ಬೆಂಗಳೂರು: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈಗಾಗಲೇ ಸದನದಲ್ಲಿ ಹಲವು ವಿಧೇಯಕಗಳನ್ನು ಮಂಡಣೆ ಮಾಡಲಾಗಿದೆ. ಇದೀಗ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ವಿಧೇಯಕ ಮಂಡಿಸಲು ಸಜ್ಜಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು (Karnataka Govt) ಅಪಾರ್ಟ್ಮೆಂಟ್ ಮಾಲೀಕರಿಗೆ ಮತ್ತು ನಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಇದೀಗ 'ಕರ್ನಾಟಕ ಅಪಾರ್ಟ್ಮೆಂಟ್ ಮಸೂದೆ 2025' (Karnataka Apartment Bill 2025) ಅನ್ನು ಜಾರಿಗೆ ತರಲು ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಅಪಾರ್ಟ್‌ಮೆಂಟ್ ಓನರ್ಸ್ ಮತ್ತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಜೊತೆ ವಿಶೇಷ ಸಂವಾದ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ಆದ್ರೆ ನಗರದ 19% ಜನಸಂಖ್ಯೆ ಅಪಾರ್ಟ್ಮೆಂಟ್‌ಗಳಲ್ಲೇ ಜೀವನ ಸಾಗಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 'ಬೆಂಗಳೂರು ದೊಡ್ಡದಾಗಿದೆ, ಉತ್ತಮ ಆಡಳಿತಕ್ಕಾಗಿ GBA (ಗ್ರೇಟರ್ ಬೆಂಗಳೂರು) ರಚಿಸಿದ್ದೇವೆ. 1972 ರಲ್ಲಿ ಅಪಾರ್ಟ್ಮೆಂಟ್ ಕಾಯ್ದೆ ಜಾರಿಗೆ ಬಂದ ನಂತರ ಅದರ ಬದಲಾವಣೆ ಇಂದಿಗೂ ಆಗಿಲ್ಲ. ಆದರೆ ನಮ್ಮ ಸರ್ಕಾರ ಈ ಬದಲಾವಣೆಗೆ ಮುಂದಾಗಿದೆ' ಎಂದು ಹೇಳಿದರು.
ಅಪಾರ್ಟ್‌ಮೆಂಟ್ ಮಾಲೀಕರ ಮಸೂದೆ 2025 ಎಂದರೇನು?
ಅಪಾರ್ಟ್ ಮೆಂಟ್ ಮಾಲೀಕರ ಮಸೂದೆ ಎಂದರೆ ರಾಜ್ಯದಲ್ಲಿರುವ ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಸರಿಯಾದ ನೀತಿ, ನಿಯಮಗಳನ್ನು ರೂಪಿಸುವ ರಾಜ್ಯದ ಕಾನೂನಾಗಿದೆ. ಇದು ಅಪಾರ್ಟ್‌ಮೆಂಟ್‌ನ ಸ್ವತ್ತುಗಳನ್ನು ರಿಯಲ್ ಎಸ್ಟೇಟ್ ಆಸ್ತಿಯನ್ನಾಗಿ ರೂಪಿಸುತ್ತದೆ.
ಮಸೂದೆ ಮಂಡಣೆಗೂ ಮುನ್ನ ಸಲಹೆ!
ಅಪಾರ್ಟ್ಮೆಂಟ್ ನಿವಾಸಿಗಳ ಹಿತಾಸಕ್ತಿ ಕಾಪಾಡಲು ಇದೀಗ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿ, ಪ್ರಸ್ತಾವಿತ ಮಸೂದೆಗೆ ಸಾರ್ವಜನಿಕರ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಸಲಹೆ ನೀಡಲು ಸಾಧ್ಯವಾಗದವರು ಮುಂದಿನ 10 ದಿನಗಳಲ್ಲಿ ಇಮೇಲ್ ಮೂಲಕ ಕಳುಹಿಸಬಹುದು ಎಂದು ಡಿಸಿಎಂ ಭರವಸೆ ನೀಡಿದರು.
