ಕೇಂದ್ರ ಸರ್ಕಾರಿ ನೌಕರರು ಬಹಳ ಕಾತುರದಿಂದ 8ನೇ ವೇತನ ಆಯೋಗ ಜಾರಿಗಾಗಿ ಕಾಯುತ್ತಿದ್ದಾರೆ. ಈ ಕುರಿತು ಮೋದಿ ಸರ್ಕಾರ ಅತಿ ಶೀಘ್ರದಲ್ಲಿ ಒಳ್ಳೆಯ ಸುದ್ದಿಯನ್ನು ನೀಡುವ ನಿರೀಕ್ಷೆಯಿದೆ. 8ನೇ ವೇತನ ಆಯೋಗ ಜಾರಿಗೆ ಬಂದರೆ, ಲಕ್ಷಾಂತರ ಉದ್ಯೋಗಿಗಳ ಮೂಲ ವೇತನದಲ್ಲಿ ದೊಡ್ಡ ಬದಲಾವಣೆ ಹಾಗೂ ಪಿಂಚಣಿದಾರರಿಗೆ ಹೆಚ್ಚಿನ ಪ್ರಯೋಜನಗಳು ಸಿಗಬಹುದು.ಆದ್ದರಿಂದ ಸರ್ಕಾರಿ ನೌಕರ ಕಣ್ಣು ಇದೀಗ 8ನೇ ವೇತನ ಆಯೋಗ ಜಾರಿಯ ಮೇಲೆ ನೆಟ್ಟಿದೆ.

ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಹಣದುಬ್ಬರಕ್ಕೆ ಅನುಗುಣವಾಗಿ ತುಟ್ಟಿಭತ್ಯೆ (ಡಿಎ), ಪಿಂಚಣಿ ಮತ್ತು ಪ್ರಸ್ತುತ ಹಾಗೂ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸುವಂತಹ ಗುರಿಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ಹೇಳಿದ್ದರು.
ಈ ಕುರಿತು ವೇತನ ಆಯೋಗದಿಂದ 8ನೇ ವೇತನ ಆಯೋಗದ ಪ್ರಯೋಜನಗಳು ಮತ್ತು ಅನುಷ್ಠಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಫಿಟ್‌ಮೆಂಟ್ ಅಂಶವು ಅನೇಕರಿಗೆ ಹೆಚ್ಚಿನ ಲಾಭವನ್ನು ತಂದುಕೊಂಡಬಹುದು. ಇದು ಸಂಬಳ ಮತ್ತು ಪಿಂಚಣಿಯ ಮೇಲೆ ಹೇಗೆ ಪರಿಣಾಮ ಬೀರುತ್ತಾ ಎಂಬುವುದನ್ನುವೇತನ ಆಯೋಗದ ಜಾರಿಯವರೆಗೂ ಕಾದು ನೋಡಬೇಕಿದೆ.
ಕೇಂದ್ರ ಸಚಿವ ವೈಷ್ಣವ್ ತಿಳೀಸುರುವ ಮಾಹಿತಿಯ ಪ್ರಕಾರ ಜನವರಿ 2026 ರ ವೇಳೆಗೆ 8ನೇ ವೇತನ ಆಯೋಗ ಆಯೋಗ ರಚನೆಯಾಗುವ ಸಾಧ್ಯತೆಯಿದೆ. ಸರಿಸುಮಾರು1 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ನಿಯಮಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
8ನೇ ವೇತನ ಆಯೋಗದಲ್ಲಿ ವಿಳಂಬ ಯಾಕೆ?
