Q3 Results: ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ರೂ. ನಿವ್ವಳ ಲಾಭ

ಅದಾನಿ ಎಂಟರ್‌ಪ್ರೈಸಸ್ ತನ್ನ ಮೂರನೇ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದೆ. ಅದಾನಿ ಎಂಟರ್‌ಪ್ರೈಸಸ್ ಡಿಸೆಂಬರ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ 820 ಕೋಟಿ ರೂಪಾಯಿ ಲಾಭವನ್ನು ಕಂಡಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 11.36 ಕೋಟಿ ರೂಪಾಯಿ ನಷ್ಟವನ್ನು ಅದಾನಿ ಎಂಟರ್‌ಪ್ರೈಸಸ್ ಕಂಡಿದೆ.

ಇನ್ನು ಮೂರನೇ ತ್ರೈಮಾಸಿಕದಲ್ಲಿ ಆದಾಯವು ಶೇಕಡ 42ರಷ್ಟು ಏರಿಕೆಯಾಗಿ 26,612.23 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಆಪರೇಟಿಂಗ್ ಲಾಭ, ಬಡ್ಡಿದರ, ತೆರಿಗೆ ಎಲ್ಲ ಲೆಕ್ಕಾಚಾರದ ಬಳಿಕ ಉಂಟಾಗುವ ಲಾಭವು ದುಪ್ಪಟ್ಟಾಗಿದ್ದು, 1,968 ಕೋಟಿ ರೂಪಾಯಿಗೆ ತಲುಪಿದೆ. ಸಂಸ್ಥೆಯ ಬೆಳವಣಿಗೆಯೂ ವರ್ಷದಿಂದ ವರ್ಷಕ್ಕೆ ಶೇಕಡ 38ರಷ್ಟು ಏರಿಕೆಯಾಗಿ 17,595ಕ್ಕೆ ತಲುಪಿದೆ. ಮೈನಿಂಗ್ ವಹಿವಾಟು 3 ಪಟ್ಟು ಏರಿಕೆಯಾಗಿ, 2,044 ಕೋಟಿ ರೂಪಾಯಿ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಸ್ಥ ಗೌತಮ್ ಅದಾನಿ, "ಮಾರುಕಟ್ಟೆಯಲ್ಲಿನ ಅಸ್ಥಿರತೆ ಶಾಶ್ವತವಲ್ಲ. ಸಂಸ್ಥೆಯು ಎಂದಿಗೂ ಕೂಡಾ ತನ್ನ ಬೆಳವಣಿಗೆಯ ಬಗ್ಗೆ ಕಾರ್ಯಕರ್ತ ರೂಪಿಸಿದೆ," ಎಂದು ತಿಳಿಸಿದ್ದಾರೆ. ಇನ್ನು ಹಿಂಡನ್‌ಬರ್ಗ್ ವರದಿಯ ಬಳಿಕ ಅದಾನಿ ಎಂಟರ್‌ಪ್ರೈಸಸ್ ಷೇರು ಭಾರೀ ಇಳಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

Q3 Results: ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ರೂ. ನಿವ್ವಳ ಲಾಭ

ಈಗಲೂ ನಂಬರ್‌ ವನ್ ಸಂಸ್ಥೆ

ನ್ಯೂ ಎನರ್ಜಿ ಇಕೋಸಿಸ್ಟಮ್ ಆದಾಯವು ದುಪ್ಪಟ್ಟಾಗಿದ್ದು, 1,427.40 ಕೋಟಿ ರೂಪಾಯಿಗೆ ತಲುಪಿದೆ. ಏರ್‌ಪೋರ್ಟ್ ವಹಿವಾಟಿನಲ್ಲಿಯು ಆದಾಯವು ದುಪ್ಪಟ್ಟಾಗಿ 1,733 ಕೋಟಿ ರೂಪಾಯಿಗೆ ಆಗಿದೆ. ಹೊಸ ಎನರ್ಜಿ ಸಂಸ್ಥೆಯ ಮೌಲ್ಯವು ಶೇಕಡ 63ರಷ್ಟು ಏರಿಕೆಯಾಗಿದೆ. ಮೈನಿಂಗ್ ವಹಿವಾಟಿನಲ್ಲಿ ಉತ್ಪಾದನಾ ಮೌಲ್ಯವು 6.2 ಮಿಲಿಯನ್ ಟನ್ ಆಗಿದೆ. ಆದರೆ ಸಂಸ್ಥೆಯು ಭಾರತದಲ್ಲಿ ಈಗಲೂ ನಂಬರ್‌ ವನ್ ಆಗಿದೆ. ಆದರೆ ಹಿಂಡನ್‌ಬರ್ಗ್ ವರದಿ ಬಳಿಕ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದೆ.

ಅದಾನಿ ಸ್ಟಾಕ್ ನಿರಂತರವಾಗಿ ಕುಸಿತ ಕಾಣುತ್ತಿದೆ. ಇದಕ್ಕಾಗಿ ಅದಾನಿ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ ಅದಾನಿ ಸಂಸ್ಥೆಯು 1,114 ಮಿಲಿಯನ್ ಡಾಲರ್ ಸಾಲ ಪೂರ್ವ ಪಾವತಿ ಮಾಡುವ ಘೋಷಣೆ ಮಾಡಿದೆ. ಇದಾದ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಕೊಂಚ ಏರಿಕೆಯಾಗಿದೆ.

ಏನಿದು ಹಿಂಡನ್‌ಬರ್ಗ್ ವರದಿ?

ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್‌ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್‌ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್‌ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಷೇರು ಮಾರುಕಟ್ಟೆಯಲ್ಲಿ ನಕಲಿ ಷೇರುಗಳ ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+