ಬೆಂಗಳೂರು, ಸೆಪ್ಟೆಂಬರ್ 24: ಸಾಮಾನ್ಯವಾಗಿ ಆಟೋರಿಕ್ಷಾ ಚಾಲಕರು ಕಂಪೆನಿಯಿಂದ ಬರುವ ಸೀಟುಗಳಲ್ಲೇ ಕೂತು ಆಟೋ ಓಡಿಸಿರುವುದನ್ನು ನೋಡಿರುತ್ತೇವೆ. ಕೆಲವರು ಅಲ್ಪಸ್ವಲ್ಪ ಬದಲಾವಣೆ ಮಾಡಿ ಗುಣಮಟ್ಟದ ಕುಶನ್ ಇರುವ ಸೀಟು ಬಳಸಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಕಚೇರಿಗೆ ಬಳಸುವ ಚೇರ್ ಅನ್ನೇ ಬಳಸಿಕೊಂಡಿರುವುದು ಈಗ ವೈರಲ್ ಆಗಿದೆ.
ಬೆಂಗಳೂರು ನಾಟ್ ಫಾರ್ ಬಿಗಿನರ್ಸ್ ಎಂದು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇಲ್ಲಿನ ಆಟೋ ಚಾಲಕರು ಕೂಡ ಈ ಹೆಸರಿಗೆ ಕೊಡುಗೆ ನೀಡಿದ್ದಾರೆ. ಅವರ ಜಾಣ್ಮೆ, ಹಾಸ್ಯಭರಿತ ಹೇಳಿಕೆಗಳು ವೈರಲ್ ಆಗುತ್ತಾ ಇರುತ್ತವೆ. ಇತ್ತೀಚೆಗೆ ಆಟೋ ಚಾಲಕರೊಬ್ಬರು ರೈಡ್‌ನ ಪಾವತಿಗಾಗಿ ತಾವು ಕಟ್ಟಿದ್ದ ಸ್ಮಾರ್ಟ್ ವಾಚ್‌ನಿಂದ ಕ್ಯೂ ಆರ್ ಕೋಡ್ ತೋರಿಸಿದ್ದು ವೈರಲ್ ಆಗಿತ್ತು.

ಈಗ ಮತ್ತೊಬ್ಬ ಆಟೋ ಚಾಲಕರು ತಮ್ಮ ಆಟೋದ ಮೂಲ ಸೀಟನ್ನು ಬದಲಿಸಿ ಆಫೀಸ್ ಮಾದರಿಯ ಚೇರ್ ಅನ್ನು ಬಳಸಿ ತಮ್ಮ ಆಸನವನ್ನಾಗಿ ಮಾಡಿಕೊಂಡಿರುವುದು ನಿಜಕ್ಕೂ ಅಚ್ಚರಿಯನ್ನು ತಂದಿದೆ. ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರ ಶಿವಾನಿ ಮುಟ್ಲಪುಡಿ ಎಂಬುವವರು ಹಂಚಿಕೊಂಡ ಪೋಟೋವೊಂದರಲ್ಲಿ ಆಟೋ ಚಾಲಕರೊಬ್ಬರು ವಾಹನ ಚಾಲನೆ ಮಾಡುವಾಗ ಉತ್ತಮ ಸೌಕರ್ಯ, ಹಾಯಾದ ಸೀಟಿಗಾಗಿ ಆಫೀಸ್ ಖುರ್ಚಿಯನ್ನೇ ಬಳಸಿ ಸೀಟನ್ನು ರೆಡಿ ಮಾಡಿಕೊಂಡಿರುವುದು ಕಂಡು ಬಂದಿದೆ.
ಆಟೋ ಡ್ರೈವರ್ ಅವರ ಈ ಪೋಟೋವನ್ನು ಹಂಚಿಕೊಳ್ಳುವಾಗ ಮ್ಯಾನ್ ಐ ಲವ್ ಬೆಂಗಳೂರು ಎಂದು ಶೀರ್ಷಿಕೆ ಹಾಕಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ. ಶಿವಾನಿ ಅವರು ಆಟೋ ಚಾಲಕ ತಮ್ಮ ವಾಹನದ ಅಪಗ್ರೇಡ್ ಅನ್ನು ಹೀಗೆ ಬದಲಾವಣೆ ಮಾಡಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರ ಪೋಸ್ಟ್‌ಗೆ ಒಬ್ಬ ಎಕ್ಸ್ ಬಳಕೆದಾರರು ಬೆಂಗಳೂರಿನ ಸೌಂದರ್ಯ ಎಂದು ಕರೆದಿದ್ದಾರೆ. ಆಟೋ ಚಾಲಕರ ಈ ಜಾಣ್ಮೆ ತುಂಬಾ ದೂರ ಹೋಗಿದೆ ಎಂದು ಹೇಳಿದ್ದಾರೆ. ಕಚೇರಿಯ ಖುರ್ಚಿಗಳನ್ನು ದೀರ್ಘಕಾಲ ಕುಳಿತುಕೊಳ್ಳಲು ವಿನ್ಯಾಸ ಮಾಡಲಾಗಿರುತ್ತದೆ. ಆದರೆ ಅದನ್ನು ಆಟೋ ಚಾಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿರುವುದು ಶಿವಾನಿ ಅವರಿಗೆ ಅಶ್ಚರ್ಯ ತಂದಿದೆ.
ಅವರ ಪೋಸ್ಟ್‌ಗೆ ಮತ್ತೊಬ್ಬ ಬಳಕೆದಾರರು ಹಹಾ ಬ್ಯಾಕ್ ಹೆಲ್ತ್ ಕೇರ್ ಮ್ಯಾಕ್ಸ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಬೆನ್ನಿನ ಸಮಸ್ಯೆ ಇರುವುದು ನಿಜ ಎಂದು ಬರೆದಿದ್ದಾರೆ. ಈ ಚಿತ್ರವು ಎಐ ಮುಖ್ಯ ವಿನ್ಯಾಸಕ ಅಟ್ಲಾಸಿಯನ್‌ನಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುವ ಡೇವಿಡ್ ಹೋಂಗ್ ಅವರಿಗೂ ಮೆಚ್ಚುಗೆ ಪಡೆಯಿತು. ಅವರು ಪ್ರತಿಕ್ರಿಯಿಸಿ ಇದರ ಅನುಭವ ಪಡೆಯಲು ನಾನು ಶೀಘ್ರವೇ ಬೆಂಗಳೂರಿಗೆ ಹೋಗುತ್ತೇನೆ ಎಂದು ಬರೆದಿದ್ದಾರೆ.
ಕೆಲವು ಎಕ್ಸ್ ಬಳಕೆದಾರರು ಈ ಈ ಖುರ್ಚಿಯಲ್ಲಿ ಕುಳಿತುಕೊಳ್ಳುವುದು ಅಷ್ಟೋಂದು ಉಚಿತವಲ್ಲ ಎಂದು ಹೇಳಿದರು. ಮತ್ತೊಬ್ಬರು ಇದು ಬಹುಶಃ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ ಆಗುತ್ತದೆ. ಇದರಲ್ಲಿ ಪ್ರತಿಯೊಂದು ಭಾಗವನ್ನು ವಿಶೇಷವಾಗಿ ಸುರಕ್ಷತೆ ವಿಷಯದಲ್ಲಿ ಪ್ರಮಾಣೀಕರಿಸಲಾಗಿರುತ್ತದೆ. ನಾನು ಜರ್ಮನ್ ಟ್ರಕ್ ಮ್ಯಾನುಫ್ಯಾಕ್ಚರಿಂಗ್ ಆರ್ಗ್‌ನ ವಿನ್ಯಾಸ ವಿಭಾಗದಲ್ಲಿ ಕೆಲಸ ಮಾಡಿದ್ದರಿಂದ ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.


Click it and Unblock the Notifications