ಹೊಸ ಮಸೂದೆಯು ದಶಕಗಳಷ್ಟು ಹಳೆಯದಾದ 'ಅಪಾರ್ಟ್ಮೆಂಟ್ ಕಾಯ್ದೆ'ಯನ್ನು ಬದಲಾಯಿಸುವ ನಿರೀಕ್ಷೆಯಿದೆ. ಭೂಮಿ ಹಕ್ಕುಗಳು, ಸಾಮಾನ್ಯ ಪ್ರದೇಶಗಳ ಮಾಲೀಕತ್ವ ಮತ್ತು ನಿರ್ವಹಣೆಯಂತಹ ವಿಷಯಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ತರುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ ಗೃಹಖರೀದಿದಾರರ ವೇದಿಕೆ ಸಂಚಾಲಕ ಧನಂಜಯ ಪದ್ಮನಾಭಾಚಾರ್, ಕಾನೂನು ಅಂತರಗಳನ್ನು ಎತ್ತಿ ತೋರಿಸಿದರು. ಹಾಲಿ ಅಪಾರ್ಟ್ಮೆಂಟ್ ಸಂಘಗಳು ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದೆ. ಹೈಕೋರ್ಟ್ ಆದೇಶದಂತೆ, 1960ರ 'ಸೊಸೈಟಿಗಳ ನೋಂದಣಿ ಕಾಯ್ದೆ' ಅಡಿಯಲ್ಲಿ ಸಂಘಗಳಿಗೆ ನಿರ್ವಹಣಾ ಶುಲ್ಕ ಸಂಗ್ರಹಿಸಲು ನಿರ್ಬಂಧವಿದೆ. ಇದು ಆರ್ಥಿಕವಾಗಿ ತೊಡಕಾಗಿದೆ.
ಇದಲ್ಲದೆ, 1972ರ 'ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ' ಅಡಿಯಲ್ಲಿ ರಾಜ್ಯದಲ್ಲಿ ಸಮರ್ಥ ಪ್ರಾಧಿಕಾರವಿಲ್ಲ. ಇದರಿಂದ ನಿವಾಸಿಗಳಿಗೆ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇಲ್ಲದೆ ನ್ಯಾಯಾಲಯದ ಮೊರೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಅಪಾರ್ಟ್ಮೆಂಟ್ ಮಾಲೀಕರಿಗೆ ಭೂಮಿ ವರ್ಗಾವಣೆ ಇನ್ನೂ ಬಗೆಹರಿಯದ ಪ್ರಮುಖ ಸಮಸ್ಯೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ವಕೀಲ ವಿಠಲ್ ಬಿ.ಆರ್. ತಿಳಿಸಿದರು.
'ಕರ್ನಾಟಕ ಮಾಲೀಕತ್ವ ಫ್ಲಾಟ್‌ಗಳ ಕಾಯ್ದೆ' ಮತ್ತು 'ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ'ಗಳನ್ನು ಒಟ್ಟಾಗಿ ಪರಿಗಣಿಸುವುದರಿಂದ ಈ ಅಂತರ ನಿವಾರಣೆಯಾಗುತ್ತದೆ ಎಂದು ವಿಠಲ್ ಬಿ.ಆರ್. ಸಲಹೆ ನೀಡಿದ್ದಾರೆ.
ಮಸೂದೆಯ ವಿಶೇಷತೆಗಳು:
- ಭೂ ಮಾಲೀಕತ್ವ: ಅಂದರೆ ಬಿಲ್ಡರ್‌ಗಳಿಂದ ಅಪಾರ್ಟ್‌ಮೆಂಟ್ ಓನರ್‌ಗಳಿಗೆ ಭೂಮಿ ಮತ್ತು ಕಾಮನ್ ಏರಿಯಾ (UDS-Undivided Share) ಸಂಪೂರ್ಣವಾಗಿ ವರ್ಗಾವಣೆ ಮಾಡುವುದಾಗಿದೆ.
- ಅಸೋಸಿಯೇಷನ್ ರಚನೆ: ಅಪಾರ್ಟ್‌ಮೆಂಟ್ ಓನರ್‌ಗಳ ಅಸೋಸಿಯೇಷನ್‌ಗಳನ್ನು ಮತ್ತಷ್ಟು ಉತ್ತಮಗೊಳಿಸುವುದಾಗಿದೆ.
- ವಿವಾದಗಳಿಗೆ ತೆರೆ: ಹೊಸ ಅಪೀಲ್ ಅಥಾರಿಟಿ ಅಂದರೆ ವಿವಾದ ಪರಿಹಾರ ಸಂಸ್ಥೆಯನ್ನು ರಚನೆ ಮಾಡುವುದು. ಇದರಿಂದ ಕೋರ್ಟ್‌ಗೆ ಹೋಗುವ ಪರಿಸ್ಥಿತಿ ಎದುರಾಗುವುದಿಲ್ಲ.
- ಹಳೆಯ ಅಪಾರ್ಟ್‌ಮೆಂಟ್‌ಗಳ ಮರುನಿರ್ಮಾಣಕ್ಕೆ ಕಠಿಣ ನಿಯಮ
- ಎಂಟು ಅಥವಾ ಹೆಚ್ಚಿನ ಅಪಾರ್ಟ್‌ಮೆಂಟ್ ಹೊಂದಿರುವ ಯೋಜನೆಗಳಿಗೆ ಇದು ಅನ್ವಯವಾಗುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications