ಸಣ್ಣ ಕೋಣೆಯೊಂದರಲ್ಲಿ ಉದ್ಯಮ ಆರಂಭಿಸಿ, 2,000 ಕೋಟಿ ರೂ.ಗಳ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ ಯುವಕ

ಬೆಂಗಳೂರು, ಸೆಪ್ಟೆಂಬರ್‌ 15: 6ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ತಂದೆಯಂತೆ ಕೂಲಿಯಾಗಲು ಆ ಬಾಲಕ ಮಾನಸಿಕವಾಗಿ ಸಿದ್ದಗೊಂಡಿದ್ದ. ಆದರೆ ವಿಧಿ ನಿಯಮವೇ ಬೇರೆ ಇತ್ತು. ಆ ಪುಟ್ಟ ಹುಡುಗ ಮುಂದೆ ಬೆಳೆದು ನಿಂತದ್ದು ನೂರಾರು ಜನರಿಗೆ ಉದ್ಯೋಗ ನೀಡುವ ಯಶಸ್ವಿ ಉದ್ಯಮಿಯಾಗಿ. ಇಂತಹ ಸ್ಪೂರ್ತಿದಾಯಕ ಕಥೆ ಉದ್ಯಮಿ ಪಿಸಿ ಮುಸ್ತಫಾ ಅವರದ್ದು. ಇವರೊಬ್ಬ ಸ್ವಯಂ ನಿರ್ಮಿತ ಉದ್ಯಮಿಯಾಗಿದ್ದು ಇವರ ಜೀವನ ಪಯಣವು ಕಠಿಣ ಪರಿಶ್ರಮ, ಶೃದ್ದೆ ಇದ್ದರೆ ಹೇಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬಹುದು ಎಂಬುವುದಕ್ಕೆ ಸ್ಫೂರ್ತಿದಾಯಕವಾಗಿದೆ.

ತಾಜಾ ತಿಂಡಿ ಇಡ್ಲಿ, ದೋಸೆ ಹಿಟ್ಟು ಮಾರುವ ಮೂಲಕ 2,000 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಕೂಲಿಯಾಳಿನ ಮಗನಾಗಿರುವ ಐಡಿ ಫ್ರೆಶ್ ಫುಡ್‌ನ ಸಿಇಒ ಪಿ.ಸಿ.ಮುಸ್ತಫಾ ಇಂದು ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ. ಮುಸ್ತಫಾ ಮೂಲತಃ ಕೇರಳದ ವಯನಾಡಿನ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದು, ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ಅವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು ಜೀವನವು ಕಷ್ಟಕರವಾಗಿತ್ತು. ಓದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿರದ ಕಾರಣ ಮುಸ್ತಫಾ 6 ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಕಾರಣ ಶಾಲೆಯನ್ನು ತೊರೆದು ಮುಸ್ತಫಾ ತನ್ನ ತಂದೆಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ಅಂದು ಅವರ ದಿನನಿತ್ಯದ ಆದಾಯ ಕೇವಲ 10 ರೂ ಆಗಿತ್ತು.

2,000 ಕೋಟಿ ರೂ.ಗಳ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ ಯುವಕ

ಮುಸ್ತಫಾ ಮತ್ತು ಅವರ ಒಡಹುಟ್ಟಿದವರು ತಮ್ಮ ಕುಟುಂಬವನ್ನು ಪೋಷಿಸಲು ಉರುವಲು ಮಾರಾಟ ಸೇರಿ ಹಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. 10 ವರ್ಷದ ಬಾಲಕನಾಗಿದ್ದಾಗ ಮುಸ್ತಾಫ ತಮ್ಮ ಬಳಿ 150 ರೂ. ಹಣ ಉಳಿತಾಯ ಮಾಡಲು ಯಶಸ್ವಿಯಾದರು., ಅದನ್ನು ಅವರು ತಮ್ಮ ಮೊದಲ ಹೂಡಿಕೆಯಾಗಿ ಬಳಸಿದರು. ಮನೆಯಲ್ಲಿದ್ದ ಮೇಕೆಯನ್ನು ಮಾರಿ ಹಸು ಖರೀದಿಸಿ ತಂದರು. ಇದು ಕುಟುಂಬಕ್ಕೆ ನಿಯಮಿತ ಆದಾಯ ತರುವಂತೆ ಮಾಡಿತು. ಹೀಗೆ ಶಾಲೆ ತೊರೆದ ಅವರನ್ನು ಶಿಕ್ಷಕರೊಬ್ಬರು ಭೇಟಿ ಮಾಡಿ, ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿ ಶಾಲೆಗೆ ಮರಳುವಂತೆ ಹುರಿದುಂಬಿಸಿದರು. ಅಲ್ಲಿಂದ ಅವರ ಜೀವನ ಪಯಣ ಬದಲಾಗಿತ್ತು.

ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಸ್ತಫಾ ಕ್ಯಾಲಿಕಟ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದರು. ವಿದ್ಯಾಭ್ಯಾಸ ಮುಗಿಸಿ 15,000 ರೂ.ಗಳ ವೇತನದೊಂದಿಗೆ ಮೋಟೋರೋಲಾ ಸಂಸ್ಥೆಯಲ್ಲಿ ಉದ್ಯೋಗವನ್ನೂ ಮಾಡಿದರು. ನಂತರ ಅವರು ಐರ್ಲೆಂಡ್ ಮತ್ತು ದುಬೈನಂತಹ ವಿವಿಧ ದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿದರು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಲು ಭಾರತಕ್ಕೆ ಹಿಂದಿರುಗಿದಾಗ ಮುಸ್ತಫಾ ಅವರ ಹಾದಿಯು ಮತ್ತೊಂದು ಮಹತ್ವದ ತಿರುವು ಪಡೆಯಿತು. ಅವರ MBA ವ್ಯಾಸಂಗದ ವೇಳೆ 2005 ರಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ತಯಾರಿಸುವ ಸ್ಟಾರ್ಟ್ಅಪ್ ಆರಂಭಿಸಲು ನಿರ್ಧರಿಸಿದರು. ಈ ವೇಳೆ ಭಾರತದಲ್ಲಿ "ರೆಡಿ-ಟು- ಕುಕ್ " ಐಟಂಗಳ ಸಾಮರ್ಥ್ಯವನ್ನು ಅರಿತುಕೊಂಡ ಯೋಜನೆಯನ್ನು ಕಾರ್ಯರೂಪಗೊಳಿಸಿದರು.

50,000 ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ, ಬೆಂಗಳೂರಿನ ತಿಪ್ಪಸಂದ್ರದಲ್ಲಿ 50 ಚದರ ಅಡಿಯ ಸಣ್ಣ ಅಡುಗೆಮನೆ ಮೂಲಕ ಅವರು ಐಡಿ ಫ್ರೆಶ್ ಫುಡ್‌ನ ರೆಡಿ-ಟು-ಈಟ್ ಪ್ಯಾಕೇಜ್ಡ್ ಆಹಾರವನ್ನು ತಯಾರಿಸಲು ಆರಂಭಿಸಿದರು. ಯಾವುದೇ ರಾಸಾಯನಿಕಗಳು ಮತ್ತು ಪ್ರಿಸರ್ವೇಟಿವ್ ಗಳಿಂದ ಮುಕ್ತವಾದ "ಅಡುಗೆ ಮಾಡಲು ಸಿದ್ಧ" ಇಡ್ಲಿ ಹಿಟ್ಟನ್ನು ಒದಗಿಸುವ ಗುರಿಯನ್ನು ಹೊಂದಿದ್ದರು. ಮೊದಲು ದಿನಕ್ಕೆ ನೂರು ಪ್ಯಾಕೆಟ್ ಮಾರಾಟವಾಗುವ ನಿರೀಕ್ಷೆಯನ್ನು ಮುಸ್ತಫಾ ಹೊಂದಿದ್ದರು.

ಆದ್ರೆ ಅದು ಅಷ್ಟು ಸುಲಭವಾಗಿರಲಿಲ್ಲ. ಸತತ ಒಂಭತ್ತು ತಿಂಗಳ ನಂತರ ದಿನಕ್ಕೆ ನೂರು ಪ್ಯಾಕೆಟ್ ಮಾರಾಟವಾಗಲು ಆರಂಭವಾಯಿತು. ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದ್ದ ಮುಸ್ತಫಾಗೆ ಯಾರ ಸಹಾಯ ಸಿಗಲಿಲ್ಲ. ಯಾರೂ ಈ ಪ್ಲಾನ್ ಗೆ ಹಣ ಹೂಡಲು ಮುಂದೆ ಬರಲಿಲ್ಲ. ಆಗ ಕೇರಳದಲ್ಲಿದ್ದ ತಮ್ಮ ಜಮೀನು ಮಾರಾಟ ಮಾಡಿ ಅದರ ಹಣದಿಂದ 550 ಚದರ ಅಡಿ ಜಾಗದಲ್ಲಿ ಉತ್ಪಾದನೆ ಆರಂಭಿಸಿದರು. ಇಂದು ಇವರ

ಇಂದು, iD ಉತ್ಪನ್ನಗಳ ಮಾರಾಟವು 15000kg ಮಿಶ್ರಣಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. iD ತಾಜಾ ಆಹಾರದ ವಹಿವಾಟು 2015-2016ರಲ್ಲಿ 100 ಕೋಟಿಗಳಷ್ಟಿತ್ತು ಮತ್ತು 2017-2019ರಲ್ಲಿ 182 ಕೋಟಿಗಳಿಗೆ ಏರಿಕೆಯಾಗಿದೆ. ವಹಿವಾಟು ರೂ. 2019-2022 ರಲ್ಲಿ 350-400 ಕೋಟಿ ರೂ. ಆಗಿತ್ತು. ಪ್ರಸ್ತುತ ಇವರು ಕಟ್ಟಿದ ಸಂಸ್ಥೆಯು 2000 ಕೋಟಿ ರೂಪಾಯಿ ಮೌಲ್ಯ ಕಂಪನಿಯಾಗಿ ಬೆಳೆದುನಿಂತಿದೆ.

ಮುಸ್ತಫಾ ಅವರ ಕಥೆಯು ಕಠಿಣ ಪರಿಶ್ರಮ, ಕಾರ್ಯತಂತ್ರದ ಚಿಂತನೆ ಮತ್ತು ಗುಣಮಟ್ಟದೆಡೆಗೆಬದ್ಧತೆ ಇದ್ದರೆ ವಿನಮ್ರ ಆರಂಭವು ಹೇಗೆ ಗಮನಾರ್ಹ ಯಶಸ್ಸಾಗಿ ಪರಿವರ್ತನೆಯಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+