ಸಿಹಿಸುದ್ದಿ...! ಸಾಮಾನ್ಯವಾಗಿ ನೀವು ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕಾದರೆ ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.ಆದರೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಮಗೆ ಇದೀಗ ಮತ್ತೋಂದು ಅವಕಾಶವನನ್ನು ನೀಡಲಾಗುತ್ತದೆ.ಇದಕ್ಕಾಗಿ ಯುಐಡಿಎಐ ಜೂನ್ 14ರವರೆಗೆ ಉಚಿತ ಅಪ್‌ಡೇಟ್‌ಗೆ ಅವಕಾಶವನ್ನು ನೀಡಲಾಗಿತ್ತು.ಆದರೆ ಗಡುವನ್ನು ಈಗ ಮತ್ತೆ ಒಂದು ವರ್ಷದ ನಂತರ ಮತ್ತೆ ವಿಸ್ತರಣೆ ಮಾಡಲಾಗಿದೆ.
ಹೌದು,ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಸೇವೆಯನ್ನು ಮುಂದೂಡಿಕೆ ಮಾಡಿದ್ದು,ಜೂನ್ 14, 2026ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯೊಳಗೆ, ನೀವು ನಿಮ್ಮ ಆಧಾರ್ ಕಾರ್ಡ್‌ನ (ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ) ಉಚಿತವಾಗಿ ಆನ್‌ಲೈನ್‌ನಲ್ಲಿ ಸರಿಪಡಿಸಿಕೊಳ್ಳಿ. ಈ ಸೇವೆಯನ್ನು ನೀವು ಅಧೀಕೃತ ವೆಬ್ ಸೈಟ್ ಆದ myAadhaar ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು.

ಆಧಾರ್ ಕಾರ್ಡ್ ಯಾವುದೇ ಪ್ರಮುಖ ಸರ್ಕಾರಿ ಕೆಲಸಗಳು, ಬ್ಯಾಂಕ್ ಕೆಲಸಗಳಿಗೆ ಒಂದು ಪ್ರಮುಖ ದಾಖಲೆಯಾಗಿದೆ. ರೈಲು ಟಿಕೆಟ್ ಖರೀದಿಸಲು ಅಥವಾ ಸರ್ಕಾರದ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಅನ್ನು 10 ವರ್ಷಗಳಿಂದ ಅಪ್‌ಡೇಟ್ ಮಾಡದಿದ್ದರೆ, ಆದಷ್ಟು ಬೇಗ ಅದನ್ನು ಅಪ್‌ಡೇಟ್ ಮಾಡಬೇಕೆಂದು UIDAI ಹೇಳಿದೆ.
ಆಧಾರ್ ಕಾರ್ಡ್ ಅನ್ನು ಉಚಿತ ಅಪ್‌ಡೇಟ್ ಅವಧಿ ಮುಗಿದ ಬಳಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ UIDAI (ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಉಚಿತ ಅವಧಿಯನ್ನು ಜೂನ್ 14, 2025 ರಿಂದ ಜೂನ್ 14, 2026ರವರೆಗೆ ವಿಸ್ತರಿಸಿದೆ.
ಜೂನ್ 14ರ ನಂತರ 2026 ಆಧಾರ್ ನವೀಕರಣಕ್ಕೆ ಎಷ್ಟು ಪಾವತಿ ಮಾಡಲಾಗುತ್ತದೆ..?
ಆಧಾರ್ ಕಾರ್ಡ್ ಅನ್ನು ಉಚಿತ ಅಪ್‌ಡೇಟ್ ಅವಧಿ ಮುಗಿದ ಬಳಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಪ್ರಸ್ತುತ UIDAI (ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಉಚಿತವಾಗಿ ಜನರು ಜೂನ್ 14,2026 ರವರೆಗೆ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಬಹುದು.ಇದು ಆದ ನಂತರ ನಂತರ ಪ್ರತಿ ನವೀಕರಣಕ್ಕೆ 50 ರೂ.ಗಳನ್ನು ಪಾವತಿಸಬೇಕಾಗುತ್ತದೆ. ನೀವು ಆನ್ ಲೈನ್ ಮೂಲಕವು ಸಹ ಹಣವನ್ನು ಪಾವತಿ ಮಾಡಬಹುದು.
ಆಧಾರ್ ಮರುಮೌಲ್ಯಮಾಪನ ಆಧಾರ್ ಕಾರ್ಡ್‌ನಲ್ಲಿ ವಿವರಗಳನ್ನು ನವೀಕರಿಸುವುದರ ಜೊತೆಗೆ, ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ 10 ವರ್ಷಗಳಿಗಿಂತ ಹಳೆಯದಾಗಿದ್ದರೆ ಅದನ್ನು ಬಯೋಮೆಟ್ರಿಕ್ ಅಪ್ಡೇಟ್ ಮಾಡುವುದು ಮುಖ್ಯವಾಗುತ್ತದೆ.
