ಇನ್ಫೋಸಿಸ್ ಮೇಲೆ ಜನಾಂಗೀಯ ತಾರತಮ್ಯ ಆರೋಪ: ದೂರು ದಾಖಲು ಮಾಡಿದ ಮಾಜಿ ಉದ್ಯೋಗಿ

ವಾಷಿಂಗ್ಟನ್, ಜೂನ್ 13: ಮುಂದುವರೆದ ದೇಶವಾದ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಬುಗಿಲೆದ್ದಿದೆ. ಕಪ್ಪು ವರ್ಣಿಯ ಜಾರ್ಜ್ ಪ್ಲೊಯ್ಡ ಸಾವಿನ ನಂತರ ಅಮೆರಿಕದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಈ ಸಂಗತಿ ಕೇವಲ ಅಮೆರಿಕ ಅಷ್ಟೇ ಅಲ್ಲ, ಇಡೀ ಜಗತ್ತಿನಾದ್ಯಂತ ಜನಾಂಗೀಯ ತಾರತಮ್ಯದ ಚರ್ಚೆಯನ್ನು ಹುಟ್ಟಿಹಾಕಿದೆ. ಜನಾಂಗೀಯ ತಾರತಮ್ಯ ಎಂಬುದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೊಲ್ಡ್ ಬ್ಲಡ್ ತರ ಕೆಲಸ ಮಾಡುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಕೆಲವರು ಬಹಿರಂಗವಾಗಿ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ.

ಇದೀಗ ಸಾಪ್ಟವೇರ್ ದೈತ್ಯ ಇನ್ಫೋಸಿಸ್ ಮೇಲೂ ಜನಾಂಗೀಯ ತಾರತಮ್ಯದ ಆರೋಪ ಕೇಳಿ ಬಂದಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಇನ್ಫೋಸಿಸ್ ಮಾಜಿ ಉದ್ಯೋಗಿ ತನ್ನ ಮೇಲೆ ಜನಾಂಗೀಯ ತಾರತಮ್ಯ ಮಾಡಲಾಗಿತ್ತು ಎಂದು ಅಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದಾರೆ.

ಭಾಷಾಶಾಸ್ತ್ರಜ್ಞೆ ಡೇವಿನಾ

ಭಾಷಾಶಾಸ್ತ್ರಜ್ಞೆ ಡೇವಿನಾ

ಇನ್ಫೋಸಿಸ್ ನ ಡೈವರಸಿಟಿ ವಿಭಾಗದ ಮುಖ್ಯಸ್ಥರಾಗಿದ್ದ ಭಾಷಾಶಾಸ್ತ್ರಜ್ಞ ಡೇವಿನಾ ಅವರು ನನ್ನ ವಿರುದ್ಧ ಜನಾಂಗೀಯ ತಾರತಮ್ಯ ಎಸಗಲಾಗಿದೆ ಎಂದು ಅಮೆರಿಕದ ಟೆಕ್ಸಾಸ್ ಜಿಲ್ಲಾ ನ್ಯಾಯಲಯದಲ್ಲಿ ದೂರು ದಾಖಲು ಮಾಡಿದ್ದಾರೆ. 2.5 ಕೋಟಿ ರುಪಾಯಿ ಪರಿಹಾರವನ್ನೂ ಕೋರಿದ್ದಾರೆ.

ಹಳೇ ಕೇಸ್‌ನಲ್ಲಿ ಸಾಕ್ಷ್ಯ ನುಡಿದಿದ್ದ ಡೇವಿನಾ

ಹಳೇ ಕೇಸ್‌ನಲ್ಲಿ ಸಾಕ್ಷ್ಯ ನುಡಿದಿದ್ದ ಡೇವಿನಾ

ಇನ್ಫೋಸಿಸ್ ನ ಈ ಹಿಂದಿನ ಕ್ಲಾಸ್ ಆಕ್ಷನ್ ಮೊಕದ್ದಮೆಯಲ್ಲಿ 2016 ರಲ್ಲಿ ಇನ್ಫೋಸಿಸ್ ವಿರುದ್ಧ ಸಾಕ್ಷ್ಯ ನುಡಿದಿದ್ದಕ್ಕಾಗಿ ಇನ್ಫೋಸಿಸ್ ತನ್ನ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ ಎಂದು ಆಫ್ರಿಕನ್ ಅಮೆರಿಕನ್ ಜನಾಂಗದ ಪ್ರಜೆ ಡೇವಿನಾ ಆರೋಪಿಸಿದ್ದಾರೆ. ಜನಾಂಗೀಯ ತಾರತಮ್ಯ ಎಸಗಿ ತನ್ನನ್ನು 2017 ರಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

20 ಸಾವಿರ ಉದ್ಯೋಗಿಗಳು

20 ಸಾವಿರ ಉದ್ಯೋಗಿಗಳು

ಇನ್ಫೋಸಿಸ್ ಪರವಾಗಿ ಅಮೆರಿಕದಲ್ಲಿ 20 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ ದಕ್ಷಿಣ ಏಷ್ಯಾ ಮತ್ತು ಭಾರತದವರೇ ಅಧಿಕವಾಗಿದ್ದಾರೆ. ಇವರಿಂದ ನನಗೆ ಜನಾಂಗೀಯ ತಾರತಮ್ಯ ಎಸಗಲಾಗಿದೆ ಎಂದು ಡೇವಿನಾ ಆರೋಪಿಸಿದ್ದಾರೆ.

ಡೇವಿನಾ ಆರೋಪಗಳನ್ನು ನಿರಾಕರಿಸಿದ ಇನ್ಫೋಸಿಸ್

ಡೇವಿನಾ ಆರೋಪಗಳನ್ನು ನಿರಾಕರಿಸಿದ ಇನ್ಫೋಸಿಸ್

ಡೇವಿನಾ ಟೆಕ್ಸಾಸ್ ನ್ಯಾಯಾಲಯದಲ್ಲಿ ತೀರ್ಪುಗಾರರ ವಿಚಾರಣೆಯನ್ನು ಕೋರಿದ್ದಾರೆ ಮತ್ತು ಕಂಪನಿಯಿಂದ ಪರಿಹಾರವನ್ನೂ ಕೋರಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆ ಡೆವಿನಾರ ಎಲ್ಲಾ ಆರೋಪಗಳನ್ನು ನಿರಾಕರಿಸಿರುವುದಾಗಿ ಇನ್ಫೋಸಿಸ್ ಹೇಳಿದೆ. ಇದೊಂದು ಆಧಾರರಹಿತ ಆರೋಪ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+