For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧ ಬೆಳಗಿದ ಹಣತೆಗಳು:ದೇಶದಲ್ಲಿ 32,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇಳಿಕೆ

|

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹಣತೆ ಬೆಳಗುವ ಕಾರ್ಯಕ್ಕೆ ದೇಶದ ಮೂಲೆ ಮೂಲೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆಯಿತು. ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲದ ದೇಶದೆಲ್ಲೆಡೆ ಜನತೆಯು ಲೈಟ್ ಸ್ವಿಚ್ ಆಫ್ ಮಾಡಿ ದೀಪ, ಕ್ಯಾಂಡೆಲ್‌ಗಳನ್ನು ಹೊತ್ತಿಸಿದ್ದರು.

ಪ್ರಧಾನಿಯ ಈ ಕರೆಗೆ ದೇಶದೆಲ್ಲೆಡೆ ಅಭೂತಪೂರ್ವ ಬೆಂಬಲದ ಜೊತೆಗೆ, ಜನರು ಲೈಟ್ ಸ್ವಿಚ್ ಆಫ್ ಮಾಡಿದ್ದರಿಂದ ಭಾನುವಾರ 20 ನಿಮಿಷಗಳಲ್ಲಿ ರಾಷ್ಟ್ರೀಯ ವಿದ್ಯುತ್ ಬೇಡಿಕೆ 32,000 ಮೆಗಾವ್ಯಾಟ್ ಇಳಿದಿದೆ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.

9 ನಿಮಿಷ ಲೈಟ್ ಸ್ವಿಚ್ ಆಫ್:32,000 MW ವಿದ್ಯುತ್ ಬೇಡಿಕೆ ಇಳಿಕೆ

"ಫ್ರೀಕ್ವೆನ್ಸಿ ಮತ್ತು ವೋಲ್ಟೇಜ್ ಅನ್ನು ಸಾಮಾನ್ಯ ವ್ಯಾಪ್ತಿಯಲ್ಲಿ ನಿರ್ವಹಿಸಲಾಗಿದೆ. ಡ್ರಾಪ್ ... ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರದ ಕರೆಗೆ ಭಾರಿ ಪ್ರತಿಕ್ರಿಯೆ ತೋರಿಸುತ್ತದೆ" ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ದೇಶದಲ್ಲಿನ ಕೊರೊನಾ ವಿರುದ್ಧ ಹೋರಾಟಕ್ಕೆ ಇಡೀ ದೇಶವೇ ಒಂದಾಗಿರುವಂತೆ ಬಿಂಬಿಸಿದ ದೀಪ ಬೆಳಗುವ ಕಾರ್ಯಕ್ರಮ ಭಾನುವಾರ ಬಹು ಯಶಸ್ವಿಯಾಗಿದೆ. ಇದರ ಜೊತೆಗೆ ವಿದ್ಯುತ್ ಉಳಿತಾಯದ ಜೊತೆಗೆ ಬೇಡಿಕೆಯು ಇಳಿಕೆಗೊಂಡಿದೆ.

English summary

9 Minute Lights Out Call Goes Well Power Demand Down

A nine-minute lights-out event on Sunday evening effect The power consumption went down 32,000 MV
Story first published: Monday, April 6, 2020, 13:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X