ಆಧಾರ್ ಅನ್ನು ಆನ್‌ಲೈನ್‌ನಲ್ಲಿ ಉಚಿತ ಅಪ್‌ಡೇಟ್ ಮಾಡುವ ಹಂತಗಳು
- ಆಧಾರ್ ಸಂಖ್ಯೆ ಮತ್ತು OTP ಬಳಸಿಕೊಂಡು ಆಧಾರ್‌ನ ಅಧಿಕೃತ ವೆಬ್‌ಸೈಟ್ ಅಂದರೆ myaadhaar.uidai.gov.in ಗೆ ಭೇಟಿ ನೀಡಿ.
- ನೀವು ಲಾಗಿನ್ ಆದ ನಂತರ ಗುರುತಿನ ಪುರಾವೆ (PoI) ಮತ್ತು ವಿಳಾಸ ಪುರಾವೆ (PoA) ಗಳ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- 14-ಅಂಕಿಯ ನವೀಕರಣ ವಿನಂತಿ ಸಂಖ್ಯೆ (URN) ಗಮನಿಸಿ ನಿಮ್ಮ ವಿನಂತಿಯನ್ನು ಸಲ್ಲಿಸಿ.
- ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಈ URN ಅನ್ನು ಬಳಸಬಹುದು.
ಆಧಾರ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ?
- ನಿಮ್ಮ ಆಧಾರ್ ವಿಳಾಸವನ್ನು ನವೀಕರಿಸಲು, ಆನ್‌ಲೈನ್‌ನಲ್ಲಿ ಆಧಾರ್ ಸ್ವಯಂ ಸೇವಾ ನವೀಕರಣ ಪೋರ್ಟಲ್ ಗೆ ಭೇಟಿ ನೀಡಬೇಕು.
- ಇದು ಆದ ನಂತರ ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ' ಎಂದು ಹೇಳುವ ಆಯ್ಕೆಯನ್ನು ಆರಿಸಿ.
- ನಿಮ್ಮ ಹೊಸ ವಿಳಾಸ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಈ ಹಂತದ ನಂತರ, ನಿಮ್ಮ ಹೊಸ ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುವ ದಾಖಲೆಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
- ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ನವೀಕರಣ ವಿನಂತಿಯನ್ನು ಸಲ್ಲಿಸಲಾಗುತ್ತದೆ ಮತ್ತು ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ನಿಮಗೆ ನವೀಕರಣ ವಿನಂತಿ ಸಂಖ್ಯೆ (URN) ಅನ್ನು ಒದಗಿಸಲಾಗುತ್ತದೆ.
ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು
ಭಾರತ ಸರ್ಕಾರ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೇತೃತ್ವದ ಆಧಾರ್ ವ್ಯವಸ್ಥೆಯು ಆಧಾರ್ ಕಾರ್ಡ್ ವ್ಯಕ್ತಿಯ ಗುರುತಿನ ಪ್ರಮುಖ ದಾಖಲೆಯಾಗಿದೆ. ಈ ಗುರಿನ ಚೀಟಿ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಹೊಂದಿದೆ. ಇದು ವ್ಯಕ್ತಿಗಳಿಗೆ ಗುರುತು ಮತ್ತು ವಿಳಾಸದ ಪುರಾವೆಯಾಗಿ ನೀಡುತ್ತದೆ. ಬ್ಯಾಂಕಿಂಗ್ ಮತ್ತು ಮೊಬೈಲ್ ಫೋನ್ ಸೇವೆಗಳು ಸೇರಿದಂತೆ ಸರ್ಕಾರಿ ಮತ್ತು ಸರ್ಕಾರೇತರ ಎರಡೂ ಸೇವೆಗಳನ್ನು ಪ್ರವೇಶಿಸಲು ಈ ಗುರುತಿಸಲು ಇದು ಸಹಾಯಕವಾಗುತ್ತದೆ. ನೀವು ಜೀವಂತವಾಗಿರುವವರೆಗೂ ಇದು ಅಸ್ತಿತ್ವದಲ್ಲಿ ಇರುತ್ತದೆ. ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಒಮ್ಮೆ ಮಾತ್ರ ಮಾಡಲು ಸಾದ್ಯ. ಯಾವುದೇ ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ಭಾರತದ ಸರ್ಕಾರ ಎಲ್ಲರಿಗೂ ಆಧಾರ್ ಕಾರ್ಡ್‌ಯನ್ನು ನೀಡಯತ್ತದೆ. ಇದರಿಂದ ಹಲವಾರು ಸೇವೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಆಧಾರ್ ಕಾರ್ಡ್ ಪಡೆಯುವ ಯೋಜನೆ ಸಂಪೂರ್ಣವಾಗಿ ಉಚಿತವಾಗಿ ಇದೆ.


Click it and Unblock the Notifications