ಕೊರೊನಾದ ಕಾರಣಕ್ಕೆ ಭಾರತದ ಆರ್ಥಿಕತೆಗೇ ಹೊಡೆತ ಬಿದ್ದಿರುವುದು ಹೌದು. ಅದರಲ್ಲೂ ಎನ್ ಬಿಎಫ್ ಸಿ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ), ಹೌಸಿಂಗ್ ಫೈನಾನ್ಸ್ ಕಂಪೆನಿ (ಎಚ್ ಎಫ್ ಸಿ) ಹಾಗೂ ಮೈಕ್ರೋ ಫೈನಾನ್ಸ್ ಇನ್ ಸ್ಟಿಟ್ಯೂಷನ್ಸ್ (ಎಂಎಫ್ ಐ) ಡೆಟ್ ಮಾರ್ಕೆಟ್ ನಲ್ಲಿ ಹಣ ಸಂಗ್ರಹಿಸುವುದು ಕಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ ರುಪಾಯಿಯ ವಿಶೇಷ ನಗದು ಯೋಜನೆಯನ್ನು ಬುಧವಾರ ಘೋಷಣೆ ಮಾಡಲಾಯಿತು. ಇನ್ನು ಈ ಪ್ಯಾಕೇಜ್ ಅಡಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಒಟ್ಟಾರೆ 20 ಲಕ್ಷ ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದರಲ್ಲಿ ಈ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಪ್ರಮುಖಾಂಶಗಳು ಹೀಗಿವೆ:
* ಎನ್ ಬಿಎಫ್ ಸಿ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ), ಹೌಸಿಂಗ್ ಫೈನಾನ್ಸ್ ಕಂಪೆನಿ (ಎಚ್ ಎಫ್ ಸಿ) ಹಾಗೂ ಮೈಕ್ರೋ ಫೈನಾನ್ಸ್ ಇನ್ ಸ್ಟಿಟ್ಯೂಷನ್ಸ್ ಗಳ ಹೂಡಿಕೆಗೆ ಯೋಗ್ಯವಾದ ಡೆಟ್ ಪೇಪರ್ ಗಳಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
* ಜತೆಗೆ ಆರ್ ಬಿಐ/ಸರ್ಕಾರದಿಂದ ನಗದು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
* ಸೆಕ್ಯೂರಿಟೀಸ್ ಗಳಿಗೆ ಭಾರತ ಸರ್ಕಾರ ಪೂರ್ತಿಯಾಗಿ ಗ್ಯಾರಂಟಿ ಆಗಿರುತ್ತದೆ.
* ಎನ್ ಬಿಎಫ್ ಸಿ, ಎಚ್ ಎಫ್ ಸಿ ಹಾಗೂ ಎಂಎಫ್ ಐ ಮತ್ತು ಮ್ಯೂಚ್ಯುವಲ್ ಫಂಡ್ ಗಳಿಗೆ ನಗದು ಬೆಂಬಲ ನೀಡಲಿದ್ದು, ಮಾರ್ಕೆಟ್ ನಲ್ಲಿ ವಿಶ್ವಾಸ ಮೂಡಿಸುತ್ತದೆ.
* ಕಡಿಮೆ ಕ್ರೆಡಿಟ್ ರೇಟಿಂಗ್ ಇರುವ ಎನ್ ಬಿಎಫ್ ಸಿ, ಎಚ್ ಎಫ್ ಸಿ ಹಾಗೂ ಎಂಎಫ್ ಐ ಗಳು ಎಂಎಸ್ ಎಂಇಗಳಿಗೆ ಹಾಗೂ ವೈಯಕ್ತಿಕವಾಗಿ ಅಗತ್ಯ ಇರುವವರಿಗೆ ಸಾಲ ನೀಡಲು ನಗದು ಅಗತ್ಯವಿದೆ.
* ಅಂಥ ಸಂಸ್ಥೆಗಳಿಗಾಗಿ ಸದ್ಯಕ್ಕೆ ಇರುವ PCGS ಯೋಜನೆ ವಿಸ್ತರಣೆ ಮಾಡಲಾಗುತ್ತದೆ. ಆ ಮೂಲಕ ಬಾಂಡ್ಸ್/ಸಿಪಿಗಳನ್ನು (ಬ್ಯಾಲೆನ್ಸ್ ಶೀಟ್ ನಲ್ಲಿ ಜವಾಬ್ದಾರಿಯ ಕಡೆಗೆ) ಪ್ರಾಥಮಿಕವಾಗಿ ವಿತರಣೆ ಮಾಡಬಹುದು.
* ಮೊದಲ 20 ಪರ್ಸೆಂಟ್ ನಷ್ಟವನ್ನು ಗ್ಯಾರಂಟರ್ ಅಂದರೆ ಭಾರತ ಸರ್ಕಾರ ಭರಿಸಲಿದೆ.
* AA ಪೇಪರ್ ಮತ್ತು ಅದಕ್ಕಿಂತ ಕೆಳಗಿನದು ಹಾಗೂ ಯಾವುದೇ ರೇಟಿಂಗ್ ಇಲ್ಲದ್ದು ಕೂಡ ಹೂಡಿಕೆ ಮಾಡಲು ಅರ್ಹತೆ ಹೊಂದಿವೆ (ವಿಶೇಷವಾಗಿ ಮೈಕ್ರೋ ಫೈನಾನ್ಸ್ ಇನ್ ಸ್ಟಿಟ್ಯೂಷನ್ ಗಳಿಗೆ ಅನ್ವಯಿಸುತ್ತದೆ).
* ಈ ಯೋಜನೆ ಫಲಿತಾಂಶದಿಂದಾಗಿ 45 ಸಾವಿರ ಕೋಟಿ ರುಪಾಯಿ ನಗದಾಗುತ್ತದೆ.


Click it and Unblock the Notifications