ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿಯೊಂದನ್ನು ಪ್ರಕಟಿಸಿದ ಬೆನ್ನಲ್ಲೇ ಅದಾನಿ ಗ್ರೂಪ್‌ನಲ್ಲಿ ಹಲವಾರು ಬೆಳವಣಿಗೆಗಳು ಕಂಡು ಬಂದಿದೆ. ಸಂಸ್ಥೆಯ ಸ್ಟಾಕ್‌ಗಳು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಾಣುತ್ತಿದ್ದಂತೆ ಸಂಸ್ಥೆಯು ಎಫ್‌ಪಿಒ ಅನ್ನು ವಿತ್‌ಡ್ರಾ ಮಾಡಿದೆ. ಈಗ ಮತ್ತೊಂದು ಬಿಡ್ಡಿಂಗ್ ಅನ್ನು ಅದಾನಿ ಗ್ರೂಪ್ ಕೈಬಿಟ್ಟಿದೆ.
ಹೌದು, ಅದಾನಿ ಗ್ರೂಪ್‌ನ ಅದಾನಿ ಪವರ್ ಸುಮಾರು 7,017 ಕೋಟಿ ರೂಪಾಯಿಗೆ ಡಿಬಿ ಪವರ್ ಅನ್ನು ಖರೀದಿ ಮಾಡಲು ಎಲ್ಲ ಮಾತುಕತೆಯನ್ನು ನಡೆಸಿತ್ತು. ಆದರೆ ಬುಧವಾರ ಈ ಖರೀದಿ ಪ್ರಕ್ರಿಯೆಯಲ್ಲಿ ಹಣಕಾಸು ವಹಿವಾಟಿನ ಗಡುವು ಕೊನೆಯಾಗಿದ್ದು, ಈ ಬಿಡ್ಡಿಂಗ್ ಅದಾನಿ ಪವರ್‌ನ ಕೈ ಜಾರಿದೆ.
ಜನವರಿ 24ರಂದು ಯುಎಸ್ ಮೂಲದ ಹಿಂಡನ್‌ಬರ್ಗ್ ಸಂಶೋಧನೆಯು ವರದಿಯೊಂದನ್ನು ಮಾಡಿದೆ. ಈ ವರದಿಯಲ್ಲಿ ಅದಾನಿ ಗ್ರೂಪ್ ಹಲವಾರು ವಂಚನೆಗಳನ್ನು ನಡೆಸಿದೆ ಎಂಬ ಆರೋಪವನ್ನು ಮಾಡಿದೆ. ಇದಾದ ಬಳಿಕ ನಿರಂತರವಾಗಿ ಅದಾನಿ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ಕಾಣುತ್ತಿದೆ. ಅದಾನಿ ಮಾರುಕಟ್ಟೆ ಮೌಲ್ಯವು ಅರ್ಧದಷ್ಟು ಕುಸಿತ ಕಂಡಿದೆ. ಈ ಬಗ್ಗೆ ಇಲ್ಲದೆ ಅಧಿಕ ಮಾಹಿತಿ..

ಡಿಬಿ ಪವರ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದ ಅದಾನಿ ಪವರ್
ಡಿಬಿ ಪವರ್ ಖರೀದಿ ಮಾಡುವ ಒಪ್ಪಂದಕ್ಕೆ ಅದಾನಿ ಪವರ್ 2022, ಆಗಸ್ಟ್ 18ರಂದು ಸಹಿ ಮಾಡಿದೆ. ಅಕ್ಟೋಬರ್ 31, 2022ಕ್ಕೆ ಎಲ್ಲ ಪ್ರಕ್ರಿಯೆ ಕೊನೆಗೊಳಿಸುವ ನಿರ್ಧಾರವನ್ನು ಮಾಡಿತ್ತು. ಆದರೆ ಹಲವಾರು ಬಾರಿ ಈ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಈಗ ಗಡುವು ವಿಸ್ತರಣೆ ಮಾಡದ ಡಿಬಿ ಪವರ್ ಈ ಬಿಡ್ಡಿಂಗ್ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಳಿಸಿದೆ.
