ಬೆಂಗಳೂರು, ಫೆಬ್ರವರಿ 5: ಪ್ರೇರಣಾ ಜುಂಜುನ್ವಾಲಾ ಇವರು ಭಾರತೀಯ ಉದ್ಯಮಿಯಾಗಿದ್ದು, ಸರಣಿ ಉದ್ಯಮಗಳನ್ನು ಹುಟ್ಟುಹಾಕಿದವರು. ಹಲವರಿಗೆ ಸ್ಪೂರ್ತಿಯಾಗಿರುವ ಇವರು ಸಿಂಗಾಪುರದಲ್ಲಿ ಯಶಸ್ವಿಯಾಗಿ ಪ್ರಿಸ್ಕೂಲ್ ಕೂಡಾ ನಡೆಸುತ್ತಿದ್ದಾರೆ.
ಪ್ರೇರಣಾ ಅವರು ಮೊದಲು ಸ್ಥಾಪಿಸಿದ್ದು, "ಲಿಟಲ್ ಪ್ಯಾಡಿಂಗ್ಟನ್" ಪ್ರಿಸ್ಕೂಲ್. ಇದಾದ ಬಳಿಕ ಅವರು "ಕ್ರಿಯೇಟಿವ್ ಗೆಲಿಲಿಯೊ"ವನ್ನು ಪ್ರಾರಂಭಿಸಿದರು. ಇದು 3 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲು ಮೀಸಲಾದ ಎಡ್ಯೂಟೆಕ್ ಸ್ಟಾರ್ಟ್ಅಪ್ ಆಗಿದೆ.

ಈ ಅಪ್ಲಿಕೇಶನ್ ಸುಮಾರು ಮೂರರಿಂದ ಎಂಟು ವರ್ಷದೊಳಗಿನ ಮಕ್ಕಳಲ್ಲಿ ಕಲಿಕೆಯನ್ನುಉತ್ತೇಜನ ನೀಡುತ್ತದೆ. ಪ್ರೇರಣಾ ಅವರು ಅದಕ್ಕೂ ಹಿಂದೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಕಾರ್ಖಾನೆಗಳಲ್ಲಿ ಮಕ್ಕಳಿಗೆ ಬೋಧಿಸುತ್ತಿದ್ದರು.
ಪ್ರೇರಣಾ ಜುಂಜುನ್ವಾಲಾ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್ ನ ವಿಜ್ಞಾನ ವಿಷಯದಲ್ಲಿ ಪದವೀಧರರಾಗಿದ್ದಾರೆ. "ಲಿಟಲ್ ಸಿಂಘಮ್" ಮತ್ತು "ಟೂಂಡೆಮಿ"(Toondemy ) ಪ್ರೇರಣಾ ಜುಂಜುನ್‌ವಾಲಾ ಅವರ ಸಂಸ್ಥೆ ಬಿಡುಗಡೆ ಮಾಡಿದ ಮತ್ತೆರಡು ಹೊಸ ಅಪ್ಲಿಕೇಶನ್‌ಗಳಾಗಿವೆ. ಇದನ್ನು ಒಂದು ಬಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಮಾಡಲಾಗಿದೆ. ಶೀಘ್ರವಾಗಿ ಭಾರತದ ಪ್ಲೇ ಸ್ಟೋರ್‌ನಲ್ಲಿನ ಟಾಪ್ 20ರಲ್ಲಿ ಸ್ಥಾನ ಪಡೆದ ಮಕ್ಕಳ ಕಲಿಕೆಯ ಏಕೈಕ ಅಪ್ಲಿಕೇಶನ್ ಇದಾಗಿದೆ.
ಪ್ರೇರಣಾ ಜುಂಜುನ್ವಾಲಾ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಈ ಸಾಫ್ಟ್‌ವೇರ್ ಮಕ್ಕಳಿಗೆ ಗ್ಯಾಮಿಫಿಕೇಶನ್, ನಿರೂಪಣೆಯ ವೀಡಿಯೊಗಳು ಮತ್ತು ಕಸ್ಟಮೈಸ್ ಮಾಡಿದ ಕಲಿಕೆಯ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿಕೊಂಡಿದೆ. ಇದರ ಹೊರತಾಗಿ, ಪ್ರೇರಣಾ ಜುಂಜುನ್ವಾಲಾ ಅವರು ಔಪಚಾರಿಕವಾಗಿ ಯಾವುದೇ ವ್ಯಾಪಾರಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಿಲ್ಲ, ಯಾಕೆಂದರೆ ಸಾಮಾನ್ಯವಾಗಿ ಸ್ಟಾರ್ಟ್‌ಅಪ್‌ಗಳನ್ನು ಹುಟ್ಟುಹಾಕುವ ಉದ್ಯಮಿಗಳು ಹೆಚ್ಚಾಗಿ ಐಐಟಿ, ಐಐಎಂ ಅಥವಾ ಬೇರೆ ಯಾವುದಾದರೂ ಉದ್ಯಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಧ್ಯಯನ ಮಾಡಿರುತ್ತಾರೆ.
ಪ್ರೇರಣಾ ಜುಂಜುನ್‌ವಾಲಾ ಅವರ ಸ್ಟಾರ್ಟ್‌ಅಪ್ ಮೌಲ್ಯವು 2023 ರಲ್ಲಿ $ 40 ಮಿಲಿಯನ್ ಅಥವಾ 330 ಕೋಟಿ ರೂ. ಆಗಿತ್ತು. ಭವಿಷ್ಯದ ತಂತ್ರಗಳ ಬಗ್ಗೆ ಮಾತನಾಡಿರುವ, ಪ್ರೇರಣಾ ಜುಂಜುನ್ವಾಲಾ ಅವರು ಶೈಕ್ಷಣಿಕ ತಂತ್ರಜ್ಞಾನದ ಉದ್ಯಮಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದಾರೆ.
ಅವರ ಕಂಪನಿಯು ಸ್ಥಳೀಯ ಭಾಷೆಗಳ ಮೇಲೆ ಕೇಂದ್ರೀಕರಿಸಿದ ವಿಷಯವನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಪ್ರೇರಣಾ ಅವರ ವಾಣಿಜ್ಯೋದ್ಯಮ ಪ್ರಯಾಣವು ಮಹತ್ವಾಕಾಂಕ್ಷೆಯ ಉದ್ಯಮಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.


Click it and Unblock the Notifications