ಕಳೆದ ಐದು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆ ತೀವ್ರ ಕುಸಿತವನ್ನು ಕಾಣತ್ತಲೇ ಇದೆ. ಇದು ಮಾರುಕಟ್ಟೆಯ ವಾರದ ಕೊನೆಯ ದಿನವಾದರೂ ಸಹ ಭಾರತೀಯ ಷೇರುಪೇಟೆ ವಹಿವಾಟಿನಲ್ಲಿ ಮತ್ತಷ್ಟು ಕುಸಿತ ಕಂಡಿದೆ.ಹಾಗಿದ್ರೆ ನಿಫ್ಟಿ ಬಿಎಸ್‌ಇ ಸೆನ್ಸೆಕ್ಸ್ ಎಷ್ಟು ಅಂಕಗಳಿಂದ ಕುಸಿತ ಕಂಡಿವೆ? ಷೇರಿನಲ್ಲಿ ಕುಸಿತ ಕಾಣಲು ಕಾರಣವೇನು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು,ಇಂದು ಭಾರತೀಯ ಷೇರುಕಟ್ಟೆಯಲ್ಲಿ ನಿಫ್ಟಿ ಸೂಚ್ಯಂಕವು 23 600 ಅಂಕಗಳಿಂದ ಮಾರ್ಕ್‌ಗಿಂತ ಕೆಳಗಿಳಿದಿದೆ. ಹಾಗೂ ಬಿಎಸ್‌ಇ ಸೆನ್ಸೆಕ್ಸ್ 1176.46 ಪಾಯಿಂಟ್ಸ್ ಅಥವಾ 1.49 ಪರ್ಸೆಂಟ್ ಇಳಿಕೆಗೊಂಡು 78,041.59 ಮಾರ್ಕ್‌ನಲ್ಲಿ ಇಂದಿನ ಮಾರುಕಟ್ಟೆಯನ್ನು ಮುಚ್ಚಿದೆ.

ನಿಫ್ಟಿ ಸೂಚ್ಯಂಕವು 364.2 ಪಾಯಿಂಟ್ಸ್ 1.52 ಪರ್ಸೆಂಟ್ ತಗ್ಗಿದ್ದು 23,587.50 ಮಾರ್ಕ್‌ನಲ್ಲಿ ಇದೆ. ದಿನದ ವಹಿವಾಟಿನಲ್ಲಿ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಾಕಷ್ಟು ಕುಸಿತವನ್ನು ಕಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 2.43 ಪರ್ಸೆಂಟ್ ಮತ್ತು 2.11 ಪರ್ಸೆಂಟ್ ಕುಸಿತ ಕಂಡಿದೆ.
ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂಪಾಯಿ ನಷ್ಟ
ಬಿಎಸ್‌ಇ ಮಾರುಕಟ್ಟೆ ಕ್ಯಾಪ್ ಇಂದು ಭಾರೀ ಕುಸಿತಕ್ಕೆ ಕಾರಣವಾಗಿದ್ದು,441 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಸೆಷನ್‌ನಲ್ಲಿ ಬಿಎಸ್‌ಇ ಮಾರುಕಟ್ಟೆ ಕ್ಯಾಪ್ 450 ಲಕ್ಷ ಕೋಟಿ ರೂಪಾಯಿ ನಷ್ಟಿದ್ದು,ಈ ಮೂಲಕ ಹೂಡಿಕೆದಾರರು ಶುಕ್ರವಾರ 9 ಲಕ್ಷ ಕೋಟಿ ರೂಪಾಯಿ ಕಳೆದು ಕೊಂಡಿದ್ದಾರೆ.
ಕಳೆದ ಐದು ಸೆಷನ್‌ನಲ್ಲಿ ಹೂಡಿಕೆದಾರರ ಸಂಪತ್ತು 18 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಡಿಸೆಂಬರ್ 13ರಂದು ಬಿಎಸ್‌ಇ ಲಿಸ್ಟೆಂಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು 459 ಲಕ್ಷ ಕೋಟಿ ರೂಪಾಯಿ ಇದೆ.
