ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಗೌತಮ್ ಅದಾನಿ ಹೋಲ್ಸಿಮ್‌ನೊಂದಿಗೆ ಮೂಲ ಸೌಕರ್ಯ, ಸಿಮೆಂಟ್ ವಲಯದ ಅತಿದೊಡ್ಡ ಡೀಲ್ ಕುದುರಿಸಿದ ಬಳಿಕ ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್ ಷೇರುಗಳಿಗೆ ಸೋಮವಾರ ಭಾರೀ ಡಿಮ್ಯಾಂಡ್ ಕಂಡು ಬಂದಿದೆ.

ಸ್ವಿಸ್ ಮೂಲದ ಹೋಲ್ಸಿಮ್ ಸಂಸ್ಥೆಯ ಭಾರತೀಯ ಅಂಗ ಸಂಸ್ಥೆಗಳಾದ ಅಂಬುಜಾ ಹಾಗೂ ಎಸಿಸಿ ಸಂಸ್ಥೆಗಳನ್ನು ಭಾರಿ ಮೊತ್ತಕ್ಕೆ ಅದಾನಿ ಸಮೂಹ ಖರೀದಿಸಿದೆ. ಸರಿ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ಡೀಲ್ ಇದಾಗಿದೆ. ಈ ಮೂಲಕ ವಾರ್ಷಿಕವಾಗಿ ಸುಮಾರು 66 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ದೇಶದ ಎರಡನೇ ಅತಿ ದೊಡ್ಡ ಸಿಮೆಂಟ್ ಸಂಸ್ಥೆ ಎಂದು ಅದಾನಿ ಗ್ರೂಪ್ ಎನಿಸಿಕೊಳ್ಳಲಿದೆ.

ಈ ಬೆನ್ನಲ್ಲೇ ಎಸಿಸಿ ಷೇರುಗಳು ಬಿಎಸ್‌ಇಯಲ್ಲಿ ಶೇ.7.79 ರಷ್ಟು ಏರಿಕೆ ಕಂಡು 2,288.15 ರೂ.ಗೆ ತಲುಪಿದೆ. ಅಂಬುಜಾ ಸಿಮೆಂಟ್ಸ್ ಷೇರುಗಳು ಶೇ.4.13ರಷ್ಟು ಏರಿಕೆ ಕಂಡು 373.65 ರೂಪಾಯಿಗೆ ತಲುಪಿದೆ.

ಹೋಲ್ಸಿಮ್ ಡೀಲ್: ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್

ಜಾಗತಿಕ ಸರಾಸರಿ ತಲಾ 525 ಕೆಜಿಗೆ ಹೋಲಿಸಿದರೆ, ಭಾರತದ ಸಿಮೆಂಟ್ ಬಳಕೆಯು ತಲಾ 242 ಕೆಜಿಯಲ್ಲಿದೆ, ಭಾರತದಲ್ಲಿ ಸಿಮೆಂಟ್ ಕ್ಷೇತ್ರದ ಬೆಳವಣಿಗೆಗೆ ಗಮನಾರ್ಹ ಸಾಮರ್ಥ್ಯವಿದೆ ಎಂದು ಉಭಯ ಸಂಸ್ಥೆಗಳು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಹೋಲ್ಸಿಮ್‌ನ ಪ್ರಮುಖ ಘಟಕ ಅಂಬುಜಾ ಸಿಮೆಂಟ್ ಆಗಿದೆ. ಹೋಲ್ಸಿಮ್‌ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ ಶೇಕಡ 63.19 ಮತ್ತು ಎಸಿಸಿ ಲಿಮಿಟೆಡ್‌ನಲ್ಲಿ ಶೇಕಡ 54.53ರಷ್ಟು ಪಾಲನ್ನು ಹೊಂದಿದೆ. ಇನ್ನು ಈ ಎರಡು ಕಂಪನಿಗಳು ಒಟ್ಟಾಗಿ ವಾರ್ಷಿಕ 66 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಶುಕ್ರವಾರ ನಷ್ಟ ಕಂಡಿದ್ದ ಎಸಿಸಿ, ಅಂಬುಜಾ ಸಿಮೆಂಟ್ಸ್

71,244 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಅಂಬುಜಾ ಸಿಮೆಂಟ್ಸ್ ಷೇರುಗಳು ಶುಕ್ರವಾರ ಶೇಕಡ 3.79ರಷ್ಟು ಕುಸಿದು 358.80 ರೂಪಾಯಿಗೆ ತಲುಪಿದೆ. ಎಸಿಸಿ ಶೇಕಡ 3.02ರಷ್ಟು ನಷ್ಟ ಕಂಡು, ರೂ 2,113.70ರಲ್ಲಿ ವಹಿವಾಟು ನಡೆಸಿದೆ. ಆದರೆ ಸೋಮವಾರದ ವಹಿವಾಟಿನಲ್ಲಿ ಲಾಭ ಗಳಿಸಿದೆ. ಅಷ್ಟು ಮಾತ್ರವಲ್ಲದೆ ಅಂಬುಜಾ ಸಿಮೆಂಟ್ಸ್ ಹಾಗೂ ಎಸಿಸಿ ಷೇರಿಗೆ ಭಾರೀ ಬೇಡಿಕೆ ಕಂಡು ಬಂದಿದೆ.

ಹೋಲ್ಸಿಮ್ 2005 ರಲ್ಲಿ 800 ಮಿಲಿಯನ್ ಡಾಲರ್‌ಗೆ ಅಂಬುಜಾ ಸಿಮೆಂಟ್ ಅನ್ನು ಖರೀದಿಸಿತು. ಎಸಿಸಿ ಅನ್ನು 1999 ಮತ್ತು 2001 ರ ನಡುವೆ ಟಾಟಾ ಗುಂಪಿನಿಂದ ಪ್ರತಿ ಷೇರಿಗೆ ರೂ 370 ಕ್ಕೆ ಮೂರು ಭಾಗಗಳಲ್ಲಿ ಅಂಬುಜಾ ಖರೀದಿಸಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+