ಅದಾನಿ ಗ್ರೂಪ್ ಸ್ಟಾಕ್‌ಗಳು ಶುಕ್ರವಾರ (ಜೂನ್ 23) ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಸುಮಾರು ಶೇಕಡ 6ರಷ್ಟು ಇಳಿಕೆಯನ್ನು ಕಂಡಿದೆ. ಬಿಎಸ್‌ಇಯಲ್ಲಿ ವಹಿವಾಟಿನ ಮಧ್ಯದಲ್ಲಿ ಸ್ಟಾಕ್‌ಗಳು ಇಳಿಕೆಯನ್ನು ಕಂಡಿದೆ. ಅದಾನಿ ಸ್ಟಾಕ್ ಕುಸಿತ ಕಾಣಲು ಈ ಹಿಂದಿನಂತೆಯೇ ಹಿಂಡನ್‌ಬರ್ಗ್ ವರದಿಯೇ ಕಾರಣವಾಗಿದೆ.
ಹೌದು ಹಿಂಡನ್‌ಬರ್ಗ್ ವರದಿಯ ಎಫೆಕ್ಟ್ ಸಂಸ್ಥೆಯ ಮೇಲೆ ಉಂಟು ಮಾಡುವ ಪರಿಣಾಮವು ಇನ್ನೂ ಕೂಡಾ ನಿಯಂತ್ರಣಕ್ಕೆ ಬಂದಿಲ್ಲ. ಜೂನ್ 23ರಂದು ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ಹತ್ತು ಸ್ಟಾಕ್‌ಗಳು ಕೂಡಾ ಭಾರೀ ಕುಸಿತವನ್ನು ಕಂಡಿದೆ. ವಹಿವಾಟಿನ ಆರಂಭದಲ್ಲಿಯೇ ನಷ್ಟದೊಂದಿಗೆ ಅದಾನಿ ಸ್ಟಾಕ್‌ಗಳು ವಹಿವಾಟು ಆರಂಭ ಮಾಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಒಟ್ಟಾಗಿ 52,000 ಕೋಟಿ ರೂಪಾಯಿ ನಷ್ಟ
ಅದಾನಿ ಗ್ರೂಪ್‌ನ 10 ಸ್ಟಾಕ್‌ಗಳು ಕೂಡಾ ಶುಕ್ರವಾದ ನಷ್ಟವನ್ನು ಕಂಡಿದ್ದು, ಶುಕ್ರವಾರದ ಈವರೆಗಿನ ವಹಿವಾಟಿನಲ್ಲಿ ಅದಾನಿ ಗ್ರೂಪ್ ಒಟ್ಟಾಗಿ 52,000 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಇದು ಸ್ಟಾಕ್ ಮಾರುಕಟ್ಟೆಯಲ್ಲಿನ ಅತೀ ದೊಡ್ಡ ನಷ್ಟವಾಗಿದೆ. ಕಳೆದ ಬಾರಿ ಫೆಬ್ರವರಿ 9ರಂದು ಅದಾನಿ ಗ್ರೂಪ್ ಸುಮಾರು 59,538 ಕೋಟಿ ರೂಪಾಯಿಯಷ್ಟು ನಷ್ಟವನ್ನು ಕಂಡಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಅದಾನಿ ಗ್ರೂಪ್ ತನ್ನ ಅಮೇರಿಕನ್ ಹೂಡಿಕೆದಾರರಿಗೆ ಯಾವ ಪ್ರಾತಿನಿಧ್ಯವನ್ನು ನೀಡಿದೆ ಎಂದು ಯುಎಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ವಂಚನೆಯನ್ನು ಮಾಡಿದೆ ಎಂಬ ಹಿಂಡನ್‌ಬರ್ಗ್ ಆರೋಪದ ಕಾರಣದಿಂದಾಗಿ ಈ ಪರಿಶೀಲನೆ ಮಾಡಲಾಗುತ್ತಿದೆ ಎಂಬ ಮಾಹಿತಿಯು ಲಭ್ಯವಾಗಿದೆ.
ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯುಎಸ್ ಅಟಾರ್ನಿ ಕಚೇರಿಯು ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಈ ಕಂಪನಿಯಲ್ಲಿ ದೊಡ್ಡ ಹಿಡುವಳಿ ಹೊಂದಿರುವ ಸಾಂಸ್ಥಿಕ ಹೂಡಿಕೆದಾರರ ವಿಚಾರಣೆಗಳನ್ನು ಕಳುಹಿಸಿದೆ. ಈ ವಿಚಾರಣೆಗಳ ಮಾಹಿತಿ ಇರುವ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಅದಾನಿ ಸ್ಟಾಕ್‌ಗಳು ಇಳಿಕೆ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್: ಪ್ರಸ್ತುತ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 5.18ರಷ್ಟು ಇಳಿಕೆಯಾಗಿ 2,273.00 ರೂಪಾಯಿಗೆ ತಲುಪಿದೆ. ವಹಿವಾಟಿನ ಮಧ್ಯದಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಮೌಲ್ಯವು ಶೇಕಡ 6ರಷ್ಟು ಇಳಿಕೆಯಾಗಿ 2,251 ರೂಪಾಯಿಗೆ ತಲುಪಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್: ಅದಾನಿ ಗ್ರೂಪ್‌ನ ಇನ್ನೊಂದು ಸ್ಟಾಕ್ ಆದ ಅದಾನಿ ಗ್ರೀನ್ ಎನರ್ಜಿಯು ವಹಿವಾಟಿನ ಮಧ್ಯದಲ್ಲಿ ಸುಮಾರು ಶೇಕಡ 3ರಷ್ಟು ಕುಸಿತ ಕಂಡಿದೆ. ಈ ಸಮಯಕ್ಕೆ ಅದಾನಿ ಗ್ರೀನ್ ಎನರ್ಜಿಯ ಸ್ಟಾಕ್ ಮಾರುಕಟ್ಟೆ ಮೌಲ್ಯವು ಶೇಕಡ 2.09ರಷ್ಟು ಇಳಿಕೆಯಾಗಿ 954.50 ರೂಪಾಯಿ ಆಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್: ಮಧ್ಯಂತರ ವಹಿವಾಟಿನಲ್ಲಿ ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸ್ಟಾಕ್ ಶೇಕಡ 2ರಿಂದ ಶೇಕಡ 4ರಷ್ಟು ಕುಸಿತ ಕಂಡಿದೆ. ಅದಾನಿ ಟ್ರಾನ್ಸ್‌ಮಿಷನ್‌ನ ಈ ಸಮಯಕ್ಕೆ ಶೇಕಡ 4.71ರಷ್ಟು ಇಳಿಕೆಯಾಗಿ ಮಾರುಕಟ್ಟೆ ಬೆಲೆಯು 766.50 ರೂಪಾಯಿ ಆಗಿದೆ.
ಅದಾನಿ ವಿಲ್ಮಾರ್ ಲಿಮಿಟೆಡ್: ವಹಿವಾಟಿನ ಮಧ್ಯದಲ್ಲಿ ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 2ರಷ್ಟು ಇಳಿಕೆಯಾಗಿದೆ. ಪ್ರಸ್ತುತ ವಹಿವಾಟಿನಲ್ಲಿ ಅದಾನಿ ವಿಲ್ಮಾರ್ ಲಿಮಿಟೆಡ್ ಸ್ಟಾಕ್ ಶೇಕಡ 2.85ರಷ್ಟು ಇಳಿಕೆಯಾಗಿ 406.25 ರೂಪಾಯಿಗೆ ತಲುಪಿದೆ.
ಅದಾನಿ ಟೋಟಲ್ ಗ್ಯಾಸ್: ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಶೇಕಡ 3ರಷ್ಟು ಕುಸಿತ ಕಂಡಿದೆ. ಈ ಸಮಯಕ್ಕೆ ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಶೇಕಡ 3.06ರಷ್ಟು ಇಳಿಕೆಯಾಗಿ, 635.10 ರೂಪಾಯಿಗೆ ತಲುಪಿದೆ.
ಅದಾನಿ ಪವರ್ ಲಿಮಿಟೆಡ್: ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಶೇಕಡ 4ರಷ್ಟು ಇಳಿಕೆಯಾಗಿ 246.25 ರೂಪಾಯಿಗೆ ತಲುಪಿದೆ. ಈ ಸಮಯಕ್ಕೆ ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ಶೇಕಡ 3.82ರಷ್ಟು ಇಳಿಕೆಯಾಗಿ 246.80 ರೂಪಾಯಿಗೆ ತಲುಪಿದೆ.
ಎನ್‌ಡಿಟಿವಿ: ವಹಿವಾಟಿನ ಮಧ್ಯದಲ್ಲಿ ನ್ಯೂ ದೆಲ್ಲಿ ಟೆಕಿವಿಜನ್ ಲಿಮಿಟೆಡ್‌ನ ಷೇರುಗಳು ಶೇಕಡ 2ರಷ್ಟು ಇಳಿಕೆಯಾಗಿದೆ. ಈ ಸಮಯಕ್ಕೆ ಎನ್‌ಡಿಟಿವಿ ಷೇರು ಶೇಕಡ 2.90ರಷ್ಟು ಇಳಿಕೆಯಾಗಿ, 216.00 ರೂಪಾಯಿಗೆ ತಲುಪಿದೆ.
ಅಂಬುಜಾ ಸಿಮೆಂಟ್: ವಹಿವಾಟಿನ ಮಧ್ಯದಲ್ಲಿ ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3ರಷ್ಟು ಕುಸಿತ ಕಂಡಿದೆ. ಈ ಸಮಯಕ್ಕೆ ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3.05ರಷ್ಟು ಇಳಿಕೆಯಾಗಿದ್ದು 431.30 ರೂಪಾಯಿಗೆ ತಲುಪಿದೆ.
ಎಸಿಸಿ: ಜೂನ್ 2ರಂದು ವಹಿವಾಟಿನ ಮಧ್ಯದಲ್ಲಿ ಎಸಿಸಿ ಸ್ಟಾಕ್ ಶೇಕಡ 2ರಷ್ಟು ಇಳಿಕೆ ಕಂಡಿದೆ. ಇನ್ನು ಈ ಸಮಯಕ್ಕೆ ಎಸಿಸಿ ಸ್ಟಾಕ್ ಶೇಕಡ 2.58ರಷ್ಟು ಇಳಿಕೆಯಾಗಿ, 1,784.45 ರೂಪಾಯಿಗೆ ತಲುಪಿದೆ.


Click it and Unblock the Notifications