ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿಯ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ನಷ್ಟವನ್ನು ಕಂಡಿದೆ. ಆದರೆ ಕಳೆದ ಎರಡು ದಿನಗಳಿಂದ ಅದಾನಿ ಗ್ರೂಪ್ ಸ್ಟಾಕ್ ಭಾರೀ ಏರಿಕೆಯಾಗುತ್ತಿದೆ. ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 30ರಷ್ಟು ಏರಿಕೆಯಾಗಿದೆ. ಅದಾನಿ ಗ್ರೂಪ್‌ನ ನಿವ್ವಳ ಆದಾಯವು 39,000 ಕೋಟಿ ರೂಪಾಯಿ ಏರಿಕೆಯಾಗಿ, 7.50 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್‌ಎಸ್‌ಇ) ಶೇಕಡ 15ರಷ್ಟು ಏರಿಕೆಯಾಗಿ 1563 ರೂಪಾಯಿ ಆಗಿದೆ. ನಿಫ್ಟಿ 50 ಗೇನರ್‌ಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಕೂಡಾ ಒಂದಾಗಿದೆ. ಕಳೆದ 2 ದಿನಗಳಲ್ಲಿ ಅದಾನಿ ಸ್ಟಾಕ್ ಶೇಕಡ 30ರಷ್ಟು ಏರಿದೆ. ಮಂಗಳವಾರ ವಹಿವಾಟಿನ ಅಂತ್ಯದ ಬಳಿಕ ಅದಾನಿ ಸ್ಟಾಕ್ ಶೇಕಡ 14ರಷ್ಟು ಹೆಚ್ಚಾಗಿದೆ. ಇಂದು ಶೇಕಡ 15ರಷ್ಟು ಹೆಚ್ಚಾಗಿ 1563.00ಕ್ಕೆ ತಲುಪಿದೆ.

ಮತ್ತೆ ಹೆಚ್ಚಳವಾಗುತ್ತಿರುವ ಅದಾನಿ ಗ್ರೂಪ್
ಅದಾನಿ ಪೋರ್ಟ್ಸ್ ಶೇಕಡ 2.64ರಷ್ಟು ಏರಿಕೆಯಾಗಿ, 608.25 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 2.27ರಷ್ಟು ಹೆಚ್ಚಳವಾಗಿದ್ದು, 349.80 ರೂಪಾಯಿಗೆ ತಲುಪಿದೆ. ಎಸಿಸಿ ಶೇಕಡ 1.33ರಷ್ಟು ಹೆಚ್ಚಾಗಿ, 1,755.25 ರೂಪಾಯಿಗೆ ತಲುಪಿದೆ. ಇನ್ನು ಅದಾನಿಯ 6 ಸ್ಟಾಕ್‌ಗಳಾದ ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ವಿಲ್ಮಾರ್, ಅದಾನಿ ಗ್ರೀನ್ ಎನರ್ಜಿ, ಎನ್‌ಡಿಟಿವಿ ಮತ್ತು ಅದಾನಿ ಪವರ್ ಶೇಕಡ 5ರಷ್ಟು ಏರಿಕೆಯಾಗಿದೆ.
ಸಂಸ್ಥೆಗೆ 800 ಮಿಲಿಯನ್ ಡಾಲರ್ ಸಾಲ ಸೌಲಭ್ಯ ಲಭ್ಯವಾದ ಬಗ್ಗೆ ವರದಿಯಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಏರಿಕೆಯಾಗಿದೆ. ಈ ಮೊತ್ತವನ್ನು ಅದಾನಿ ಗ್ರೀನ್ ಎನರ್ಜಿ ರಿಫೈನಾನ್ಸ್‌ಗಾಗಿ 750 ಮಿಲಿಯನ್ ಡಾಲರ್ ಬಳಸಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಅದಾನಿ ಗ್ರೂಪ್ ಹಣಕಾಸು ಮುಖ್ಯಸ್ಥ ಜುಗ್‌ಶಿಂದರ್ ಸಿಂಗ್, ರಿಫೈನಾನ್ಸ್‌ನ ಮುನ್ನೋಟವನ್ನು ನಾವು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಅದಾನಿ ಸಂಸ್ಥೆಯು 1,114 ಮಿಲಿಯನ್ ಡಾಲರ್ ಸಾಲ ಪೂರ್ವ ಪಾವತಿ ಮಾಡುವುದಾಗಿ ಹೇಳಿದೆ. ಇದಾದ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಏರಿಕೆಯಾಗಿದೆ. ಈ ನಡುವೆ ತಮ್ಮ ಪ್ರಾಯೋಜಕರು 1,114 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿ, ಗ್ರೂಪ್‌ನ ಸಂಸ್ಥೆಗಳ ಷೇರುಗಳನ್ನು ರಿಲೀಸ್ ಮಾಡುತ್ತಾರೆ ಎಂದು ಸೋಮವಾರ ಅದಾನಿ ಎಂಟರ್‌ಪ್ರೈಸಸ್‌ನ ಮೂಲ ಸಂಸ್ಥೆ ಅದಾನಿ ಗ್ರೂಪ್ ಹೇಳಿಕೊಂಡಿದೆ.


Click it and Unblock the Notifications