ಬೆಂಗಳೂರು, ಏಪ್ರಿಲ್ 18: ರೋಡ್ ಸೈಡ್ ನಲ್ಲಿ ಬಹಳಷ್ಟು ಫಾಸ್ಟ್ ಫುಡ್ ಅಂಗಡಿಗಳನ್ನು ನೋಡಿದ್ದೇವೆ. ಇಂತಹ ಫಾಸ್ಟ್ ಫುಡ್ ಅಂಗಡಿಯೊಂದರ ಮುಂದೆ ಹಾಕಲಾಗಿರುವ ಬೋರ್ಡ್ ಒಂದು ಈಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಹುಟ್ಟುಹಾಕಿದೆ.
ಮೊಮೊಸ್ ಮಾರುವ ಶಾಪ್ ಒಂದರಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಹಾಕಿರುವ ಜಾಬ್ ಆಫರ್ ನ ಪೋಟೋ ತೆಗೆದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದು ಸಖರ್ ವೈರಲ್ ಆಗಿದ್ದು ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆಲ್ಲಾ ಕಾರಣ ಮೊಮೊಸ್ ಅಂಗಡಿ ಮಾಲೀಕ ನೀಡುವ ವೇತನ.ಹೌದು ತನ್ನ ಅಂಗಡಿಗೆ ಕೆಲಸಕ್ಕೆ ಬರುವವರಿಗೆ 25,000 ಸಂಬಳ ನೀಡುವುದಾಗಿ ದೊಡ್ಡದಾಗಿ ಬೋರ್ಡ್ ಹಾಕಿದ್ದು, ಇದು ಅನೇಕ ಐಟಿ ಕಂಪನಿಗಳು ತಮ್ಮ ಫ್ರೆಶರ್‌ಗಳಿಗೆ ನೀಡುವ ವೇತನಕ್ಕಿಂತ ಹೆಚ್ಚಾಗಿದೆ.!

ಎಕ್ಸ್‌ನಲ್ಲಿ ಬಳಕೆದಾರ ಅಮೃತಾ ಸಿಂಗ್, ಎಂಬವರು ಈ ಪೋಸ್ಟ್ ಮಾಡಿದ್ದು, ಇದರಲ್ಲಿ ಮೊಮೊಸ್ ಅಂಗಡಿ ಮಾಲೀಕ ಉದ್ಯೋಗ ಜಾಹೀರಾತನ ಪೋಸ್ಟನ್ನು ತನ್ನ ಅಂಗಡಿ ಪಕ್ಕದಲ್ಲಿ ಇರಿಸಿದ್ದಾರೆ. ದೊಡ್ದ ಫಾಂಟ್ ನಲ್ಲಿ ಹಿಂದಿ ಲಿಪಿಯಿಂದ ಬರೆಯಲ್ಪಟ್ಟ ಪೋಸ್ಟರ್ ನಲ್ಲಿ ಸಹಾಯಕ ಅಥವಾ ಕೆಲಸಗಾರನ ಉದ್ಯೋಗ ಮಾಡಲು ಜನ ಬೇಕಾಗಿದ್ದಾರೆ ಎಂದು ಬರೆದಿದ್ದು 25,000ದ ಉತ್ತಮ ಸಂಬಳದ ಭರವಸೆಯೂ ಇದೆ. "ಈ ದಿನಗಳಲ್ಲಿ ಈ ಸ್ಥಳೀಯ ಮೋಮೋಸ್ ಅಂಗಡಿಯು ಭಾರತದ ಸಾಮಾನ್ಯ ಕಾಲೇಜಿಗಿಂತ ಉತ್ತಮ ಪ್ಯಾಕೇಜ್ ಅನ್ನು ನೀಡುತ್ತಿದೆ" ಎಂದು ಶೀರ್ಷಿಕೆ ಬರೆದಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸಾಮಾನ್ಯವಾಗಿ ಅತ್ಯಲ್ಪ ಸಂಬಳ ಪಡೆದು ಜಟಿಲವಾದ ಮತ್ತು ಭಯದ ಆರ್ಥಿಕ ಹೊರೆಯನ್ನು ಇಟ್ಟುಕೊಂಡಿರುವ ಈ ಕಾಲದಲ್ಲಿ ಮೊಮೊಸ್ ಅಂಗಡಿಯಲ್ಲಿ ರೂ 25,000 