8ನೇ ವೇತನ ಆಯೋಗದ ಪ್ರಸ್ತಾವನೆ ಸಲ್ಲಿಕೆಯ ಅನುಮೋದನೆಯ ಪ್ರಕಾರ ಅನುಷ್ಠಾನವು FY27ರಲ್ಲಿ ಆಗುವ ಸಾಧ್ಯತೆಯಿದೆ. ಅಂದಾಜು ಶೇ. 30 ರಿಂದ 34ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ವರದಿಗಳು ಆಗಿವೆ. ಈಗಾಗಲೇ 8ನೇ ವೇತನ ಆಯೋಗ ಘೋಷಣೆಯಾದರೂ ಹಣದುಬ್ಬರ ಮತ್ತು ಇನ್ನೂ ಇತರೆ ಕಾರಣಗಳಿಂದ 8ನೇ ವೇತನ ಆಯೋಗದಲ್ಲಿ ವಿಳಂಬವಾಗುತ್ತಿದೆ.
8ನೇ ವೇತನ ಆಯೋಗದಿಂದ ಯಾರಿಗೆ ಲಾಭ?
ಕೇಂದ್ರ ಸರ್ಕಾರಿ ನೌಕರಿಗೆ ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಫಲಾನುಭವಿಗಳಾಗಿದ್ದಾರೆ. ಇದರೊಂದಿಗೆ, ರಕ್ಷಣಾ ನಿವೃತ್ತರು ಸೇರಿದಂತೆ ಸುಮಾರು 65 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಂತೂ ಇದೆ.
ನಿರೀಕ್ಷಿತ ವೇತನ ಹೆಚ್ಚಳ
8ನೇ ವೇತನ ಆಯೋಗದ ಅಡಿಯಲ್ಲಿ ವೇತನ ಹೆಚ್ಚಳದ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಅಂಕಿಅಂಶ ನೀಡಿಲ್ಲ. ಆದರೆ, ಅಂದಾಜಿನ ಪ್ರಕಾರ, ಫಿಟ್‌ಮೆಂಟ್ ಅಂಶವು ನೌಕರರ ವೇತನವನ್ನು ಹೆಚ್ಚಿಸುವ ಸಾಧ್ಯತೆಯಿದೆ ಇದೆ.
ಮೂಲ ವೇತನ ಪರಿಷ್ಕರಣೆ ಹೇಗೆ?
ಕಳೆದ ಮೂರು ದಶಕಗಳಲ್ಲಿ ಸರ್ಕಾರವು ವೇತನ ಆಯೋಗದ ರಚನೆಯಲ್ಲಿ ಗ್ರೇಡ್ ಪೇ, ಪೇ ಬ್ಯಾಂಡ್‌ಗಳು ಮತ್ತು ಪೇ ಮ್ಯಾಟ್ರಿಕ್ಸ್‌ಗಳನ್ನು ಪರಿಚಯಿಸಿದೆ. ಇವುಗಳು ಸಂಬಳವನ್ನು ಪರಿಷ್ಕರಿಸುವ ಮಾನದಂಡಗಳಾಗಿವೆ.
ತುಟ್ಟಿಭತ್ಯೆ (ಡಿಎ) ಜೀವನ ವೆಚ್ಚವನ್ನು ಸರಿದೂಗಿಸಲು ಮೂಲ ವೇತನ ಅಮದಾಜು ಮಾಡಲಾಗುತ್ತದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧರಿಸಿ, ಡಿಎ ದರಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಉದಾಹರಣೆಯನ್ನು ನೋಡುವುದಾದರೆ ನೌಕರಿಗೆ ಮೂಲ ವೇತನ 18,000 ಆಗಿದ್ದರೆ ಮತ್ತು ಡಿಎ ದರ ಶೇ. 50 ಆಗಿದ್ದರೆ, ಡಿಎ 9,000 ಆಗುತ್ತದೆ. ಇದು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಒಟ್ಟು ವೇತನವನ್ನು ಹೆಚ್ಚಿಸುತ್ತದೆ. ಡಿಎ ಒಟ್ಟು ಆದಾಯದ ಸರಿಸುಮಾರು ಶೇಕಡಾ 30.9 ರಷ್ಟಿದೆ.
ಮನೆ ಬಾಡಿಗೆ ಭತ್ಯೆ (HRA) ಬಾಡಿಗೆ ವೆಚ್ಚಗಳನ್ನು ಸರಿದೂಗಿಸಲು ನೀಡಲಾಗುತ್ತದೆ ಮತ್ತು ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಇದು ಒಟ್ಟು ಆದಾಯದ ಸುಮಾರು ಶೇ. 15.4 ರಷ್ಟು ಇರುತ್ತದೆ.
ಸಾರಿಗೆ ಭತ್ಯೆ (TA) ವೇತನ ಮಟ್ಟ ಮತ್ತು ನಗರವನ್ನು ಆಧರಿಸಿ ಪ್ರಯಾಣ ವೆಚ್ಚಗಳನ್ನು ಸರಿದೂಗಿಸಲು ನೀಡಲಾಗುವ ಮಾಸಿಕ ಮೊತ್ತವಾಗಿದೆ. ಇದು ಒಟ್ಟು ಆದಾಯದ ಸುಮಾರು ಶೇ. 2.2 ರಷ್ಟು ಇರುತ್ತದೆ.
ಫಿಟ್‌ಮೆಂಟ್ ಅಂಶ
7ನೇ ವೇತನ ಆಯೋಗವು ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57ಕ್ಕೆ ನಿಗದಿಪಡಿಸಿ ಮೂಲ ವೇತನವನ್ನು ಕನಿಷ್ಠ 18,000ಕ್ಕೆ ಹೆಚ್ಚಿಸಿತು. ಆದರೆ, ಆಯೋಗದ ಆರಂಭದಲ್ಲಿ ಡಿಎ ಅನ್ನು ಶೂನ್ಯಕ್ಕೆ ನೀಡಲಾಗಿತ್ತು. ಹೊಸ ವೇತನ ಆಯೋಗ ಬಂದಾಗ, ಹಳೆಯ ಸಂಬಳವನ್ನು ನಿರ್ದಿಷ್ಟ ಗುಣಕದಿಂದ (ಫಿಟ್‌ಮೆಂಟ್ ಅಂಶ) ಹೆಚ್ಚಿಸುವ ಮೂಲಕ ಹೊಸ ವೇತನವನ್ನು ನಿರ್ಧರಿಸಲಾಗುತ್ತದೆ. ಈ ಬಾರಿ 2.08, 2.28 ಮತ್ತು 2.57 ನಂತಹ ಫಿಟ್‌ಮೆಂಟ್ ಅಂಶಗಳನ್ನು ಹೆಚ್ಚಸಬಹುದು ಎಂಬ ನಿರೀಕ್ಷೆಗಳು ಇದೆ.
ವೇತನ ಆಯೋಗದ ಕಾರ್ಯ
ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚನೆಯನ್ನು ಮಾಡಲಾಗಿದೆ.1946ರಿಂದ ಸರ್ಕಾರವು ಏಳು ವೇತನ ಆಯೋಗವನ್ನುನ ಜಾರಿಗೆ ತಂದಿತ್ತು. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಗಮನಿಸಿದ್ದರೆ ಈ ವೇತನ ಜಾರಿ ಬರುವುದು ಹೆಚ್ಚಿನ ಅನಿವಾರ್ಯವಿದೆ.
ಆಯೋಗವು ಹಣದುಬ್ಬರ, ಆರ್ಥಿಕತೆಯ ಸ್ಥಿತಿ, ಆದಾಯದ ಅಸಮಾನತೆಗಳು ಮತ್ತು ಸಂಬಂಧಿತ ಅಂಶಗಳನ್ನು ಪರಿಗಣಿಸುತ್ತದೆ. ಇದರೊಂದಿಗೆ, ಸರ್ಕಾರಿ ನೌಕರರಿಗೆ ನೀಡಲಾಗುವ ಬೋನಸ್‌ಗಳು, ಸವಲತ್ತುಗಳು, ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿನೆಯನ್ನು ಮಾಡಲಾಗುತ್ತದೆ.


Click it and Unblock the Notifications