ಭಾರತೀಯ ಷೇರುಪೇಟೆ ಕುಸಿತಕ್ಕೆ ಇರುವ ಪ್ರಮುಖ ಕಾರಣಗಳು
ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರದಿಂದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಅಮೆರಿಕಾದ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್ ತಗ್ಗಿಸಿದ್ದು, ಸತತ ಮೂರನೇ ಬಾರಿಗೆ ಬಡ್ಡಿ ದರ ಇಳಿಕೆ ಮಾಡಿದೆ. ಡಿಸೆಂಬರ್ 18 ರಂದು ಮುಕ್ತಾಯಗೊಂಡ ಫೆಡರಲ್ ರಿಸರ್ವ್ ಸಭೆಯಲ್ಲಿ ಯುಎಸ್ ಫೆಡ್ 4.25 ರಿಂದ 4.50 ಪರ್ಸೆಂಟ್ ರಲ್ಲಿ ಇರಿಸಲಾಗಿದೆ. ಇದರಿಂದ ಫೆಡ್ ಬಡ್ಡಿ ದರ ಕಡಿತದ ಮೇಲೆ 2025ರಲ್ಲಿ ಎರಡು ಬಾರಿ ಬಡ್ಡಿ ದರ ಕಡಿತದ ಮುನ್ಸೂಚನೆ ಕೊಟ್ಟಿದ್ದರ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಗಳು ಸತತವಾಗಿ ಇಳಿಕೆ ಕಾಣುತ್ತಿವೆ ಎಂದೇ ಹೇಳಬಹುದು.
ರೂಪಾಯಿ ಮೌಲ್ಯದ ಕುಸಿತ
ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು ಕುಸಿತ ಕಂಡಿದೆ. ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 85.34ರಷ್ಟು ತಲುಪಿದೆ. ರೂಪಾಯಿ ದುರ್ಬಲತೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆ ಮೇಲೆ ಆಸಕ್ತಿ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ತಮ್ಮ ಸ್ಥಳೀಯ ಕರೆನ್ಸಿಗಳಿಗೆ ಹೆಚ್ಚು ಮಹತ್ವ ಪಡೆಯುತ್ತಿದೆ. ಈ ಬೆಳವಣಿಗೆಯೂ ಸಹ ಷೇರು ಕುಸಿತವಾಗಲು ಕಾರಣವಾಗಿರಹುದು.
ವಿದೇಶಿ ಬಂಡವಾಳ ಹೂಡಿಕೆ
ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹೊರತೆಗೆದಿದ್ದಾರೆ. ಅವರೆಲ್ಲರೂ ವಿದೇಶಿ ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಹಾಗೂ ಮಾರುಕಟ್ಟೆಯಲ್ಲಿ ನಡೆದ ಕಳೆದ ನಾಲ್ಕು ಸೆಷನ್‌ಗಳಲ್ಲಿ ವಿದೇಶಿ ಹೂಡಿಕೆದಾರರು ಬರೋಬ್ಬರಿ 12,000 ಕೋಟಿ ರೂಪಾಯಿ ಈಕ್ವಿಟಿ ಮಾರಾಟ ಮಾಡಿದೆ ಔಟ್‌ಫ್ಲೋ ಹೆಚ್ಚಾಗಿದೆ.ಇಂದು ಸಹ ಮಾರುಕಟ್ಟೆಯ ಇಳಿಕೆಗೆ ಕಾರಣವಾಗಿರಬಹುದು ಎಂದೇ ಹೇಳಬಹುದು.
ಗಳಿಕೆಯ ಚೇತರಿಕೆಯ ಮೇಲೆ ಅನಿಶ್ಚಿತತೆ
ಭಾರತೀಯ ಕಾರ್ಪೊರೇಟ್‌ಗಳ ದುರ್ಬಲ Q1 ಮತ್ತು Q2 ಗಳಿಕೆಯ ನಂತರ,ಇದೀಗ ಹೂಡಿಕೆದಾರರ ಕಣ್ಣುಗಳು ಡಿಸೆಂಬರ್ ಮೂರುತಿಂಗಳ (Q3) ಗಳಿಕೆಯ ಮೇಲೆ ಇವೆ. ತಜ್ಞರು ಗಳಿಕೆಯ ಚೇತರಿಕೆ
ನಿರೀಕ್ಷಿಸುತ್ತಿರುವಾಗ, Q4 ರಿಂದ ಮಾತ್ರ ಯೋಗ್ಯವಾದ ಚೇತರಿಕೆ ನಿರೀಕ್ಷಿಸಬಹುದು ಎಂದು
ತಜ್ಞರು ವಿವರಿಸಿದ್ದಾರೆ. ಇದು ಸಹ ಮಾರುಕಟ್ಟೆ ದುರ್ಬಲತೆ ಕಾರಣವಾಗಿದೆ.
ವ್ಯಾಪಾರ ಕೊರತೆ ಗರಿಷ್ಠ ಮಟ್ಟದಲ್ಲಿದೆ
ಭಾರತದ ಆರ್ಥಿಕತೆಯ ಬೆಳವಣಿಗೆಗೆಯೂ ದಿನೇ ದಿನೇ ಬದಲಾಗುತ್ತಿರುವುದರಿಂದ ಹೂಡಿಕೆದಾರರಿಗೆ ತಲೆ ಬೀಸಿ ಶುರುವಾಗಿದೆ. ದೇಶದ ವ್ಯಾಪಾರ ಕೊರತೆಯು ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.ಇದು ಮಾರುಕಟ್ಟೆ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತಿದೆ.
ಇನ್ನೂ ವ್ಯಾಪಾರದ ಕೊರತೆ ಅಥವಾ ಆಮದುಗಳ ಮೌಲ್ಯವು ರಫ್ತುಗಳನ್ನು ಮೀರಿದ ಮೊತ್ತವು ದಾಖಲೆಯ $37.84 ಶತಕೋಟಿಯನ್ನು ಮುಟ್ಟಿತು. ಇದಲ್ಲದೆ, ಒಟ್ಟಾರೆ ಆರ್ಥಿಕ ಬೆಳವಣಿಗೆಯು ಸತತ ಮೂರನೇ ತಿಂಗಳಲ್ಲಿ ಬೆಳವಣಿಗೆ ನಿಧಾನವಾಗಿ ಸಾಗುತ್ತಿದೆ.
ಯಾವೆಲ್ಲಾ ವಲಯಗಳಲ್ಲಿ ಕುಸಿತ ಕಂಡಿದೆ?
ಬಹುತೇಕ ಎಲ್ಲಾ ವಲಯಗಳು ಎನ್‌ಎಸ್‌ಇನಲ್ಲಿ ಭಾರೀ ನಷ್ಟಕ್ಕೆ ಗುರಿಯಾಗಿವೆ.ನಿಫ್ಟಿ ರಿಯಾಲ್ಟಿ 4 ಪರ್ಸೆಂಟ್, ಪಿಎಸ್‌ಯು ಬ್ಯಾಂಕ್ ಮತ್ತು ಐಟಿ ಸೂಚ್ಯಂಕವು 3 ಪರ್ಸೆಂಟ್ ಕುಸಿದಿದೆ. ನಿಫ್ಟಿ ಮೆಟಲ್, ಮೀಡಿಯಾ, ಆಟೋ, ನಿಫ್ಟಿ ಬ್ಯಾಂಕ್ ಸೂಚ್ಯಂಕವು ಶೇಕಡಾ 2ರಷ್ಟು ಇಳಿಕೆಕೊಂಡಿವೆ.
More From GoodReturns

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!



Click it and Unblock the Notifications