ಗಳಿಸುವ ನಿರೀಕ್ಷೆಯು ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಅನೇಕ ಮಂದಿ ತಾವು ಅರ್ಜಿ ಸಲ್ಲಿಸುವುದಾಗಿ ತಮಾಷೆಯಾಗಿ ಹೇಳಿದ್ದಾರೆ. ಇನ್ನು ಕೆಲವರು ವೇತನದ ಹೊರತಾಗಿಯೂ ಕೆಲಸವು ಸುಲಭವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"ಇಂಜಿನಿಯರ್ ಸಂಬಳವು ಸಮಯದೊಂದಿಗೆ ಹೆಚ್ಚಾಗುತ್ತದೆ, ಇಲ್ಲಿ ಅದು ಆಗುವುದಿಲ್ಲ" ಎಂದು ಒಬ್ಬ ನೆಟ್ಟಿಗ ತನ್ನ ಸಂದೇಹ ವ್ಯಕ್ತಪಡಿಸಿದ್ರೆ, ಮತ್ತೋರ್ವ ಬಳಕೆದಾರನು, ಈ ಕೆಲಸದ ಸವಾಲುಗಳನ್ನು ವಿವರಿಸಿ, ದೀರ್ಘಾವಧಿಯ ಸಮಯ ಮತ್ತು ದೈಹಿಕ ಕಷ್ಟದ ಬಗ್ಗೆ ವಿವರಿಸಿದ್ದಾರೆ. ಕೆಲಸದ ಸಮಯಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ + ಇಡೀ ದಿನ ನಿಂತೇ ಕೆಲ್ಸ ಮಾಡಬೇಕಾಗುತ್ತದೆ+ ಪಾವತಿಸಿದ ರಜೆಗಳಿಲ್ಲ + ವಿಮೆ ಇಲ್ಲ. ಸರಾಸರಿ ಕಾಲೇಜು ವಿದ್ಯಾರ್ಥಿಗಳು ಒಂದು ಸ್ಥಳದಲ್ಲಿ ಕುಳಿತು ಕೇವಲ 3 ಗಂಟೆಗಳ ಕಾಲ ಅಧ್ಯಯನ ಮಾಡಬಹುದು. ಅವರು 13 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು TCS ಗಿಂತ ಉತ್ತಮವಾಗಿ ಪಾವತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರೆ, ಮಗದೊಬ್ಬ ಟ್ವಿಟ್ಟರ್ ಬಳಕೆದಾರರು ಕುತೂಹಲದಿಂದ ಭಾರತವು ತಿಳಿಯಲು ಬಯಸುತ್ತದೆ. ಈ ಸ್ಥಳ ಎಲ್ಲಿದೆ? ಎಂದಿದ್ದಾರೆ. "ನಾನು ಸ್ವಿಗ್ಗಿ ಮತ್ತು ಝೊಮಾಟೊದಲ್ಲೂ ಈ ಪ್ರವೃತ್ತಿಯನ್ನು ನೋಡುತ್ತಿದ್ದೇನೆ. ಅವರು ಸುಮಾರು 25 ರಿಂದ 30 ಸಾವಿರದವರೆಗೆ ವರೆಗೆ ಉತ್ತಮ ವೇತನವನ್ನು ಪಡೆಯುತ್ತಾರೆ ಎಂದು ಮತ್ತೋರ್ವ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ 90,000 ಕ್ಕೂ ಹೆಚ್ಚು ವಿವ್ಯೂಸ್ ಮತ್ತು ನೂರಾರು ಕಾಮೆಂಟ್‌ಗಳೊಂದಿಗೆಹಾಕಿದ ತಕ್ಷಣ ಶೀಘ್ರದಲ್ಲೇ ವೈರಲ್ ಆಗಿದೆ.


Click it and Unblock the Notifications