯೋಗದ ಅಡಿಯಲ್ಲಿನ ಹೆಚ್ಚಳವು ಶೇ 14.3ರಷ್ಟು ಇದೆ ಎಂದು ಕೋಟಕ್ ಸಾಂಸ್ಥಿಕ ಇಕ್ವಿಟೀಸ್ ವರದಿಯನ್ನು ಹೇಳಿದೆ.
ಈಗಾಗಲೇ 8ನೇ ವೇತನ ಆಯೋಗವು ಶಿಫಾರಸು ಮಾಡಲಿರುವ ಫಿಟ್‌ಮೆಂಟ್ ಅಂಶವು 1.8 ಆಗಿರಬಹುದು. ಆದರೆ, 7ನೇ ವೇತನ ಆಯೋಗವು 2.57ರ ಫಿಟ್‌ಮೆಂಟ್ ಅಂಶವನ್ನು ಶಿಫಾರಸು ಮಾಡಿತ್ತು.ಅಂದರೆ,ಇದು ಸುಮಾರು ಶೇ. 30ದಷ್ಟು ಕಡಿಮೆಯಾಗುವ ಸಾಧ್ಯತೆ ಇರಬಹುದು ಎಂದು ಮಾಹಿತಿಯನ್ನು ಬಹಿರಂಗಗೊಳಿಸಿದೆ.

1.8ರ ಫಿಟ್‌ಮೆಂಟ್ ಅಂಶದ ಪ್ರಕಾರ ನೌಕರ ಮೂಲ ವೇತನವು ಶೇ.180ರಷ್ಟು ಹೆಚ್ಚಾಗಬಹುದು,ಆದರೆ ಪ್ರಸ್ತುತ ಇರುವ ತುಟ್ಟಿ ಭತ್ಯೆ (ಡಿಎ) ಶೇ.55ನ್ನು ಶೂನ್ಯಕ್ಕೆ ಇಳಿಸುವುದರಿಂದ ನಿರೀಕ್ಷಿತ ವೇತನ ಹೆಚ್ಚಳ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಈ ಹಿಂದೆ ಎನ್‌ಡಿಟಿವಿ ಪ್ರಾಫಿಟ್‌ಗೆ ನೀಡಿದ ಮಾಹಿತಿಯ ಪ್ರಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ "ಸಮಾನವಾದ" ಫಿಟ್‌ಮೆಂಟ್ ಅಂಶವನ್ನು ಪಡೆಯಲು ಬೇಡಿಕೆಯನ್ನು ಸಲ್ಲಿಸಲಾಗಿದೆ. ಒಂದು ವೇಳೆ ಫಿಟ್‌ಮೆಂಟ್ ಅಂಶ 1.8 ಆದರೆ, ಕನಿಷ್ಠ ಮೂಲ ವೇತನ 18,000 ರೂ ನಿಂದ 32 ಸಾವಿರಕ್ಕೆ ಏರಿಕೆಯಾಗಬಹುದು. ಆದರೆ, ಡಿಎ ಮತ್ತು ಇತರ ಭತ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ವೇತನದ ಏರಿಕೆ ಕೇವಲ ಶೇ. 13 ರಷ್ಟು ಮಾತ್ರ ಸಿಗುತ್ತದೆ.
ಕನಿಷ್ಠ ವೇತನ 18,000ಕ್ಕೆ ಹೆಚ್ಚುವರಿಯಾಗಿ 9,900 ಡಿಎ ನೀಡಲಾಗುತ್ತದೆ. ಅದೇ ರೀತಿ, ಪ್ರಸ್ತುತ ಮೂಲ ವೇತನ ರೂ 50,000 ಆಗಿದ್ದರೆ, ಅದು 90,000 ರೂ.ಗಳವರೆಗೆ ಏರಿಕೆಯಾಗಬಹುದು.ಆದರೆ, ಈಗಿನ ವೇತನಕ್ಕೆ 27,500 ಡಿಎ ಸೇರಿಸಿರುವುದರಿಂದ, ವೇತನದಲ್ಲಿನ ಹೆಚ್ಚಳವು ಕಡಿಮೆಯಾಗಲಿದೆ. ಡಿಎಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತದೆ. 8ನೇ ವೇತನ ಆಯೋಗ ಜಾರಿಗೆ ಬರುವ ಹೊತ್ತಿಗೆ, ಇದು ಮೂಲ ವೇತನದ ಶೇ. 60 ರಷ್ಟು ದಾಟುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರವು ನೌಕರರ ವೇತನ ಮತ್ತು ನಿವೃತ್ತರ ಪಿಂಚಣಿಗಳನ್ನು ಪರಿಷ್ಕರಣೆಯನ್ನು ಮಾಡಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸುತ್ತದೆ. 7ನೇ ವೇತನ ಆಯೋಗದ ಅನುಷ್ಠಾನದಿಂದಾಗಿ 2017ರ ಆರ್ಥಿಕ ವರ್ಷದಲ್ಲಿ ಸುಮಾರು 1.02 ಲಕ್ಷ ಕೋಟಿ ರೂಪಾಯಿಗಳಷ್ಟು ಹೊರೆಯಾಗಿತ್ತು. 8ನೇ ವೇತನ ಆಯೋಗದಿಂದ 2.4 ರಿಂದ 3.4 ಲಕ್ಷ ಕೋಟಿ ರೂ.ಗಳಷ್ಟು ಹೊರೆಯಾಗಬಹುದು ಎಂದು ಕೋಟಕ್ ಸಾಂಸ್ಥಿಕ ಷೇರುಗಳು ಅಂದಾಜುವನ್ನು ಮಾಡಲಾಗಿದೆ.
8ನೇ ವೇತನ ಆಯೋಗವು 7ನೇ ವೇತನ ಆಯೋಗದಂತೆಯೇ ಸುಮಾರು 3.3 ಮಿಲಿಯನ್ ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ. ಗ್ರೇಡ್ ಸಿ ನೌಕರರಿಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಯಿದೆ ಎಂದು ಹೇಳಿದೆ.


Click it and Unblock the Notifications