ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (CREDAI) ಭಾರತದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮವನ್ನು ಅಂದಾಜಿಸಲು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಒಳನೋಟಗಳನ್ನು ನೀಡಿದೆ.
ತನ್ನ ಮೊದಲ ಕೈಗಾರಿಕಾ ಫಲಿತಾಂಶಗಳನ್ನು ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ಮೇ 24 ರಿಂದ ಜೂನ್ 2021ರವರೆಗ ನಡೆಸಿತು. ಈ ಸಮೀಕ್ಷೆಯು 217 ನಗರಗಳಿಂದ 4,813 ಡೆವಲಪರ್‌ಗಳ ಮೊದಲ ರೀತಿಯ ವ್ಯಾಪಕ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ.

ಈ ಸಮೀಕ್ಷೆಯ ವರದಿ ಪ್ರಕಾರ ಸರ್ಕಾರ ಮತ್ತು ಆರ್‌ಬಿಐ ಈ ಕ್ಷೇತ್ರದಲ್ಲಿ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಲಿದ್ದರೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಶೇ. 95ಕ್ಕೂ ಹೆಚ್ಚು ಡೆವಲಪರ್‌ಗಳು ಯೋಜನೆಯ ವಿಳಂಬ ಎಂದು ಭಾವಿಸುತ್ತಾರೆ.
ಯೋಜನೆಯ ವಿಳಂಬಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಶೇಕಡಾ 92ರಷ್ಟು ಡೆವಲಪರ್‌ಗಳು ಕಾರ್ಮಿಕ ಕೊರತೆಯನ್ನು ಅನುಭವಿಸುತ್ತಿದ್ದು, ಶೇ. 83ರಷ್ಟು ಡೆವಲಪರ್‌ಗಳು ಅರ್ಧಕ್ಕಿಂತ ಕಡಿಮೆ ಉದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಶೇ. 82ಕ್ಕೂ ಹೆಚ್ಚು ಡೆವಲಪರ್‌ಗಳು ಯೋಜನೆಯ ಅನುಮೋದನೆ ವಿಳಂಬವನ್ನು ಎದುರಿಸುತ್ತಿದ್ದಾರೆ.
ಇದರ ಜೊತೆಗೆ ಉಕ್ಕು, ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಶೇಕಡಾ 88ಕ್ಕಿಂತ ಹೆಚ್ಚು ಡೆವಲಪರ್‌ಗಳಿಗೆ ನಿರ್ಮಾಣ ವೆಚ್ಚದಲ್ಲಿ ಶೇ. 10ಕ್ಕಿಂತ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಶೇಕಡಾ 77ರಷ್ಟು ಡೆವಲಪರ್‌ಗಳು ಸಾಲಗಳ ಸೇವೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
CREDAIನ ಈ ಸಮೀಕ್ಷೆಯು ಬಹುಶಃ ಭಾರತದ ಅತ್ಯಂತ ವಿಸ್ತಾರವಾದ ಮತ್ತು ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಸಮೀಕ್ಷೆಯಗಿದ್ದು, ರಾಷ್ಟ್ದಾದ್ಯಂತದ ಡೆವಲಪರ್‌ಗಳಿಂದ ನೇರವಾಗಿ ಅಂಕಿ-ಅಂಶಗಳನ್ನು ಸ್ವೀಕರಿಸಿದೆ ಮತ್ತು ವಾಸ್ತವತೆಯನ್ನು ಬಿಚ್ಚಿಟ್ಟಿದೆ.
'' ನಾವು ಪ್ರಸ್ತುತ ಸಮೀಕ್ಷೆಯನ್ನು ಉಲ್ಲೇಖಸಿ ಸರ್ಕಾರದ ಪ್ರಾತಿನಿಧ್ಯವನ್ನು ನೀಡಿದ್ದೇವೆ ಮತ್ತು ತುರ್ತು ಪರಿಹಾರ ತುಂಬಲು ಮತ್ತು ಚೇತರಿಕೆಗೆ ಸಹಾಯ ಮಾಡಲು ತ್ವರಿತ ಪ್ರಗತಿಪರ ಕ್ರಮಗಳನ್ನು ಪ್ರಾರಂಭಿಸಲು ಸರ್ಕಾರವನ್ನು ಕೋರಿದ್ದೇವೆ'' ಎಂದು CREDAI ರಾಷ್ಟ್ರೀಯ ಅಧ್ಯಕ್ಷ ಶ್ರೀ ಹರ್ಷ ವರ್ಧನ್ ಪಟೋಡಿಯಾ ಹೇಳಿದ್ದಾರೆ.
ಭಾರತೀಯ ಆರ್ಥಿಕತೆಯ ಪುನರುಜ್ಜೀವನಕ್ಕೆ ಮುಂದುವರಿದ ಮತ್ತು ಸಮರ್ಪಕವಾದ ನೀತಿ ಬೆಂಬಲವು ಅಗತ್ಯವಾಗಿದೆ. ಏಕೆಂದರೆ ರಿಯಲ್ ಎಸ್ಟೇಟ್ ವಲಯವು ಭಾರತದ ಜಿಡಿಪಿಯ ಶೇಕಡಾ 6 ರಿಂದ 7ರಷ್ಟಿದೆ. ಇದು ಎರಡನೇ ಅತಿದೊಡ್ಡ ಉದ್ಯೋಗದಾತ ಮತ್ತು ದೇಶದ 270ಕ್ಕೂ ಪೂರಕ ಕೈಗಾರಿಕೆಗಳಿಗೆ ವ್ಯಾಪರ ಉತ್ಪಾದಕವಾಗಿದೆ ಎಂದು CREDAI ಅಂದಾಜಿಸಿದೆ.


Click it and Unblock the Notifications