ಡಿಬಿ ಪವರ್ ಛತ್ತೀಸ್‌ಗಢದ ಜಂಗ್‌ಜಿರ್‌ನಲ್ಲಿ 1,200 ಮೆಗಾವ್ಯಾಟ್‌ನ ಕೋಲ್ ಪವರ್ ಪ್ಲ್ಯಾಂಟ್ ಅನ್ನು ಹೊಂದಿದೆ. ಸಾಲವನ್ನು ಸೇರಿದಂತೆ ಈ ಸಂಸ್ಥೆಯ ಮೌಲ್ಯವನ್ನು 7,017 ಕೋಟೊ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ಸಂಸ್ಥೆಯ ಮಾರಾಟ ಪ್ರಕ್ರಿಯೆ ಬುಧವಾರ ಮುರಿದುಬಿದ್ದಿದೆ. ವಹಿವಾಟು ಪೂರ್ಣಗೊಳಿಸುವ ಗಡುವನ್ನು ಒಟ್ಟು ನಾಲ್ಕು ಬಾರಿ ವಿಸ್ತರಣೆ ಮಾಡಲಾಗಿದೆ. ಕೊನೆಯ ಗಡುವು ಫೆಬ್ರವರಿ 15, 2023 ಆಗಿತ್ತು.
ಎರಡನೇ ಬಾರಿಗೆ ಹಿಂದೇಟು ಹಾಕಿದ ಅದಾನಿ ಸಂಸ್ಥೆ
ಈ ಹಿಂದೆ ಹಿಂಡನ್‌ಬರ್ಗ್ ವರದಿ ಬಳಿಕ ಸ್ಟಾಕ್ ಮಾರುಕಟ್ಟೆ ಏರಿಳಿತದ ನಡುವೆ ಅದಾನಿ ಗ್ರೂಪ್ ಎಫ್‌ಪಿಒ ಅನ್ನು ವಿತ್‌ಡ್ರಾ ಮಾಡಿಕೊಳ್ಳುವ ಮೂಲಕ ವಹಿವಾಟಿಗೆ ಅದಾನಿ ಸಂಸ್ಥೆ ಹಿಂದೇಟು ಆಗಿದೆ. ಈಗ ಡಿಬಿ ಪವರ್ ಡೀಲ್ ತೊರೆಯುವ ಮೂಲಕ ಎರಡನೇ ಬಾರಿಗೆ ಅದಾನಿ ಸಂಸ್ಥೆಯು ಹಿಂದೇಟು ಹಾಕಿದೆ. 2022ರಲ್ಲಿ ಡಿಬಿ ಡೀಲ್ ಅನ್ನು ಘೋಷಣೆ ಮಾಡಲಾಗಿದೆ.
ಅದಾನಿ ಪವರ್ 13.6 ಗಿಗಾ ವ್ಯಾಟ್ ಸಾಮರ್ಥ್ಯದ ಒಟ್ಟು 7 ಪ್ಲ್ಯಾಂಟ್‌ಗಳನ್ನು ಹೊಂದಿದೆ. ಐದು ರಾಜ್ಯಗಳಲ್ಲಿ ಈ ಪ್ಲ್ಯಾಂಟ್‌ಗಳು ಇದೆ. 40 ಮೆಗಾ ವ್ಯಾಟ್‌ನ ಸೋಲರ್ ಪ್ಲ್ಯಾಂಟ್ ಕೂಡಾ ಇದೆ. ಸಂಸ್ಥೆಯು ಸೆಪ್ಟೆಂಬರ್ 30, 2022ರ ಲೆಕ್ಕಾಚಾರದ ಪ್ರಕಾರ 36,031 ಕೋಟಿ ಸಾಲವನ್ನು ಹೊಂದಿದೆ.


Click it and Unblock the Notifications