ವಿಮಾನ ನಿಲ್ದಾಣ ಪ್ರಾಧಿಕಾರ ಕೆಲಸ ಮಾಡಬೇಕೆಂಬ ಕನಸು ಇದ್ಯಾ..? ಕೈತುಂಬಾ ಸಂಬಳ ಸಂಪಾದಿಸುವ ಆಸೆ ಇದೆಯೇ..? ನಿಮಗೆ ಉದ್ಯೋಗ ಸಿಗುತ್ತಿಲ್ಲವೇ? ಇಲ್ಲಿದೆ ನಿಮಗೆ ಒಳ್ಳೆಯ ಸುವರ್ಣಾವಕಾಶ. ಹೌದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಾಗಿದ್ರೆ, ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ? ಅರ್ಜಿ ಸಲ್ಲಿಕೆ ಹೇಗೆ? ವಯೋಮಿತಿ ಎಷ್ಟಿರಬೇಕು? ಶೈಕ್ಷಣಿಕ ಅರ್ಹತೆಗಳು ಏನು? ವೇತನ ಎಷ್ಟು? ಎಂಬ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಏರ್ ಟ್ರಾಫಿಕ್ ಕಂಟ್ರೋಲರ್ (ಜೂನಿಯರ್ ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಏಪ್ರಿಲ್ 25 ರಂದು ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಅಭಿಯಾನವು ಮೇ 25 ರವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ಅಭಿಯಾನದ ಮೂಲಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅಧಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಈ ಅಭಿಯಾನದಡಿಯಲ್ಲಿ ಒಟ್ಟು 309 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ 309 ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳಲ್ಲಿ ಮೀಸಲಾತಿ ರಹಿತ ವರ್ಗಕ್ಕೆ 125, ಇಡಬ್ಲ್ಯೂಎಸ್ ಹುದ್ದೆಗೆ 30, 72 ಒಬಿಸಿ (ಎನ್‌ಸಿಎಲ್) ಹುದ್ದೆಗೆ, ಎಸ್‌ಸಿ 55 ಮತ್ತು ಎಸ್‌ಟಿ ವರ್ಗಕ್ಕೆ 27 ಮೀಸಲಾಗಿವೆ.

ಶೈಕ್ಷಣಿಕ ಅರ್ಹತೆ ಏನಿರಬೇಕು..?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಖಾಸಗಿ ಕಾಲೇಜು ಸಂಸ್ಥೆಯಿಂದ ಬಿ.ಎಸ್ಸಿ (ಭೌತಶಾಸ್ತ್ರ ಮತ್ತು ಗಣಿತದೊಂದಿಗೆ) ಅಥವಾ ಬಿ.ಟೆಕ್/ಬಿಇ ಪದವಿ ಪಡೆದ ಅಭ್ಯರ್ಥಿಗಳು ಅಷ್ಟೇ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ವಯಸ್ಸಿನ ಮಿತಿ (Age Limit):
ಗರಿಷ್ಠ ವಯಸ್ಸು: 27 ವರ್ಷ ಆಗಿರುತ್ತದೆ. ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆಯನ್ನು ಸರ್ಕಾರದ ನಿಯಮಾನುಸಾರವಾಗಿ ಮಾಡಲಾಗಿದೆ.
ಅರ್ಜಿ ಶುಲ್ಕ (Application Fee):
AAI ನೇಮಕಾತಿ ಡ್ರೈವ್ಗೆ ಅರ್ಜಿ ಸಲ್ಲಿಸಲು ಕೆಲವು ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿ ಕಡ್ಡಾಯವಾಗಿದೆ.
ವರ್ಗ ಶುಲ್ಕ
ಸಾಮಾನ್ಯ (General), ಓಬಿಸಿ (OBC), ಮತ್ತು ಇಡಬ್ಲ್ಯೂಎಸ್ (EWS): 1000/-
ಎಸ್‌ಸಿ (SC), ಎಸ್‌ಟಿ (ST), ಪಿಡಬ್ಲ್ಯೂಬಿಡಿ (PwBD), ಮಹಿಳಾ ಅಭ್ಯರ್ಥಿಗಳ: ಶುಲ್ಕ ಇಲ್ಲ
AAI ಅಪ್ರೆಂಟಿಸ್‌ಶಿಪ್ ಪೂರೈಸಿದವರು: ಶುಲ್ಕ ಇಲ್ಲ
ಪಾವತಿ ವಿಧಾನ:
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಅಥವಾ ನೆಟ್‌ಬ್ಯಾಂಕಿಂಗ್ ಬಳಸಿಕೊಂಡು ನೀವು ಹಣವನ್ನು ಪಾವತಿ ಮಾಡಬಹುದು.
AAI ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ:
- ನೀವು ಮೊದಲು ಅಧಿಕೃತ ವೆಬ್‌ಸೈಟ್ ಆದ https://www.aai.aero ಭೇಟಿ ನೀಡಿ.
- ನಂತರ ನೀವು Career/Vacancies ವಿಭಾಗವನ್ನು ತೆರೆದು, ಹೊಸ ನೇಮಕಾತಿಯ ಲಿಂಕ್‌ನ್ನು ಕ್ಲಿಕ್ ಮಾಡಿ.("Recruitment of Junior Executive (ATC) 2025" ಎಂದು ತೋರಬಹುದು)
- "Apply Online" ಅಥವಾ "Registration" ಲಿಂಕ್ ಕ್ಲಿಕ್ ಮಾಡಿ. ಹೊಸ ಅಭ್ಯರ್ಥಿಗಳು ಮೊದಲು ನೋಂದಣಿ ಮಾಡಬೇಕು (Name, Email, Mobile Number ಇತ್ಯಾದಿ)
- ಲಾಗಿನ್ ಮಾಡಿ ಮತ್ತು ಅರ್ಜಿ ಫಾರ್ಮ್ ಭರ್ತಿ ಮಾಡಿ:
- ವೈಯಕ್ತಿಕ ಮಾಹಿತಿ (ಹೆಸರು, DOB, ವಿಳಾಸ...)
- ವಿದ್ಯಾರ್ಹತೆ ವಿವರಗಳು
- ವರ್ಗದ ವಿವರ (General/OBC/SC/ST/PwBD/EWS)
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ: ಪಾಸ್‌ಪೋರ್ಟ್ ಸೈಸ್ ಫೋಟೋ,ಸಹಿ (Signature),ಅಂಕಪಟ್ಟಿ, ವರ್ಗ ಪ್ರಮಾಣಪತ್ರ (ಹೊಂದಿದರೆ) ಅಪ್ ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿ ಮಾಡಿ: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿ. ಅಂತಿಮವಾಗಿ 'Submit' ಬಟನ್ ಕ್ಲಿಕ್ ಮಾಡಿ.
- Confirmation Page/Receipt ಅನ್ನು ಡೌನ್‌ಲೋಡ್ ಮಾಡಿ ಮತ್ತು ಫಾರ್ಮ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.


Click it and Unblock the Notifications