ಟ್ರಾಫಿಕ್ ಸಮಸ್ಯೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡುವಲ್ಲಿ ಟ್ರಾಫಿಕ್ ಲೈಟ್‌ಗಳು ಮಹತ್ತರ ಪಾತ್ರ ವಹಿಸುತ್ತದೆ. ಬೆಂಗಳೂರು, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಇಂತಹ ಟ್ರಾಫಿಕ್ ಲೈಟ್‌ಗಳಿಂದ ಅದೆಷ್ಟೋ ಅಪಘಾತಗಳನ್ನು ತಡೆಯಬಹುದಾಗಿದೆ. ಇತ್ತೀಚೆಗೆ ಸಾರ್ವಜನಿಕರಿಗಾಗಿ ಟ್ರಾಫಿಕ್ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ಟ್ರಾಫಿಕ್ ಲೈಟ್‌ನಲ್ಲಾಗಿರುವ ಬದಲಾವಣೆ ಜನರ ಭಾರೀ ಗಮನ ಸೆಳೆದಿದೆ.

ಚೆನ್ನೈನಲ್ಲಿ ಹೃದಯಾಕಾರದ ಟ್ರಾಫಿಕ್ ಸಿಗ್ನಲ್ ಲೈಟ್ ನೋಡಿ, ಜನರು ಶಾಕ್ ಆಗಿದ್ದಾರೆ. ಈ ಹಾರ್ಟ್ ರೀತಿಯ ಟ್ರಾಫಿಕ್ ಲೈಟ್ ಚಾಲಕರ ಭಾರೀ ಗಮನ ಸೆಳೆಯುತ್ತಿವೆ. ಕೆಂಪು ಲೈಟ್ ಹೃದಯದ ಆಕಾರದಲ್ಲಿ ಉರಿಯುವುದನ್ನು ನೋಡಿ ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಇದು ಕೇವಲ ಸೌಂದರ್ಯದ ವೈಶಿಷ್ಟ್ಯವೋ ಅಥವಾ ಇದರ ಹಿಂದೆ ಬೇರೆ ಅರ್ಥವಿದೆಯೋ ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಸಾಮಾನ್ಯವಾಗಿ ನಾವು ಟ್ರಾಫಿಕ್ ಸಿಗ್ನಲ್‌ನಲ್ಲಿ (Traffic Signal) ನಿಂತಾಗ, ಕೆಂಪು, ಹಳದಿ, ಹಸಿರು ಬಣ್ಣದಲ್ಲಿ ಟ್ರಾಫಿಕ್ ಲೈಟ್ ನಿಲ್ಲಲು ಸೂಚಿಸುವ ಸರಳ ಸಂಕೇತವಾಗಿರುತ್ತದೆ. ಆದರೆ ಚೆನ್ನೈನ ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿ, ಕೆಂಪು ದೀಪಗಳು ಹೃದಯದ (Red Traffic Light) ಆಕಾರದಲ್ಲಿ ಸದ್ಯ ಕಾಣುತ್ತಿದೆ. ಈ ವಿಶಿಷ್ಟ ನೋಟವು ಅನೇಕರ ಗಮನ ಸೆಳೆದಿದ್ದರೂ, ಇದರ ಹಿಂದಿನ ಕಾರಣ ಹೆಚ್ಚಿನವರಿಗೆ ತಿಳಿದಿರಲಿಲ್ಲ.
ಇತ್ತೀಚೆಗೆ, ವಿಮಾನ ನಿಲ್ದಾಣದ ಬಳಿ ಇಂತಹ ಹೃದಯಾಕಾರದ ಕೆಂಪು ಲೈಟ್ ಗಮನಿಸಿದ ವ್ಯಕ್ತಿಯೊಬ್ಬರು ಅದರ ಫೋಟೋವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ವಿಮಾನ ನಿಲ್ದಾಣದ ಬಳಿಯ ಸಿಗ್ನಲ್‌ನಲ್ಲಿ ಈ ಹೃದಯಾಕಾರದ ಕೆಂಪು ದೀಪವನ್ನು ನೋಡಿದೆ. ಇದು ತುಂಬಾ ಸುಂದರವಾಗಿದೆ! ಹೆಚ್ಚಿನ ಸಿಗ್ನಲ್‌ಗಳಲ್ಲಿ ಇದು ಇದೆಯೇ?" ಎಂಬ ಟೈಟಲ್ ಮೂಲಕ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಈ ಪೋಸ್ಟ್‌ಗೆ 400ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು, ಅನೇಕ ಕಾಮೆಂಟ್‌ಗಳು ಸಹ ಬಂದಿವೆ. ಜನರು ಈ ಹೃದಯಾಕಾರದ ಲೈಟ್‌ನ ಅರ್ಥ ಏನಾಗಿರಬಹುದು ಎಂದು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಕೆಲವರು ಇದನ್ನು ಅರಿವು ಮೂಡಿಸುವ ಪ್ರಯತ್ನ ಎಂದರೆ, ಇನ್ನೂ ಕೆಲವರು ಇದನ್ನು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಅನೇಕ ಬಳಕೆದಾರರು ಈ ಹೃದಯಾಕಾರದ ದೀಪಗಳು ಕೆಲವು ಸಮಯದಿಂದ ಚೆನ್ನೈನಲ್ಲಿ ತೋರಿಸಲಾಗುತ್ತಿದೆ ಎಂದು ಹೇಳಿದ್ದಾರೆ. "ಚೆನ್ನೈನ ಹೆಚ್ಚಿನ ಸಿಗ್ನಲ್‌ಗಳಲ್ಲಿ ಇವುಗಳನ್ನು ಅಳವಡಿಸಿ ಒಂದು ವರ್ಷವಾಯಿತು" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಹೌದು! ಚೆನ್ನೈ ಉದ್ದಕ್ಕೂ ರೆಡ್ ಟ್ರಾಫಿಕ್ ಲೈಟ್ ಹೃದಯದಾಕಾರದಲ್ಲಿದೆ ಎಂದು ಹೇಳಿದರೆ. ಅದೇ ರೀತಿ ಮತ್ತೊಬ್ಬರು, ನೀವು ಪ್ರೀತಿಸುವವರು ನಿಮಗಾಗಿ ಕಾಯುತ್ತಿದ್ದಾರೆ, ಆದ್ದರಿಂದ ಎಚ್ಚರಿಕೆಯಿಂದ ಚಾಲನೆ ಮಾಡಿ ಎಂದು ಇದರ ಅರ್ಥವಿರಬಹುದು" ಎಂದು ಹೇಳಿದ್ದಾರೆ.
ಕೆಲವರು ಹಾಸ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹಲವಾರು ಕಮೆಂಟ್‌ಗಳು ಬರುತ್ತಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ರೀತಿಯ ಟ್ರಾಫಿಕ್ ಲೈಟ್ ಕೇವಲ ಚೆನ್ನೈ ಮಾತ್ರವಲ್ಲ, ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲೂ ತೋರಿಸಲಾಗಿತ್ತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications