ಬೆಂಗಳೂರು, ಆಗಸ್ಟ್ 19: ಬೆಂಗಳೂರು ಉದ್ಯಾನ ನಗರಿ. ಬಹುಶಃ ಬೆಂಗಳೂರಲ್ಲಿರುವಷ್ಟು ಉದ್ಯಾನ ಭಾರತದ ಯಾವ ಮಹಾನಗರಿಯಲ್ಲೂ ಇರಲಿಕ್ಕಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಕಾಂಕ್ರಿಟ್ ಕಟ್ಟಡಗಳು, ಟ್ರಾಫಿಕ್ ಸಮಸ್ಯೆ, ಜನದಟ್ಟಣೆ, ಶಬ್ದ,ಗಾಳಿ ಮಾಲಿನ್ಯದಂತಹ ಅನೇಕ ಸಮಸ್ಯೆಗಳು ಇಲ್ಲಿದೆ. ನಾಡಪ್ರಭು ಕೆಂಪೇಗೌಡರು 16 ನೇ ಶತಮಾನದಲ್ಲಿ ಕಂಡಿದ್ದ ದೂರದೃಷ್ಟಿಯ ಕನಸ್ಸಿನ ಫಲವಾಗಿ ಇಂದು ಸುಮಾರು 1.40 ಕೋಟಿಗೂ ಅಧಿಕ ಜನರು ವಾಸಿಸುತ್ತಿದ್ದಾರೆ. ಒಂದು ನಗರದ ಭವಿಷ್ಯತ್ತಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಜಲ ಸಂರಕ್ಷಣೆಯ ಮೂಲಗಳಾದ ಕೆರೆ, ಕುಂಟೆಗಳು ಕಲ್ಯಾಣಿಗಳನ್ನು ನಿರ್ಮಿಸಿ ದೂರ ದೃಷ್ಟಿಯ ಕನಸನ್ನು ಕಂಡಿದ್ದರು. ಇಂದಿನ ಪೀಳಿಗೆಯಿಂದ ಕೆರೆಗಳನ್ನು ಬಸ್ ನಿಲ್ದಾಣಗಳ ಮತ್ತು ಬಡಾವಣೆಗಳನ್ನಾಗಿ ನಿರ್ಮಿಸಿ ಕಾಂಕ್ರೀಟ್ ಕಾಡು ಬೆಳೆಸಲಾಗುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರವೂ ಬೃಹತ್ ಬೆಂಗಳೂರು ನಗರಕ್ಕೆ ಶುದ್ಧ ಉಸಿರಾಟಕ್ಕೊಂದು ತಾಣ ನಿರ್ಮಾಣ ಮಾಡಲು ಮುಂದಾಗಿದೆ.
ಕೆ.ಆರ್ ಪುರದ ಬಳಿಯ ಕೊತ್ತನೂರಿನಲ್ಲಿರುವ 500 ಕೋಟಿ ರೂ. ಮೌಲ್ಯ 17 ಎಕರೆ ಜಮೀನಿನಲ್ಲಿ ವೃಕ್ಷೋದ್ಯಾನ, ಪಕ್ಷಿಲೋಕ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಈ ಕಾಮಗಾರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಆಗಸ್ಟ್ ಮೊದಲ ವಾರದಲ್ಲಿ ಚಾಲನೆ ನೀಡಿದ್ದರು. ಈ ವಿಶಾಲ ಭೂಮಿಯಲ್ಲಿ 1,800 ಸ್ಥಳೀಯ ಪ್ರಭೇದದ ಸಸಿ ನೆಡುವುದು ಹಾಗೂ ಜಮೀನಿನ ಸುತ್ತಲೂ ತಂತಿ ಬೇಲಿ ಹಾಕುವ ಮೊದಲ ಹಂತದ ಕಾಮಗಾರಿ ನಡೆಸಲಾಗುತ್ತಿದೆ.

ಹೊಸ ಅರಣ್ಯ ಉದ್ಯಾನವನವು ಬೆಂಗಳೂರಿನ ನಿವಾಸಿಗಳಿಗೆ ಪ್ರಮುಖ ಹಸಿರು ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಪಕ್ಷಿಲೋಕವನ್ನು ನಿರ್ಮಿಸಲು ಬೃಹತ್ ಪಂಜರದೊಳಗೆ ಮರಗಳನ್ನು ಬೆಳೆಸಿ ಅದರಲ್ಲಿ ವಿವಿಧ ಬಗೆಯ ಪಕ್ಷಿ ಪ್ರಭೇದಗಳನ್ನು ಬಿಡಲಾಗುವುದು. ಈ ಹಕ್ಕಿಗಳ ಕಲರವ, ಸ್ವಚ್ಛಂದ ಹಾರಾಟವನ್ನು ಸ್ಥಳೀಯರಷ್ಟೇ ಅಲ್ಲ, ಪ್ರವಾಸಿಗರೂ ಕಣ್ತುಂಬಿಕೊಳ್ಳುವಂತೆ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. ಈ ಯೋಜನೆ ಬಗ್ಗೆ ಸ್ಥಳೀಯ ನಿವಾಸಿಗಳು ಹರ್ಷವನ್ನು ವ್ಯಕ್ತಪಡಿಸಿದ್ದು ಇದು ಮನರಂಜನಾ ಮತ್ತು ಶೈಕ್ಷಣಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಬೆಂಗಳೂರಿನ ಪ್ರಮುಖ ಭಾಗದಲ್ಲಿರುವ ಕೊತ್ತನೂರು ಸೇರಿ ಹಲವೆಡೆ ಅರಣ್ಯ ಜಮೀನು ಮರು ವಶಕ್ಕೆ ಪಡೆದು ಶುದ್ಧ ಉಸಿರಾಟಕ್ಕೊಂದು ತಾಣ ನಿರ್ಮಾಣ ಮಾಡಲು ಬಯಸಿದ್ದೇವೆ. ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದ್ದು, ನಗರ ಪ್ರದೇಶದಲ್ಲಿ ಉಸಿರಾಡಲು ಹಸಿರು ಪ್ರದೇಶ ಇರಲೇಬೇಕು. ಹೀಗಾಗಿ ನಗರದಲ್ಲಿ ಶುದ್ಧ ಉಸಿರಾಟಕ್ಕೊಂದು ತಾಣ (ಲಂಗ್ ಸ್ಪೇಸ್) ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಐಟಿ -ಬಿಟಿ ಕಂಪನಿಗಳಿರುವ ಈ ಪ್ರದೇಶ ಕಾಂಕ್ರೀಟ್ ಅರಣ್ಯದಂತಿದ್ದು, 17 ಎಕರೆಯಲ್ಲಿ ನಿರ್ಮಾಣವಾಗಲಿರುವ ಈ ವೃಕ್ಷೋದ್ಯಾನ ಬೆಳಗಿನ ವಾಯುವಿಹಾರ, ವೀಕ್ ಎಂಡ್ ನಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಮಾಹಿತಿ ಮತ್ತು ಮನರಂಜನೆಯ ತಾಣವಾಗುವಂತೆ ಅಭಿವೃದ್ಧಿಪಡಿಸಲಾಗುವುದು" ಈ ಕಾಮಗಾರಿಗೆ ಚಾಲನೆ ನೀಡಿದ ಅರಣ್ಯ ಸಚಿವರ ಖಂಡ್ರೆ ತಿಳಿಸಿದ್ದರು.
ಮರಳಿ ವಶಕ್ಕೆ ಪಡೆದ ಭೂಮಿ:
ಬೆಂಗಳೂರಿನ ಕೊತ್ತನೂರಿನಲ್ಲಿ ಸುಮಾರು 500 ಕೋಟಿ ರೂ. ಬೆಲೆ ಬಾಳುವ 17.34 ಎಕ್ರೆ ಭೂಮಿಯನ್ನು 2006 ರಲ್ಲಿ ಜಿಲ್ಲಾಧಿಕಾರಿಗಳು ಅರಣ್ಯ ಪ್ರದೇಶವೆಂದು ಗೊತ್ತುಪಡಿಸಿದ್ದರು. ಇದಾದ 17 ವರ್ಷಗಳ ಬಳಿಕ ಆದರೆ ಮುಂದೆ ಅತಿಕ್ರಮಣಕ್ಕೆ ಕಾರಣವಾಯಿತು. 2023ರಲ್ಲಿ ಉಪ ವಿಭಾಗಧಿಕಾರಿಯಾಗಿದ್ದ ಎಂ.ಜಿ. ಶಿವಣ್ಣ ಮತ್ತ ತಹಶೀಲ್ದಾರ್ ಅಜಿತ್ ರೈ ಏಕಪಕ್ಷೀಯವಾಗಿ ಈ ಅರಣ್ಯ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಬದಲಾಯಿಸಿದ್ದರು. ಇದು ಒತ್ತುವರಿ ಮಾಡಿದ್ದವರಿಗೆ ಅನುಕೂಲ ಮಾಡಿಕೊಟ್ಟಿತ್ತು. ಭೂಮಿ ಪುನಃಸ್ಥಾಪನೆ ನಿಟ್ಟಿನಲ್ಲಿ ಹೈಕೋರ್ಟ್ ಯಶಸ್ವಿ ಕಾನೂನು ಪ್ರಕ್ರಿಯೆಗಳ ನಂತರ ಅರಣ್ಯ ಇಲಾಖೆ ಅದನ್ನು ಮರಳಿ ಪಡೆಯಲು ಶಕ್ತವಾಯಿತು.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications