ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ವು ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ ನವೀಕರಣವನ್ನು ಹಂತ ಹಂತವಾಗಿ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಮುಂದಿನ ಎರಡು ತಿಂಗಳೊಳಗೆ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಹೇಳಿರುವ ಮಾಹಿತಿ ಪ್ರಕಾರ ಏಳು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು ನವೀಕರಿಸಬೇಕಿದೆ. ಐದು ವರ್ಷ ವಯಸ್ಸಿನ ನಂತರ ಬಯೋಮೆಟ್ರಿಕ್ಸ್ ನವೀಕರಿಸುವುದು ಕಡ್ಡಾಯವಾಗಿದೆ.

ಪೋಷಕರ ಅನುಮತಿಯೊಂದಿಗೆ ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ಸ್ ನವೀಕರಿಸಲು ಯುಐಡಿಎಐ ಯೋಜನೆಯೊಂದನ್ನು ರೂಪಿಸುತ್ತಿದೆ. ಪ್ರಸ್ತುತ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ. ಸುಮಾರು 45-60 ದಿನಗಳಲ್ಲಿ ಇದು ಸಿದ್ಧವಾಗಲಿದೆ ಎಂದು ಕುಮಾರ್ ಹೇಳಿದ್ದಾರೆ.
ಯುಐಡಿಎಐ ಮಾರ್ಗಸೂಚಿಗಳ ಪ್ರಕಾರ, ಮಕ್ಕಳ ನಿಖರ ಮತ್ತು ವಿಶ್ವಾಸಾರ್ಹ ಬಯೋಮೆಟ್ರಿಕ್ ದತ್ತಾಂಶವನ್ನು ನಿರ್ವಹಿಸಲು ಕಡ್ಡಾಯ ಬಯೋಮೆಟ್ರಿಕ್ ನವೀಕರಣ ಅತ್ಯಗತ್ಯ. ಒಂದು ವೇಳೆ ಮಗು ಏಳು ವರ್ಷ ತುಂಬಿದ ನಂತರವೂ ನವೀಕರಣ ಮಾಡದಿದ್ದರೆ, ನಿಯಮಗಳ ಪ್ರಕಾರ ಅವರ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಸಾಧ್ಯತೆಯಿದೆ.
ಐದರಿಂದ ಏಳು ವರ್ಷದೊಳಗಿನ ಮಕ್ಕಳಿಗೆ ಈ ನವೀಕರಣ ಉಚಿತವಾಗಿರುತ್ತದೆ. ಆದರೆ, ಏಳು ವರ್ಷದ ನಂತರ ನವೀಕರಣಕ್ಕಾಗಿ 100 ರೂಪಾಯಿ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿದು ಬಂದಿದೆ.
5 ವರ್ಷಗಳ ಮಕ್ಕಳಿಗೆ ಬಯೋಮೆಟ್ರಿಕ್ ಕಡ್ಡಾಯ
ಯುಐಡಿಎಐ ಅಧಿಸೂಚನೆಯ ಪ್ರಕಾರ ಮಕ್ಕಳು ಐದು ವರ್ಷ ಪೂರ್ಣಗೊಳಿಸಿದ ನಂತರ ಆಧಾರ್‌ಗೆ ಬಯೋಮೆಟ್ರಿಕ್ ಮಾಹಿತಿಯನ್ನು ಸೇರಿಸುವುದು ಕಡ್ಡಾಯವನ್ನು ಮಾಡಲಾಗಿದೆ. ನೀವು ನಿಮ್ಮ ಮಗುವಿಗೆ ಏಳು ವರ್ಷದೊಳಗೆ ಅದನ್ನು ನವೀಕರಿಸದಿದ್ದರೆ, ಆಧಾರ್ ಸ್ಥಗಿತಗೊಳುವುದು ಎಂದು ಹೇಳಿದೆ. ಆಧಾರ್‌ನ ವಿಶ್ವಾಸಾರ್ಹತೆಯನ್ನು ಮತ್ತು ವಚನೆಯನ್ನು ತಡೆಯಲು ಈ ಪ್ರಕ್ರಿಯೆ ಅವಶ್ಯಕ.
ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆಗಳು, ವಿದ್ಯಾರ್ಥಿವೇತನಗಳು, ಹಾಗೂ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಗಳಂತಹ ಸೌಲಭ್ಯಗಳನ್ನು ಪಡೆಯಲು ನವೀಕರಿಸಿದ ಬಯೋಮೆಟ್ರಿಕ್ಸ್‌ನೊಂದಿಗೆ ಆಧಾರ್ ಕಾರ್ಡ್ ಮುಖ್ಯವಾಗಿದೆ.
ಮಕ್ಕಳು 15 ವರ್ಷ ತುಂಬಿದ ನಂತರ, ಇದೇ ಪ್ರಕ್ರಿಯೆಯನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮುಂದುವರೆಸಲು ಯೋಜಿಸಲಾಗಿದೆ ಎಂದು ಭುವನೇಶ್ ಕುಮಾರ್ ತಿಳಿಸಿದ್ದಾರೆ. ಸದ್ಯಕ್ಕೆ, ನವಜಾತ ಶಿಶುಗಳು ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ಸ್ ಪಡೆಯದೇ ಆಧಾರ್ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಅವರು, "ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ತಲುಪಿಸಲು ಆಧಾರ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಕ್ಕಳು ಸಕಾಲದಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ. ಹೀಗಾಗಿ, ಶಾಲೆಗಳ ಮೂಲಕ ಸಾಧ್ಯವಾದಷ್ಟು ಮಕ್ಕಳನ್ನು ಅನುಕೂಲಕರವಾಗಿ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ" ಎಂದಿದ್ದಾರೆ.
ಮುಂಬರುವ ಯೋಜನೆಯ ಭಾಗವಾಗಿ, ಯುಐಡಿಎಐ ಪ್ರತಿ ಜಿಲ್ಲೆಗೆ ಬಯೋಮೆಟ್ರಿಕ್ ಯಂತ್ರಗಳನ್ನು ಕಳುಹಿಸಲಿದೆ. ನಂತರ ಆ ಯಂತ್ರಗಳನ್ನು ನವೀಕರಣ ಕಾರ್ಯಕ್ಕಾಗಿ ಶಾಲೆಯಿಂದ ಶಾಲೆಗೆ ಕಳುಹಿಸಲಾಗುತ್ತದೆ.
ನೀವು ಕಡ್ಡಾಯವಾಗಿ ನಿಮ್ಮ ಮಕ್ಕಕ ಆಧಾರ್ ಕಾರ್ಡ್ ಬಯೋಮೆಟ್ರಿಕ್‌ನ್ನು ಕಡ್ಡಾಯವಾಗಿ ಅಪಡೇಟ್ಸ್ ಮಾಡಿ.


Click it and Unblock the Notifications