ಪ್ರಸಿದ್ಧ ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಆತನ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ ಒಟ್ಟಾಗಿ 45 ಮಂದಿಯನ್ನು ಮತ್ತು ಸಂಸ್ಥೆಗಳನ್ನು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸ್ಟಾಕ್ ಮಾರುಕಟ್ಟೆಯಿಂದ ಬ್ಯಾನ್ ಮಾಡಿದೆ. ಎರಡು ಸಂಸ್ಥೆಗಳಾದ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್ ಬಗ್ಗೆ ಯೂಟ್ಯೂಬ್‌ನಲ್ಲಿ ತಪ್ಪು ವಿಡಿಯೋ ಹಾಕುವ ಮೂಲಕ ಷೇರು ದರ ಮ್ಯಾನಿಪುಲೇಷನ್ ಮಾಡುತ್ತಿದೆ ಎಂಬ ಆರೋಪವಿದೆ.
ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್ ಸ್ಟಾಕ್‌ಗಳನ್ನು ಖರೀದಿ ಮಾಡುವಂತೆ, ಈ ಸಂಸ್ಥೆ ಲಾಭದಲ್ಲಿದೆ ಎಂಬಂತೆ ಸುಳ್ಳು ಮತ್ತು ತಪ್ಪಾದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಸೆಬಿ ಗಮನಕ್ಕೆ ಬಂದಿದ್ದು, ಕ್ರಮಕೈಗೊಳ್ಳಲಾಗಿದೆ. ಇದಾದ ಬೆನ್ನಲ್ಲೇ ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್‌ನ ಪ್ರೋಮೋಟರ್‌ಗಳಾದ ಅರ್ಷದ್ ವಾರ್ಸಿ ಮತ್ತು ಮಾರಿಯಾ ಗೊರೆಟ್ಟಿಯನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ.

ಸುಮಾರು 45 ಮಂದಿ/ಸಂಸ್ಥೆಗಳಿಗೆ ಸ್ಟಾಕ್ ಮಾರುಕಟ್ಟೆಯಿಂದ ಬ್ಯಾನ್ ಮಾಡುವುದು ಮಾತ್ರವಲ್ಲದೆ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪು ಮಾಹಿತಿ ನೀಡುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಬಳಿಕ ಗಳಿಸಿದ 54 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದೆ. ಸೆಬಿಯು ತನಿಖೆಯ ಬಳಿಕ ಎರಡು ಪ್ರತ್ಯೇಕ ಮಧ್ಯಂತಹ ಆರ್ಡರ್‌ಗಳನ್ನು ನೀಡಿದೆ. ಮಧ್ಯಂತಹ ಆದೇಶದ ಬಗ್ಗೆ ಅಧಿಕ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಮಧ್ಯಂತಹ ಆದೇಶದ ಏನು ಹೇಳುತ್ತದೆ?
ಮಧ್ಯಂತಹ ಆದೇಶದ ಪ್ರಕಾರ ಅರ್ಷದ್ ವಾರ್ಸಿ 29.43 ಲಕ್ಷ ರೂಪಾಯಿ ಲಾಭವನ್ನು ಪಡೆದಿದ್ದರೆ, ನಟ ಅರ್ಷದ್ ವಾರ್ಸಿ ಪತ್ನಿ ಮಾರಿಯಾ ಗೊರೆಟ್ಟಿ 37.56 ಲಕ್ಷ ಲಾಭವನ್ನು ಪಡೆದಿದ್ದಾರೆ. ಇನ್ನು ಇಕ್ಬಾಲ್ ಹುಸೈನ್ ವಾರ್ಸಿ 9.34 ಲಕ್ಷ ರೂಪಾಯಿ ಲಾಭವನ್ನು ಗಳಿಸಿದ್ದಾರೆ. ಈ ಮೂರು ವ್ಯಕ್ತಿಗಳು ಸೇರಿದಂತೆ ಇತರೆ ಸಂಸ್ಥೆ, ವ್ಯಕ್ತಿಗಳನ್ನು ಸ್ಟಾಕ್ ಮಾರುಕಟ್ಟೆಯಿಂದ ಬ್ಯಾನ್ ಮಾಡಲಾಗಿದೆ. ಸೆಬಿಗೆ ಸ್ಟಾಕ್ ಮ್ಯಾನಿಪುಲೇಷನ್ ಬಗ್ಗೆ ದೂರು ನೀಡಲಾಗಿದೆ.
ಯೂಟ್ಯೂಬರ್ ಮನೀಶ್ ಮಿಶ್ರಾ ಆದಾಯ 14.46 ಲಕ್ಷ ರೂಪಾಯಿ, ಪ್ರೋಟೋಟರ್ ಗೌರವ್ ಗುಪ್ತಾ ಗಳಿಕೆ 7.6 ಕೋಟಿ ರೂಪಾಯಿ ಆಗಿದೆ. ಶ್ರೇಯಾ ಗುಪ್ತಾ ಲಾಭ 2.18 ಕೋಟಿ ರೂಪಾಯಿ, ಪೂಜಾ ಅಗರ್ವಾಲ್ ಲಾಭ 1.47 ಕೋಟಿ ರೂಪಾಯಿ ಆಗಿದೆ. ವರುಣ್ ಮಿಡೀಯಾ ಲಾಭ 1.11 ಕೋಟಿ ರೂಪಾಯಿ ಆಗಿದೆ.


Click it and Unblock the Notifications